Browsing Category
ಸುದ್ದಿ
ದಸರಾ–ದೀಪಾವಳಿ ನಿಮಿತ್ತ ಕಲಬುರಗಿ ಮಾರ್ಗದಲ್ಲಿ ವಿಶೇಷ ರೈಲುಗಳ ಸಂಚಾರ
ಕಲಬುರಗಿ: ದಸರಾ ಮತ್ತು ದೀಪಾವಳಿ ಹಬ್ಬಗಳ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸುವ ಉದ್ದೇಶದಿಂದ ಕೇಂದ್ರ ರೈಲ್ವೆಯ ಸೋಲಾಪುರ ವಿಭಾಗವು ಕಲಬುರಗಿ ಸೇರಿದಂತೆ ವಿವಿಧ ಮಾರ್ಗಗಳಲ್ಲಿ ಒಟ್ಟು 102 ಟ್ರಿಪ್ ಗಳ ವಿಶೇಷ ಉತ್ಸವ ರೈಲುಗಳ ಸಂಚಾರವನ್ನು ನಡೆಸಲಿದೆ.…
ಕನ್ಹೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ಶಾಶ್ವತ ಗಡಿಪಾರಿಗೆ ಆಗ್ರಹ
ಕಲಬುರಗಿ: ಬಸವಾದಿ ಶರಣರ ತತ್ವ ಹಾಗೂ ವಚನ ಸಾಹಿತ್ಯವನ್ನು ತಿರುಚಿ ಹಿಂದುತ್ವದೊಂದಿಗೆ ಬೆಸೆಯುವ ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿ, ಕನ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ವಿರುದ್ಧ ಕ್ರಮ ಕೈಗೊಂಡು ಅವರನ್ನು ಕರ್ನಾಟಕದಿಂದ ಶಾಶ್ವತವಾಗಿ ಗಡಿಪಾರು ಮಾಡಬೇಕು ಎಂದು ಬಸವ ತತ್ವ…
ಆಳಂದ ಬಸ್ ನಿಲ್ದಾಣ ಕಾಮಗಾರಿ ಮುಗಿಯುವುದು ಯಾವಾಗ?
ಆಳಂದ ಪಟ್ಟಣದ ಬಸ್ ನಿಲ್ದಾಣದ ಕಾಮಗಾರಿ ಯಾವಾಗ ಪೂರ್ಣಗೊಳ್ಳಲಿದೆ ಎಂಬ ಪ್ರಶ್ನೆ ಇದೀಗ ಸಾರ್ವಜನಿಕರ ತಾಳ್ಮೆಯ ಮಿತಿಯನ್ನು ಪರೀಕ್ಷಿಸುತ್ತಿದೆ. ಬಸ್ ನಿಲ್ದಾಣದ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರು, ವಿದ್ಯಾರ್ಥಿಗಳು, ವೃದ್ಧರು, ಮಹಿಳೆಯರು ಹಾಗೂ ದೂರದ…
ಕಲ್ಯಾಣ ಕರ್ನಾಟಕದ ಮೂಲಭೂತ ಸಮಸ್ಯೆಗಳಿಗೆ ಮುಕ್ತಿ ಯಾವಾಗ?
ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ವಿಚಾರ ಬಂದಾಗಲೆಲ್ಲಾ ಅನುದಾನ, ಯೋಜನೆ, ವಿಶೇಷ ಸ್ಥಾನಮಾನ ಮತ್ತು ಅಭಿವೃದ್ಧಿ ಮಂಡಳಿಯಂತಹ ಪದಗಳು ಮುನ್ನೆಲೆಗೆ ಬರುತ್ತವೆ. ಆದರೆ ನೆಲಮಟ್ಟದ ಪ್ರಶ್ನೆ ಮಾತ್ರ ಇನ್ನೂ ಅದೇ—ಈ ಪ್ರದೇಶದ ಜನರಿಗೆ ಮೂಲಭೂತ ಸೌಲಭ್ಯಗಳು ಸಂಪೂರ್ಣವಾಗಿ ಯಾವಾಗ ದೊರೆಯುತ್ತವೆ?
