ಆಳಂದ: ತಾಲೂಕಿನ ತಡಕಲ್ ಗ್ರಾಮದಲ್ಲಿ ಮಾಜಿ ಶಾಸಕ ಸುಭಾಷ ಆರ್. ಗುತ್ತೇದಾರ ಅವರು ತಮ್ಮ ತಾಯಿಯ ಸ್ಮರಣಾರ್ಥವಾಗಿ ನೂತನವಾಗಿ ನಿರ್ಮಿಸಿರುವ ಅಂಬಾಭವಾನಿ ಮಂದಿರದ ಉದ್ಘಾಟನಾ ಮಹೋತ್ಸವ ಹಾಗೂ ಪಂಚಪೀಠಾಧೀಶ್ವರ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವವು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅತ್ಯಂತ ವೈಭವದಿಂದ ಜರುಗಿತು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಮಾಜಿ ಶಾಸಕ ಸುಭಾಷ ಆರ್. ಗುತ್ತೇದಾರ ಅವರು, “ನಾನು ನನ್ನ ಮಾತೆಯ ನೆನಪಿನಲ್ಲಿ ತುಳಜಾಪೂರದ ಅಂಭಾ ಭವಾನಿಯಲ್ಲಿ ನನ್ನ ಮಾತೆ ಅಂಬವ್ವ ರುಕ್ಮಯ್ಯ ಗುತ್ತೇದಾರ ಅವರನ್ನು ಕಾಣುತ್ತೇನೆ. ಈ ಮಂದಿರ ನಿರ್ಮಿಸಿ, ಪಂಚಪೀಠ ಜಗದ್ಗುರುಗಳ ಆಶೀರ್ವಾದದೊಂದಿಗೆ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದು ನನಗೆ ಅತ್ಯಂತ ಸಂತಸ ತಂದಿದೆ” ಎಂದು ಹೇಳಿದರು.
ವೈಭವದ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಮೆರವಣಿಗೆ:ಪ್ರಾಣಪ್ರತಿಷ್ಠಾಪನೆ ಹಾಗೂ ಧರ್ಮಸಭೆ: ಇಂದು ಬೆಳಿಗ್ಗೆ 10 ಗಂಟೆಗೆ ಅಂಬಾಭವಾನಿ ಮೂರ್ತಿಯ ಪ್ರಾಣಪ್ರತಿಷ್ಠಾಪನಾ ಮಹೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.
ತದನಂತರ 11 ಗಂಟೆಗೆ ಭವ್ಯ ಧರ್ಮಸಭೆ ಕಾರ್ಯಕ್ರಮ ಜರುಗಿತು. 1008 ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯ: ಪಂಚಪೀಠದ ಜಗದ್ಗುರುಗಳ ಸಮ್ಮುಖದಲ್ಲಿ 1008 ಮುತ್ತೈದೆಯರಿಗೆ ಸಾಂಪ್ರದಾಯಿಕವಾಗಿ ಉಡಿ ತುಂಬುವ ಕಾರ್ಯಕ್ರಮ ಅತ್ಯಂತ ಭಕ್ತಿಯಿಂದ ನಡೆಯಿತು.
ಭವ್ಯ ಅಡ್ಡಪಲ್ಲಕ್ಕಿ ಮೆರವಣಿಗೆ: ದೇವಿ ಮಂದಿರದಿAದ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮೆರವಣಿಗೆಯು ಕುಂಭ ಹೊತ್ತ ನೂರಾರು ಮಹಿಳೆಯರು, ಶೃಂಗರಿಸಿದ ಎತ್ತುಗಳ ಮೆರವಣಿಗೆ, ಪುರವಂತರ ಕುಣಿತ ಹಾಗೂ ಡೊಳ್ಳು ಸೇರಿದಂತೆ ವಿವಿಧ ವಾದ್ಯಮೇಳಗಳೊಂದಿಗೆ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಅತ್ಯಂತ ವೈಭವದಿಂದ ಸಾಗಿಬಂದಿತು. ಭಕ್ತಾದಿಗಳಿಗೆ ಮಹಾಪ್ರಸಾದ ವಿತರಣೆ ಮಾಡಲಾಯಿತು.
