Browsing Category
ಸುದ್ದಿ
ಮಾಸಾಶನ ಪ್ರಮಾಣ ಪತ್ರಗಳು ಫಲಾನುಭವಿಗಳ ಮನೆಗೆ ತಲುಪಿಸುವಂತೆ ಆಗ್ರಹ
ಚಿತ್ತಾಪುರ: ಅಂಗವಿಕಲ, ಹಿರಿಯ ನಾಗರಿಕರ ಸಂಧ್ಯಾ ಸುರಕ್ಷಾ, ವಿಧವಾ ವೇತನ, ಮನಸ್ವಿನಿ ಹಾಗೂ ರಾಷ್ಟ್ರೀಯ ಭದ್ರತಾ ಯೋಜನೆಯ ಮಾಸಾಶನ ಮಂಜೂರಾತಿ ಪ್ರಮಾಣ ಪತ್ರಗಳನ್ನು ಫಲಾನುಭವಿಗಳ ಮನೆಗೆ ನೇರವಾಗಿ ತಲುಪಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ದೈಹಿಕ ಮತ್ತು ಮಾನಸಿಕ ಅಂಗವಿಕಲರ ವಿವಿದೊದ್ದೇಶ…
ಸಮಸಮಾಜ ನಿರ್ಮಾಣಕ್ಕೆ ಅರಸು ತತ್ವಗಳು ಅಳವಡಿಸಿಕೊಳ್ಳಿ: ಬಾಬುರಾವ್ ಫುಲಾರ
ಆಳಂದ: ಶಿಕ್ಷಣ, ಸಂಘಟನೆ ಹಾಗೂ ಹಕ್ಕುಗಳ ಅರಿವಿನ ಮೂಲಕ ಹಿಂದುಳಿದ ವರ್ಗಗಳ ಜನರು ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಸಬಲರಾಗಬೇಕು. ಸಂಘಟಿತ ಶಕ್ತಿಯ ಮೂಲಕ ತಮ್ಮ ಹಕ್ಕುಗಳನ್ನು ಪಡೆದುಕೊಂಡು, ಡಿ. ದೇವರಾಜ ಅರಸು ಅವರು ಕಂಡಿದ್ದ ಸಾಮಾಜಿಕ ನ್ಯಾಯದ ಸಮಾಜ ನಿರ್ಮಾಣದ ಕನಸನ್ನು ನನಸಾಗಿಸಬೇಕು…
ಪುಸ್ತಕಗಳು ಉತ್ತಮ ಬದುಕು ಕಟ್ಟಿಕೊಡುವ ಶಕ್ತಿ ಹೊಂದಿವೆ: ಡಾ. ಬಸವರಾಜ ಕೊನೇಕ್
ಕಲಬುರಗಿ: ಮನುಷ್ಯನ ಆಲಸ್ಯವನ್ನು ದೂರಮಾಡಿ ಜ್ಞಾನವಂತರನ್ನಾಗಿ ಮಾಡುವುದರ ಜೊತೆಗೆ ಜೀವನದಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳಲು ಪುಸ್ತಕಗಳು ಶಕ್ತಿ ನೀಡುತ್ತವೆ ಎಂದು ಪ್ರಕಾಶಕ ಡಾ. ಬಸವರಾಜ ಕೊನೇಕ್ ಹೇಳಿದರು.
ಸಾಹಿತಿ ಮಲ್ಲಮ್ಮ ಶಿವರಾಜ ಕಾಳಗಿ ಅವರ ನಿವಾಸದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ…
ಅರಸು ಅವರ ಆಡಳಿತ ಮಾದರಿ ಇಂದಿಗೂ ಪ್ರಸ್ತುತ: ತಹಸೀಲ್ದಾರ್ ಅಣ್ಣಾರಾವ್ ಪಾಟೀಲ
ಆಳಂದ: ಸಾಮಾಜಿಕ ನ್ಯಾಯ, ಭೂ ಸುಧಾರಣೆ ಹಾಗೂ ಹಿಂದುಳಿದ ವರ್ಗಗಳ ಸಬಲೀಕರಣಕ್ಕೆ ಹೊಸ ದಿಕ್ಕು ತೋರಿಸಿದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಆಡಳಿತದ ಆಶಯಗಳು ಇಂದಿನ ಸಮಾಜಕ್ಕೂ ದಾರಿದೀಪವಾಗಿವೆ ಎಂದು ತಹಸೀಲ್ದಾರ್ ಅಣ್ಣಾರಾವ್ ಪಾಟೀಲ ಹೇಳಿದರು.
ಪಟ್ಟಣದ ಹೊರವಲಯದಲ್ಲಿರುವ ತಾಲೂಕು ಆಡಳಿತ…
ಸೇಡಂ | ದೇವಸ್ಥಾನದ ಉದ್ಘಾಟನಾ ಕಾರ್ಯಕ್ರಮಕ್ಕೆ ಅತಿಥಿಗಳ ಆಹ್ವಾನದಲ್ಲಿ ತಾರತಮ್ಯ ಆರೋಪ: ಬಿಜೆಪಿ–ಕಾಂಗ್ರೆಸ್…
ಸೇಡಂ: ತಾಲೂಕಿನ ರಂಜೋಳ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ವೀರಾಂಜನೇಯ ದೇವಸ್ಥಾನದ ಉದ್ಘಾಟನೆ ಹಾಗೂ 9 ಗ್ರಾಮ ದೇವತೆಗಳ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಮೊದಲು ರಾಜಕೀಯ ಆರೋಪ-ಪ್ರತ್ಯಾರೋಪಗಳು ತೀವ್ರಗೊಂಡಿದೆ. ಮಾಜಿ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ್ ನೇತೃತ್ವದಲ್ಲಿ ಬಿಜೆಪಿ…
ಕಲಬುರಗಿ: 18 ಅಂಚೆ ಕಚೇರಿಗಳಲ್ಲಿ ಆಧಾರ್ ಸೇವೆ ಆರಂಭ
ಕಲಬುರಗಿ: ಕಲಬುರಗಿ ವಿಭಾಗದ ಅಂಚೆ ಇಲಾಖೆಯು ಸಾರ್ವಜನಿಕರ ಅನುಕೂಲಕ್ಕಾಗಿ ಕಲಬುರಗಿ ಜಿಲ್ಲೆಯ ಕೆಳಕಂಡ 18 ಪ್ರಮುಖ ಅಂಚೆ ಕಚೇರಿಗಳಲ್ಲಿ ಆಧಾರ್ ನೋಂದಣಿ ಮತ್ತು ನವೀಕರಣ ಸೇವೆಗಳನ್ನು ಪ್ರಾರಂಭಿಸಿದೆ ಎಂದು ಕಲಬುರಗಿ ವಿಭಾಗದ ಅಂಚೆ ಅಧೀಕ್ಷಕ ರವೀಂದ್ರ ಬಿ. ಎಲ್. ಅವರು ತಿಳಿಸಿದ್ದಾರೆ.
ಈ ಅಂಚೆ…
ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಧ್ವನಿಯಾದ ಧೀಮಂತ ನಾಯಕ: ಚಂದ್ರಿಕಾ ಪರಮೇಶ್ವರ
ಕಲಬುರಗಿ: ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರು ಹಿಂದುಳಿದ ವರ್ಗಗಳ ಧೀಮಂತ ನಾಯಕರು. ಶೋಷಿತರು ಹಾಗೂ ಹಿಂದುಳಿದ ಜನರ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆ ಅಪಾರವಾಗಿದ್ದು, ಅವರ ಸಾಮಾಜಿಕ ನ್ಯಾಯದ ಪರಿಕಲ್ಪನೆ ಇಂದಿಗೂ ಪ್ರಸ್ತುತವಾಗಿದೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ…
ಮಳೆ ಕೊರತೆ: ಕೆಲಸವಿಲ್ಲದೇ ಕೊರಗುತ್ತಿರುವ ಕೃಷಿ ಕಾರ್ಮಿಕರು
ಆಳಂದ: ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಆಳಂದ ತಾಲೂಕಿನ ಗ್ರಾಮೀಣ ಭಾಗದಲ್ಲಿ ಕೃಷಿ ಚಟುವಟಿಕೆಗಳು ಕುಂಠಿತವಾಗಿದ್ದು, ಕೃಷಿಯನ್ನೇ ನಂಬಿಕೊಂಡು ಬದುಕುತ್ತಿರುವ ಸಾವಿರಾರು ಕೃಷಿ ಕಾರ್ಮಿಕರು ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರತಿದಿನ ಹೊಲಕ್ಕೆ ತೆರಳಿ ಕೂಲಿ ಕೆಲಸ ಮಾಡಿ ಕುಟುಂಬ…
ತೇವಾಂಶ ಕೊರತೆ: ಆಳಂದದಲ್ಲಿ ಬಾಡುತ್ತಿರುವ ಬೆಳೆಗಳು
ಆಳಂದ: ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಆಳಂದ ತಾಲೂಕಿನ ಹಲವು ಭಾಗಗಳಲ್ಲಿ ಕೃಷಿ ಚಟುವಟಿಕೆಗಳು ಸಂಕಷ್ಟಕ್ಕೆ ಸಿಲುಕಿದ್ದು, ಬಿತ್ತನೆ ಮಾಡಿದ ಬೆಳೆಗಳು ತೇವಾಂಶದ ಕೊರತೆಯಿಂದ ಬಾಡಲಾರಂಭಿಸಿವೆ. ಮಳೆಯನ್ನೇ ಅವಲಂಬಿಸಿರುವ ರೈತರು ಆಕಾಶದತ್ತ ಮುಖ ಮಾಡಿ ಕುಳಿತಿದ್ದು, ಮತ್ತಷ್ಟು ಮಳೆ ವಿಳಂಬವಾದರೆ…
೩೮೨ ರೂಪಾಯಿ ಕೂಲಿ; ನಗರ ವಲಸೆ ತಡೆಯಲು ವಿಬಿ-ಜಿಆರ್‌ಎಎಂಜಿ ಒತ್ತು
ಆಳಂದ: ಧುತ್ತರಗಾಂವ ಗ್ರಾಮನಲ್ಲಿ ಕೆರೆ ಹೂಳೆತ್ತುವ ಕಾಮಗಾರಿಯಲ್ಲಿ ನಿರತರಾಗಿರುವÀ ಕಾರ್ಮಿಕರು. À
ಆಳಂದ: ಗ್ರಾಮೀಣ ಪ್ರದೇಶದ ಜನರು ಉದ್ಯೋಗಕ್ಕಾಗಿ ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಪ್ಪಿಸುವ ಉದ್ದೇಶದಿಂದ ಆಳಂದ ತಾಲ್ಲೂಕಿನ ಎಲ್ಲ ೪೨ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ…