Shubhashaya News

BIG BREAKING: ಕರ್ನಾಟಕ ವಿಧಾನಪರಿಷತ್ 4 ಶಿಕ್ಷಕ, ಪದವೀಧರ ಕ್ಷೇತ್ರಗಳಿಗೆ ಚುನಾವಣೆ ಫಿಕ್ಸ್: ಅ.23ಕ್ಕೆ ಮತದಾನ, ಅ.27ಕ್ಕೆ ಏಣಿಕೆ

ದೆಹಲಿ: ಕರ್ನಾಟಕ ವಿಧಾನ ಪರಿಷತ್ತಿನ 2 ಪದವೀಧರ ಹಾಗೂ 2 ಶಿಕ್ಷಕರ ಕ್ಷೇತ್ರಗಳು ಸೇರಿದಂತೆ ಒಟ್ಟು ನಾಲ್ಕು ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆಯ ವೇಳಾಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗ (ECI) ಪ್ರಕಟಿಸಿದೆ. ಹಾಲಿ ನಾಲ್ವರು ವಿಧಾನ ಪರಿಷತ್ ಸದಸ್ಯರ ಅಧಿಕಾರಾವಧಿಯು 2026ರ ನವೆಂಬರ್ 11ರಂದು ಮುಕ್ತಾಯಗೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ನೂತನ ಸದಸ್ಯರ ಆಯ್ಕೆಗೆ ದಿನಾಂಕ ನಿಗದಿಪಡಿಸಲಾಗಿದೆ.

ನಿವೃತ್ತಿ ಹೊಂದಲಿರುವ ಹಾಲಿ ಸದಸ್ಯರು ಮತ್ತು ಕ್ಷೇತ್ರಗಳು:

  • ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರ (Karnataka South-East Graduates’): ಚಿದಾನಂದ್ ಎಂ. ಗೌಡ
  • ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರ (Karnataka West Graduates’): ಎಸ್.ವಿ. ಸಂಕನೂರ
  • ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರ (Karnataka North-East Teachers’): ಶಶೀಲ್ ಜಿ. ನಮೋಶಿ
  • ಬೆಂಗಳೂರು ಶಿಕ್ಷಕರ ಕ್ಷೇತ್ರ (Bangalore Teachers’): ಪುಟ್ಟಣ್ಣ

ಚುನಾವಣಾ ವೇಳಾಪಟ್ಟಿ ವಿವರ:

  • ಅಧಿಸೂಚನೆ ಪ್ರಕಟಣೆ: ಸೆಪ್ಟೆಂಬರ್ 29, 2026 (ಮಂಗಳವಾರ)
  • ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ: ಅಕ್ಟೋಬರ್ 06, 2026 (ಮಂಗಳವಾರ)
  • ನಾಮಪತ್ರಗಳ ಪರಿಶೀಲನೆ: ಅಕ್ಟೋಬರ್ 07, 2026 (ಬುಧವಾರ)
  • ಉಮೇದುವಾರಿಕೆ ಹಿಂಪಡೆಯಲು ಕಡೆಯ ದಿನಾಂಕ: ಅಕ್ಟೋಬರ್ 09, 2026 (ಶುಕ್ರವಾರ)
  • ಮತದಾನದ ದಿನಾಂಕ: ಅಕ್ಟೋಬರ್ 23, 2026 (ಶುಕ್ರವಾರ)
  • ಮತದಾನದ ಸಮಯ: ಬೆಳಗ್ಗೆ 08:00 ರಿಂದ ಸಂಜೆ 04:00 ರವರೆಗೆ
  • ಮತಗಳ ಎಣಿಕೆ ಹಾಗೂ ಫಲಿತಾಂಶ: ಅಕ್ಟೋಬರ್ 27, 2026 (ಮಂಗಳವಾರ)
  • ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವ ದಿನಾಂಕ: ಅಕ್ಟೋಬರ್ 31, 2026 (ಶನಿವಾರ)

ತಕ್ಷಣದಿಂದಲೇ ನೀತಿ ಸಂಹಿತೆ ಜಾರಿ:

​ಚುನಾವಣೆ ಘೋಷಣೆಯಾಗಿರುವ ಕರ್ನಾಟಕದ ಆಯಾ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆಯು (Model Code of Conduct) ತಕ್ಷಣದಿಂದಲೇ ಜಾರಿಗೆ ಬಂದಿದೆ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.

Leave A Reply

Your email address will not be published.