Shubhashaya News

ಭಾರತ ಸ್ವಾವಲಂಬಿ ರಾಷ್ಟ್ರ – ಪೆÇ್ರ. ಬಟ್ಟು ಸತ್ಯನಾರಾಯಣ

ಆಳಂದ: ಸಿಯುಕೆಯಲ್ಲಿ ನಡೆದ ಸ್ವಾತಂತ್ರ್ಯೋತ್ಸವ ನಿಮಿತ್ತ ನೆರೆಯ ಹಳ್ಳಿಗಳಲ್ಲಿ ಹರ್-ಘರ್ ತಿರಂಗ ರ್ಯಾಲಿಗೆ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಚಾಲನೆ ನೀಡಿದರು. ಪೆÇ್ರ. ಪ್ರಮೋದ್ ಗಾಯಿ, ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ ಇತರರು ಇದ್ದರು.

 

ಆಳಂದ: “ಭಾರತವು ವಿಜ್ಞಾನ, ತಂತ್ರಜ್ಞಾನ, ಹಣಕಾಸು ಮತ್ತು ಸೈನ್ಯದಲ್ಲಿ ಬೇರೆ ಯಾರಿಗೂ ಅವಲಂಬಿಸದ ಸ್ವಾವಲಂಬಿ ರಾಷ್ಟ್ರ” ಎಂದು ಸಿಯುಕೆಯ ಉಪಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ ಹೇಳಿದರು.

ಕಡಗಂಚಿ ಬಳಿಯ ಸಿಯುಕೆಯಲ್ಲಿ ಧ್ವಜಾರೋಹಣ ಮಾಡಿದ ಅವರು, “ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ” ಘೋಷಣೆಯಡಿ ರಾಷ್ಟ್ರ ನಿರ್ಮಾಣಕ್ಕೆ ಪ್ರತಿಯೊಬ್ಬರೂ ತೊಡಗಿಸಿಕೊಳ್ಳಬೇಕು ಎಂದರು.

2047ರ ವೀಕ್ಷಿತ್ ಭಾರತ್ ಸಾಧನೆಗೆ ಉನ್ನತ ಶಿಕ್ಷಣ ಸಂಸ್ಥೆಗಳ ಪಾತ್ರ ಮಹತ್ತರ ಎಂದು ಅವರು ಉಲ್ಲೇಖಿಸಿದರು.

ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಇಸ್ರೋ, ಡಿಆರ್ಡಿಒ ಮುಂತಾದ ಸಂಸ್ಥೆಗಳೊಂದಿಗೆ ಸಿಯುಕೆ ಸಹಕಾರ ಹೊಂದಿದೆ ಎಂದು ತಿಳಿಸಿದ್ದಾರೆ. ಮೂರು ದಿನಗಳಿಂದ ಹರ್-ಘರ್ ತಿರಂಗ ಕಾರ್ಯಕ್ರಮಗಳನ್ನು ಸಿಯುಕೆ ಸುತ್ತಮುತ್ತ ಹಳ್ಳಿಗಳಲ್ಲಿ ಹಮ್ಮಿಕೊಂಡಿದೆ.

ಕಾರ್ಯಕ್ರಮದಲ್ಲಿ ಪೆÇ್ರ. ಪ್ರಮೋದ್ ಗಾಯಿ, ಹಣಕಾಸು ಅಧಿಕಾರಿ ಪೆÇ್ರ. ಆರ್. ಆರ್. ಬಿರಾದಾರ್, ಡಾ. ರಂಗನಾಥ್, ಪೆÇ್ರ. ಚೆನ್ನವೀರ್, ಪೆÇ್ರ. ಭೋಸ್ಲೆ, ಡಾ. ರಾಜಶ್ರೀ ಮತ್ತು ಡೀನ್ಗಳು, ಮುಖ್ಯಸ್ಥರು, ಸಂಯೋಜಕರು ಸಂಶೋಧನಾ ವಿದ್ವಾಂಸರು ಉಪಸ್ಥಿತರಿದ್ದರು.

ಡಾ. ರೇμÁ್ಮ ಮತ್ತು ಡಾ. ಪ್ರಕಾಶ್ ನಿರೂಪಣೆ ಮಾಡಿದರು. ಡಾ. ಜಯದೇವಿ ಮತ್ತು ಡಾ. ನಕೋಡ್ ರಾಷ್ಟ್ರಗೀತೆ ಮತ್ತು ವಂದೇ ಮಾತರಂ ಹಾಡಿದರು.

Comments are closed.

Don`t copy text!