Shubhashaya News

ತಾಲೂಕು ಅಂಬೇಡ್ಕರ್ ಸೇವಾ ಸಮಿತಿಗೆ ಶ್ರಿಂಗೇರಿ ಅಧ್ಯಕ್ಷ

ಆಳಂದ: ಅಂಬೇಡ್ಕರ್ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಬುದ್ದೇಶ್ ಸಿಂಗೆ ಅವರು ಕಿಣ್ಣಿಸುಲ್ತಾನ ಗ್ರಾಮದ ಮಲ್ಲಿಕಾರ್ಜುನ ಶ್ರೀಂಗೇರಿ ಅವರನ್ನು ತಾಲೂಕು ಅಧ್ಯಕ್ಷರನ್ನಾಗಿ ಆಯ್ಕೆಮಾಡಿ ಪ್ರಮಾಣ ಪತ್ರ ನೀಡಿದರು.

ಆಳಂದ: ತಾಲೂಕಿನ ಕಿಣ್ಣಿಸುಲ್ತಾನ್ ಗ್ರಾಮದ ಮಲ್ಲಿಕಾರ್ಜುನ್ ಶ್ರಿಂಗೇರಿ ಅವರು ಅರಿವು ಶಿಕ್ಷಣ ಕೇಂದ್ರವನ್ನು ಸ್ಥಾಪಿಸಿ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತಿರುವುದು ಮಾತ್ರವಲ್ಲದೆ, ಅನ್ಯಾಯದ ವಿರುದ್ಧ ಹೋರಾಡುತ್ತಾ ಬಡವರಿಗೆ ಸಹಾಯ ಮಾಡುತ್ತಿರುವುದನ್ನು ಪರಿಗಣಿಸಿ, ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ ಸಂಘಟನೆಯ ತಾಲೂಕು ನೂತನ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ಈಚೆಗೆ ನಡೆದ ಸಭೆಯಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷ ಡಾ. ಕೆ.ಎಂ. ಸಂದೇಶ್ ಅವರ ನಿರ್ದೇಶನದಂತೆ ಜಿಲ್ಲಾ ಅಧ್ಯಕ್ಷ ಬುದ್ದೇಶ್ ಸಿಂಗೆ ಹಾಗೂ ಕಲಬುರಗಿ ಯುವ ಘಟಕದ ಅಧ್ಯಕ್ಷ ಎನ್.ಕೆ. ಅರ್ಜುನ್ ಅವರ ನೇತೃತ್ವದಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆದಿದೆ.

ಮಲ್ಲಿಕಾರ್ಜುನ್ ಶ್ರಿಂಗೇರಿ ಅವರ ಸಾಮಾಜಿಕ ಸೇವೆಯನ್ನು ಗುರುತಿಸಿ ಸಂಘಟನೆಯ ಸದಸ್ಯರು ಅವರನ್ನು ತಾಲೂಕು ಅಧ್ಯಕ್ಷರಾಗಿ ನೇಮಿಸಿದ್ದು, ಸಮಾಜ ಸೇವೆಯಲ್ಲಿ ಅವರ ಕೊಡುಗೆಯನ್ನು ಮತ್ತಷ್ಟು ಬಲಪಡಿಸಲು  ಸಭೆಯಲ್ಲಿ ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ ಅಮರ್ ಹಿರಿ ನಾಯಕ್, ವಿಜಯ್ ಕುಮಾರ್ ಚಿಂಚೋಳಿ, ರತಿಕಾಂತ ಭಜನ್, ವಿಕ್ರಾಂತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸಂಘಟನೆಯ ಮುಂದಿನ ಕಾರ್ಯಕ್ರಮಗಳ ಬಗ್ಗೆಯೂ ಚರ್ಚೆ ನಡೆಯಿತು.

Comments are closed.

Don`t copy text!