ಆಳಂದದಲ್ಲಿ ಮಾನವೀಯತೆಯ ಮೆರಗು
ಚರಂಡಿಯಲ್ಲಿ ಕೊಚ್ಚಿಹೋಗುತ್ತಿದ್ದ ವ್ಯಕ್ತಿಯನ್ನು ರಕ್ಷಿಸಿದ ಸಾಮಾಜಿಕ ಕಾರ್ಯಕರ್ತ ರಫೀಕ್ ಇನಾಮ್ದಾರ್, ಶರಣ ಕುಲಕರ್ಣಿ
ಆಳಂದ: ಪುರಸಭೆ ಕಚೇರಿ ಮುಂಭಾಗದ ಚರಂಡಿಯಲ್ಲಿ ವ್ಯಕ್ತಿಯೊಬ್ಬ ಕೆಸರಿನ ರಾಡಿಯಲ್ಲಿ ಆಯ ತಪ್ಪಿ ತಲೆಕೆಳಗಾಗಿ ಮುಳಗಿ ಜೀವನ್ಮರಣದ ಹೋರಾಡುತ್ತಿದ್ದ ವ್ಯಕ್ತಿಯನ್ನು ಸಕಾಲಕ್ಕೆ ಸಾಮಾಜಿಕ ಕಾರ್ಯಕರ್ತ ರಫಿಕ್ ಇನಾಮದಾರ ಮತ್ತು ಎಲೆನಾವದಗಿ ಶರಣ ಕುಲಕರ್ಣಿ ರಕ್ಷಿಸಿದರು.
ಆಳಂದ: ಪಟ್ಟಣದ ಪುರಸಭೆ ಕಚೇರಿಯ ಮುಂಭಾಗದ ಕೋರ್ಟ್ ಆವರಣ ಗೋಡೆಯ ನಾಲೆಯ ಚರಂಡಿಯಲ್ಲಿ ಕುಡಿದ ಅಮಲಿನಲ್ಲಿ ಆಯತಪ್ಪಿ ಬಿದ್ದು ಕೊಚ್ಚಿಹೋಗುತ್ತಿದ್ದ ವ್ಯಕ್ತಿಯೊಬ್ಬನನ್ನು ಸಾಮಾಜಿಕ ಕಾರ್ಯಕರ್ತ ರಫೀಕ್ ಇನಾಮ್ದಾರ್ ಹಾಗೂ ಎಲೆನಾವದಗಿ ಗ್ರಾಮದ ಶರಣ ಕುಲಕರ್ಣಿ ಅವರು ತಕ್ಷಣಕ್ಕೆ ದಾವಿಸಿ ಜೀವ ರಕ್ಷಿಸಿದ್ದಾರೆ.
ಧನಗರ ಗಲ್ಲಿಯ ನಿವಾಸಿ ಪೂಜಾರಿ ಎಂಬುವಾತ ಕುಡಿದ ಅಮಲಿನಲ್ಲಿ ಆಯ ತಪ್ಪಿಬಿದ್ದು ಸುಮಾರು ಐದು ಅಡಿ ಆಳದ ಚರಂಡಿಯ ಕೆಸರಿನಲ್ಲಿ ತೆಲೆ ಕೆಳಗೆ ಮಾಡಿಬಿದ್ದು ದೇಹ ಕಾಣದಂತೆ ಭಾಗಶಃ ಭಾಗವನ್ನು ಕೆಸರಿನಲ್ಲಿ ಮುಚ್ಚಿಹೋಗಿ ಹರಿಯಲಾರಂಭಿಸಿದ್ದ ವೇಳೆ ಸ್ಥಳೀಯ ನಾಗರಿಕರಿಂದ ಘಟನೆಯನ್ನು ಗಮನಿಸಿ ತಕ್ಷಣ ಕಾರ್ಯಪ್ರವೃತ್ತರಾದರು.
ಕೆಸರಿಗೆ ಇಳಿಯಲು ಇತರರಂತೆ ಹಿಂಜರಿಯದೇ ನಿಂತುಕೊಂಡು ಕೆಸರಿನ ರಾಡಿಯಿಂದ ವ್ಯಕ್ತಿಯನ್ನು ಮೇಲೆ ಎತ್ತಿ, ಪ್ರಾಣಹಾನಿಯಿಂದ ರಕ್ಷಿಸಿದ ಇನಾಮ್ದಾರ್, ಕುಲಕರ್ಣಿ ತಮ್ಮ ಮಾನವೀಯತೆಯ ಮೂಲಕ ಸಮಾಜಕ್ಕೆ ಮಾದರಿಯಾದರು. ಕೆಸರಿನಲ್ಲಿ ಮುಳಗಿದ್ದ ವ್ಯಕ್ತಿಯನ್ನು ಹೊರ ತೆಗೆದು ನೀರಿನ ತೊಳದರು. ಆಗಲೂ ಆ ವ್ಯಕ್ತಿ ನಶೆಯಿಂದ ಹೊರ ಬಂದಿರಲಿಲ್ಲ. ಎಂದು ಪ್ರತ್ಯಕ್ಷದರ್ಶಿಗಳು ಹೇಳಿಕೊಂಡರು.
ಇಂಥ ಅವಘಡಗಳನ್ನು ತಪ್ಪಿಸಲು ಪುರಸಭೆ ವ್ಯಾಪ್ತಿಯಲ್ಲಿನ ಜನನಿಬೀಡ ಸ್ಥಳಗಳಲ್ಲಿ ಚರಂಡಿಗಳಿಗೆ ಸುರಕ್ಷತಾ ಕ್ರಮವನ್ನು ಅನುಸರಿಸುವ ಮೂಲಕ ಸಕಾಲಕ್ಕೆ ಕಸ, ಕೆಸರು ನಿರ್ವಹಣೆ ಕೆಲಸವಾಗಬೇಕು ಎಂದು ಸ್ಥಳೀಯರು ಪುರಸಭೆ ಆಡಳಿತಕ್ಕೆ ಒತ್ತಾಯಿಸಿದ್ದಾರೆ.
Comments are closed.