Shubhashaya News

ಆಳಂದ: ಚುನಾವಣೆಗೆ ಮೂರು ವರ್ಷವಿರುವಾಗಲೇ ಜೋರಾಯಿತು ಪಕ್ಷಾಂತರ

ಆಳಂದ ಪಟ್ಟಣದ ವಾರ್ಡ ನಂ. 21ರ ಬಂಗಡಿ ಪೀರ್ ಕಾಲೋನಿಯ ಅನೇಕ ಅಲ್ಪ ಸಂಖ್ಯಾತ ಯುವಕರು ಇತ್ತೀಚಿಗೆ ಮಾಜಿ ಶಾಸಕ ಸುಭಾಷ್ ಆರ್ ಗುತ್ತೇದಾರ ನಾಯಕತ್ವದಲ್ಲಿ ವಿಶ್ವಾಸವಿಟ್ಟು ಕಾಂಗ್ರೆಸ್ ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.

ಚುನಾವಣೆ ಸಮಯದಲ್ಲಿ ಜನಪ್ರತಿನಿಧಿಗಳು, ಮುಖಂಡರು, ಕಾರ್ಯಕರ್ತರು ಪಕ್ಷ ಬದಲಾಯಿಸುವುದು ಸಾಮಾನ್ಯ ವಿಷಯ ಆದರೆ ಚುನಾವಣೆಗೆ ಮೂರು ವರ್ಷವಿರುವಾಗಲೇ ಆಳಂದನಲ್ಲಿ ಪಕ್ಷಾಂತರ ಪರ್ವ ಜೋರಾಗಿ ನಡೆಯುತ್ತಿದೆ.
ಆಳಂದ ಪಟ್ಟಣದ ವಾರ್ಡ ನಂ. 21ರ ಬಂಗಡಿ ಪೀರ್ ಕಾಲೋನಿಯ ಅನೇಕ ಅಲ್ಪ ಸಂಖ್ಯಾತ ಯುವಕರು ಇತ್ತೀಚಿಗೆ ಮಾಜಿ ಶಾಸಕ ಸುಭಾಷ್ ಆರ್ ಗುತ್ತೇದಾರ ನಾಯಕತ್ವದಲ್ಲಿ ವಿಶ್ವಾಸವಿಟ್ಟು ಕಾಂಗ್ರೆಸ್ ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು. ಪಕ್ಷಕ್ಕೆ ಸೇರ್ಪಡೆಯಾದ ಕಾರ್ಯಕರ್ತರನ್ನು ಮಾಜಿ ಶಾಸಕರು ಪಕ್ಷದ ಶಾಲು ಹೊದಿಸಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಶಿವಪುತ್ರ ನಡಗೇರಿ, ಮಂಡಲ ಉಪಾಧ್ಯಕ್ಷ ಸುನೀಲ ಹಿರೋಳಿಕರ್, ನಗರ ಅಧ್ಯಕ್ಷ ಬಸವರಾಜ ಹತ್ತರಕಿ, ಯುವ ಮೋರ್ಚಾ ಕಾರ್ಯದರ್ಶಿ ಸುನೀಲ ತಳಕೇರಿ, ಯುವ ನಾಯಕ ಪ್ರಕಾಶ ತೋಳೆ ಸೇರಿದಂತೆ ಅನೇಕರು ಹಾಜರಿದ್ದರು.
ಕ್ಷೇತ್ರದಲ್ಲಿ ಶಾಸಕರ ಲಭ್ಯತೆ ಇಲ್ಲದಿರುವುದು, ಸ್ಥಳೀಯ ಸಮಸ್ಯೆಯನ್ನು ಹೇಳಿಕೊಳ್ಳಲು ಜನಪ್ರತಿನಿಧಿಯಲ್ಲದ ವ್ಯಕ್ತಿಯ ಬಳಿ ಹೋಗುವುದು ಮುಖಂಡರಿಗೆ ಕಾರ್ಯಕರ್ತರಿಗೆ ಇರುಸು ಮುರುಸು ಉಂಟು ಮಾಡುತ್ತಿದೆ ಎಂದು ಅನೇಕರು ಮಾತನಾಡಿಕೊಳ್ಳುತ್ತಿದ್ದಾರೆ.
ಇತ್ತೀಚಿಗೆ ಆಳಂದ ಪಟ್ಟಣದಲ್ಲಿ ಅನೇಕ ಅಲ್ಪ ಸಂಖ್ಯಾತ ಮುಖಂಡರು, ಯುವಕರು ಬೃಹತ ಕಾರ್ಯಕ್ರಮ ಏರ್ಪಡಿಸಿ ಪಕ್ಷ ಸೇರ್ಪಡೆಯಾಗಿದ್ದರು. ನಂತರ ಭೂಸನೂರಿನ ಬಾಬುಗೌಡ ಪಾಟೀಲ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದರು. ಈಗ ಅನೇಕ ಯುವಕರು ಬಿಜೆಪಿ ಸೇರುತ್ತಿರುವುದು ಕೂತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
ಮುಂದಿನ ದಿನಗಳಲ್ಲಿ ಬಹುದೊಡ್ಡ ಮಟ್ಟದ ಪಕ್ಷಾಂತರ ನಡೆಯಲಿದೆ ಎಂದು ವ್ಯಾಖ್ಯಾನಿಸಲಾಗುತ್ತದೆ. ಇದನ್ನು ಮನಗಂಡ ಆಡಳಿತ ಪಕ್ಷದ ನಾಯಕರು ತಮ್ಮ ಪಕ್ಷದ ಪ್ರಮುಖ ಮುಖಂಡರನ್ನು ಎರಡು ಬಸ್‍ಗಳಲ್ಲಿ ಶ್ರೀಶೈಲ ಯಾತ್ರೆ ಕೈಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ ಇದಕ್ಕೆ ಪುರಾವೆಯಂತೆ ಸಾಮಾಜಿಕ ಜಾಲತಾಣಗಳಲ್ಲಿ ಫೋಟೊಗಳು ಹರಿದಾಡುತ್ತಿವೆ.

Comments are closed.

Don`t copy text!