Shubhashaya News

ಕಾಂಗ್ರೆಸ್ ಭ್ರಷ್ಟಾಚಾರ ವಿರುದ್ಧ ಬಿಜೆಪಿ ಸಂಘಟಿತ ಹೋರಾಟ: ಬೇಲ್ದಾಳ

ಆಳಂದ: ಬಿಜೆಪಿ ಆಯೋಜಿಸಿದ್ದ ಸಭೆ ಶಾಸಕ ಶೈಲೇಂದ್ರ ಬೇಲ್ದಾಳ ಉದ್ಘಾಟಿಸಿದರು. ಮಾಜಿ ಶಾಸಕ ಸುಭಾಷ ಗುತ್ತೇದಾರ, ಬಿಜೆಪಿ ಜಿಲ್ಲಾಧ್ಯಕ್ಷ ಅಶೋಕ ಬಗಲಿ, ವಿಠ್ಠಲರಾವ್ ಪಾಟೀಲ, ಹರ್ಷಾನಂದ ಗುತ್ತೇದಾರರ ಇತರರರು ಇದ್ದರು.

ಆಳಂದ: ಇಲ್ಲಿಯ ಶರಣ ಮಂಟಪದಲ್ಲಿ ಶನಿವಾರ ಆಳಂದ ಬಿಜೆಪಿ ಮಂಡಲದ ನೂತನ ಪದಾಧಿಕಾರಿಗಳ ಆಯ್ಕೆ, ಕಾರ್ಯಕಾರಿಣಿ ಸಭೆ ಹಾಗೂ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಬಿಜೆಪಿ ಕಾರ್ಯದರ್ಶಿ ಹಾಗೂ ಬೀದರ ದಕ್ಷಿಣ ಶಾಸಕರಾದ ಶೈಲೇಂದ್ರ ಬೇಲ್ದಾಳೆ, “ಪಕ್ಷ ಸಂಘಟನೆ ಬಲವತ್ತಾಗಿಸುವಲ್ಲಿ ನೂತನ ಪದಾಧಿಕಾರಿಗಳೆಲ್ಲರೂ ನೀಡಲಾದ ಜವಾಬ್ದಾರಿಗಳನ್ನು ನಿμÉ್ಠಯಿಂದ ನಿರ್ವಹಿಸಬೇಕು” ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಅವರು ಕಾರ್ಗಿಲ್ ಯುದ್ಧದ ಇತಿಹಾಸವನ್ನು ಸಂಕ್ಷಿಪ್ತವಾಗಿ ಮೆಲುಕು ಹಾಕಿದರು ಮತ್ತು ದೇಶರಕ್ಷಣೆಗೆ ಶೂರತಮ ಯೋಧರ ಬಲಿದಾನವನ್ನು ಸ್ಮರಿಸಿದರು.
ಬಿಜೆಪಿ ಕಲಬುರ್ಗಿ ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಅಶೋಕ ಬಗಲಿ ಮಾತನಾಡಿ, “ಪಕ್ಷದ ಶಕ್ತಿಯನ್ನು ತಳಮಟ್ಟದವರೆಗೆ ತಲುಪಿಸಲು ಕಾರ್ಯಕರ್ತರು ಒಂದಾಗಿ ದುಡಿಯಬೇಕು” ಎಂದು ಹೇಳಿದರು. ಮಾಜಿ ಶಾಸಕ ಸುಭಾμï ಆರ್. ಗುತ್ತೇದಾರ ಮಾತನಾಡಿ, ಕಾರ್ಯಕರ್ತರು ಒಗ್ಗಟ್ಟಿನಿಂದಾಗಿ ಶಾಸಕರ ಭ್ರಷ್ಟಾರವನ್ನು ಹತ್ತಿಕ್ಕಬೇಕು ಈ ಕುರಿತು ಬರುವ ದಿನಗಳಲ್ಲಿ ಹೋರಾಟಕ್ಕೆ ಸಜ್ಜಾಗಬೇಕು ಎಂದು ಕರೆ ನೀಡಿದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಹμರ್Áನಂದ ಗುತ್ತೇದಾರ ಅವರು ಮಾತನಾಡಿ ಬೂತ ಮಟ್ಟದಿಂದ ಪಕ್ಷ ಸಂಘಟಣೆ ಮಾಡಬೇಕು ಎಂದು ಹೇಳಿದರು ಈ ಸಂದರ್ಭದಲ್ಲಿ ನೂತನವಾಗಿ ಆಯ್ಕೆಯಾದ ಮಂಡಲದ ಪದಾಧಿಕಾರಿಗಳಿಗೆ ಆದೇಶ ಪ್ರತಿ ಪ್ರದಾನ ಮಾಡಲಾಯಿತು. ಸಭೆಯಲ್ಲಿ ಪಕ್ಷದ ಪ್ರಮುಖ ನಾಯಕರು, ಕಾರ್ಯಕರ್ತರು ಮತ್ತು ಸದಸ್ಯರು ಉಪಸ್ಥಿತರಿದ್ದರು. ಮುಂದಿನ ಕಾರ್ಯತಂತ್ರ ಹಾಗೂ ಸಂಘಟನಾ ಬಲವರ್ಧನೆ ಕುರಿತು ಚರ್ಚೆ ನಡೆಯಿತು
ಈ ಸಂರ್ದಬದಲ್ಲಿ ಆಳಂದ ಮಂಡಲದ ಅಧ್ಯಕ್ಷರಾದ ಮಲ್ಲಿಕಾರ್ಜುನ ಕಂದಗೂಳೆ ಜಿಲ್ಲಾ ಪ್ರಧಾನ ಕಾರ್ಯರ್ದಶಿಗಳಾದ ಲಿಂಗರಾಜ ಬಿರಾದಾರ ಜಿಲ್ಲಾ ಕಾರ್ಯದರ್ಶಿ ಸಂತೋಷ ಹಾದಿಮನಿ ಶ್ರೀಶೈಲ ಪಾಟೀಲ,ಮಾಜಿ ಅಧ್ಯಕ್ಷ ಆನಂದ ಪಾಟೀಲ ,ಮಲ್ಲಣ್ಣಾ ನಾಗೂರೆ, ಚಂದ್ರಕಾಂತ ಭೂಸನೂರ ಪಂಡಿತರಾವ ಪಾಟೀಲ, ಶಿವಪ್ಪಾ ವಾರಿಕ, ಶಿವಪುತ್ರ ನಡಗೇರಿ ,ಗೌರಿ ಚಿಚಕೋಟಿ ಸುನಿಲ ಹಿರೋಳಿಕರ , ಗ್ರಾಪಂ ಅಧ್ಯಕ್ಷ ಮೈಬೂಬಭಾಷಾ ಶೇಖ, ರಾಜಶ್ರೀ ಶ್ರೀಶೈಲ ಖಜೂರಿ ಸುನೀತಾ ಪೂಜಾರಿ,ವಂದನಾ ಪೆÇೀದ್ದಾರ,ಮೇಘಾ ಕೋಥಳಿಕರ ಮತ್ತಿತರರು ಇದ್ದರು.
ಕಾರ್ಗಿಲ್ ವಿಜಯೋತ್ಸವ ನಿಮಿತ್ಯ ಶರಣನಗರದ ನಿವೃತ ಯೋದ ಮಲ್ಲಪ್ಪಾ ಕೌಂಚೆ ಅವರನ್ನು ಸನ್ನಾನಿಸಲಾಯಿತು
ಪ್ರಾಸ್ತವಿಕವಾಗಿ ಹμರ್Áನಂದ ಗುತ್ತೇದಾರ ಮಾತನಾಡಿದರು, ನಿರೂಪಣೆ ಪ್ರಕಾಶ ಮಾನೆ, ಸ್ವಾಗತ ಸೀತರಾಮ ಜಮಾದಾರ.ವಂದಾನರ್ಪಣೆ ವಿನೋದ ಮಡಿವಾಳ ವಂದಿಸಿದರು.

Comments are closed.

Don`t copy text!