ಬೀದರ್,…
ಪೌರಕಾರ್ಮಿಕರ ಬಟ್ಟೆ ಧರಿಸಿ, ಅವರ ಜೊತೆ ಊಟ ಮಾಡಿದರೆ ಸಮಸ್ಯೆ ಬಗೆಹರಿಯುತ್ತದೆಯೇ? — ಸಾಂಕೇತಿಕ ಗೌರವದಾಚೆಗೆ ಬೇಕಿದೆ…
ಪೌರಕಾರ್ಮಿಕರ ದಿನಾಚರಣೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪೌರಕಾರ್ಮಿಕರ ಸಮವಸ್ತ್ರ ಧರಿಸಿ, ಅವರೊಂದಿಗೆ ಊಟ ಮಾಡಿರುವುದು ಗಮನ ಸೆಳೆದಿದೆ. ಸೆ.25ರಂದು ನಡೆದ ಕಾರ್ಯಕ್ರಮದಲ್ಲಿ ಅವರು ಪೌರಕಾರ್ಮಿಕರ ಸೇವೆಯನ್ನು ಗೌರವಿಸಿದ್ದು, ತಿಂಡಿ ಭತ್ಯೆಯನ್ನು ₹35ರಿಂದ…
ಪುಸ್ತಕಗಳಿಂದ ಜೀವಂತ ಆದರ್ಶದ ಪಾಠ: ಡಾ. ಸ್ವಾಮಿರಾವ್ ಕುಲಕರ್ಣಿ
ಕಲಬುರಗಿ: ಪುಸ್ತಕಗಳು ವ್ಯಕ್ತಿಗೆ ಸಂಸ್ಕಾರ ಮತ್ತು ಸಂಸ್ಕೃತಿಯ ಅರಿವು ಮೂಡಿಸುವುದರ ಜೊತೆಗೆ ಜೀವನದಲ್ಲಿ ಸಾಧನೆಯತ್ತ ಸಾಗಲು ಮಾರ್ಗದರ್ಶನ ನೀಡುತ್ತವೆ. ಪುಸ್ತಕಗಳು ಜೀವಂತ ಆದರ್ಶಗಳ ಪಾಠ ಕಲಿಸುವ ಮೂಲಕ ಬದುಕಿಗೆ ದಾರಿದೀಪವಾಗುತ್ತವೆ ಎಂದು ಹಿರಿಯ ಸಾಹಿತಿ ಡಾ. ಸ್ವಾಮಿರಾವ್ ಕುಲಕರ್ಣಿ ಹೇಳಿದರು.…
ಪರಂಪರೆಯ ಅರಿವಿನಿಂದ ಭವಿಷ್ಯ ಸಂರಕ್ಷಣೆ ಸಾಧ್ಯ: ಜಿಲ್ಲಾಧಿಕಾರಿ ಇಕ್ರಮ್ ಶರೀಫ್
ಕಲಬುರಗಿ: ಐತಿಹಾಸಿಕ ಹಾಗೂ ಸಾಂಸ್ಕೃತಿಕ ಪರಂಪರೆಯ ಅರಿವಿನಿಂದಲೇ ಅದನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸಲು ಸಾಧ್ಯ. ವಿದ್ಯಾರ್ಥಿಗಳು ಹಾಗೂ ಯುವಜನರು ಜಿಲ್ಲೆಯ ಐತಿಹಾಸಿಕ ತಾಣಗಳಿಗೆ ಭೇಟಿ ನೀಡಿ ಅವುಗಳ ಮಹತ್ವವನ್ನು ಅರಿತುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಹೇಳಿದರು.
ವಿಶ್ವ…
ಖಾಲಿ ಕೊಡಗಳೊಂದಿಗೆ ನಿವಾಸಿಗಳ ಪ್ರತಿಭಟನೆ
ಕಲಬುರಗಿ: ನಗರದ ವಾರ್ಡ್ ನಂ. ೫೨ರ ಅಕ್ಕಮಹಾದೇವಿ ಕಾಲೋನಿ, ದುರ್ಗಾಶಕ್ತಿ ಕಾಲೋನಿ, ವೀರಭದ್ರೇಶ್ವರ ಕಾಲೋನಿ, ಜಯತೀರ್ಥ ನಗರ, ನವಲದೆ ಲೇಔಟ್, ಶ್ರೀದತ್ತ ನಗರ ಹಾಗೂ ದೇಶಪಾಂಡೆ ನಗರ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿರುವುದನ್ನು ಖಂಡಿಸಿ ನಿವಾಸಿಗಳು ಪ್ರತಿಭಟನೆ…
ಎನ್‌ಎಸ್‌ಎಸ್ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಬೆಳೆಸುತ್ತದೆ: ಡಾ. ರಾಜಶೇಖರ ಬೀರನಳ್ಳಿ
ಕಲಬುರಗಿ: ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಕೇವಲ ಸಮಾಜ ಸೇವೆಯ ಕಾರ್ಯಕ್ರಮವಲ್ಲ. ವಿದ್ಯಾರ್ಥಿಗಳಲ್ಲಿ ಸೇವೆ, ಶಿಸ್ತು, ಜವಾಬ್ದಾರಿ, ನಾಯಕತ್ವ ಹಾಗೂ ದೇಶಭಕ್ತಿಯ ಮನೋಭಾವವನ್ನು ಬೆಳೆಸುವ ಮಹತ್ವದ ಚಳವಳಿಯಾಗಿದೆ ಎಂದು ಹೈಕ ಶಿಕ್ಷಣ ಸಂಸ್ಥೆಯ ಎಂ.ಎಸ್. ಇರಾಣಿ ಪದವಿ ಮಹಾವಿದ್ಯಾಲಯದ…
ಸಾಮಾಜಿಕ ಪರಿವರ್ತನೆ, ರಾಷ್ಟ್ರ ನಿರ್ಮಾಣದಲ್ಲಿ ಎನ್‌ಎಸ್‌ಎಸ್ ಪಾತ್ರ ಮಹತ್ವದ್ದು: ಪ್ರೊ. ಘಂಟಾ ರಮೇಶ್
ಕಲಬುರಗಿ: ಸಾಮಾಜಿಕ ಪರಿವರ್ತನೆ ಹಾಗೂ ರಾಷ್ಟ್ರ ನಿರ್ಮಾಣದಲ್ಲಿ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಮಹತ್ವದ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳು ಸಮುದಾಯದೊಂದಿಗೆ ನೇರವಾಗಿ ಬೆರೆತು, ಅಗತ್ಯವಿರುವವರಿಗೆ ನೆರವಾಗುವ ಮೂಲಕ ಸಮಾಜದ ಅಭಿವೃದ್ಧಿಗೆ ಸಕ್ರಿಯವಾಗಿ ಕೊಡುಗೆ ನೀಡಬೇಕು ಎಂದು…