ಧರ್ಮಸಭೆ ವೇದಿಕೆಯಲ್ಲಿದ್ದ ಪೂಜ್ಯರು ಹಾಗೂ ಮಠಾಧೀಶರು:ಈ ಮಹಾಮಂಗಳೋತ್ಸವದಲ್ಲಿ ರಂಭಾಪುರಿ, ಉಜ್ಜಯಿನಿ ಹಾಗೂ ಕಾಶಿ ಪೀಠದ ಉಭಯ ಪೂಜ್ಯರು ಭಾಗವಹಿಸಿ ಆಶೀರ್ವಚನ ನೀಡಿದರು.
ಕಡಗಂಚಿಯ ವೀರಭದ್ರ ಶಿವಾಚಾರ್ಯರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ವೇದಿಕೆಯಲ್ಲಿ ನಾಡಿನ ಪ್ರಮುಖ ಮಠಾಧೀಶರು ಉಪಸ್ಥಿತರಿದ್ದರು:ನಂದಗಾAವದ ಶ್ರೀ ರಾಜಶೇಖರ ಮಹಸ್ವಾಮಿಗಳುಹಾರಕೂಡದ ಡಾ. ಚನ್ನವೀರ ಶಿವಾಚಾರ್ಯರುಹಿರೇಮಠದ ಶ್ರೀ ಸಿದ್ದೇಶ್ವರ ಶಿವಾಚಾರ್ಯರುನಿಂಬಾಳದ ಜಡೇಶಾಂತಲಿAಗ ಮಹಾಸ್ವಾಮಿಗಳುಚಿಂಚನಸೂರದ ಶ್ರೀ ಸಿದ್ಧಮಲ್ಲ ಶಿವಾಚಾರ್ಯರುಮಾಡಿಯಾಳದ ಶ್ರೀ ಮರಳಸಿದ್ಧ ಮಹಾಸ್ವಾಮಿಗಳುಚಿನ್ಮಗೀರಿಯ ಶ್ರೀ ವೀರ ಮಹಾಂತ ಶಿವಾಚಾರ್ಯರುಮಾದನ ಹಿಪ್ಪರಗಾದ ಶ್ರೀ ಶಾಂತವೀರ ಶಿವಾಚಾರ್ಯರುಚಿಂಚನಸೂರದ ಶ್ರೀ ಗಂಗಾಧರ ಶಿವಾಚಾರ್ಯರುನಿಂಬರ್ಗಾದ ಶ್ರೀ ಶಿವಲಿಂಗೇಶ್ವರ ಮಹಾಸ್ವಾಮಿಗಳುಬಂಗರಗಾದ ಶ್ರೀ ಶಿವಾನಂದ ಶಿವಾಚಾರ್ಯರುಪಡಸಾವಳಿಯ ಶ್ರೀ ಶಂಭುಲಿAಗ ಶಿವಾಚಾರ್ಯರುತಡಕಲ್‌ನ ಶ್ರೀ ಸಿದ್ಧಮಲ್ಲ ಶಿವಾಚಾರ್ಯರುಭೂಸನೂರ ಶ್ರೀ ಶಂಭುಸೋಮನಾಥ ಶಿವಾಚಾರ್ಯರುಕಿಣ್ಣಿಸುಲ್ತಾನ ಶ್ರೀ ಶಾಂತಶಿವಲಿAಗ ಶಿವಾಚಾರ್ಯರುಯಳಸಂಗಿ ಶ್ರೀ ಪರಮಾನಂದ ಮಹಾಸ್ವಾಮಿಗಳುನಿರಗುಡಿಯ ಶ್ರೀ ಹವಾ ಮಲ್ಲಿನಾಥ ಮಹಾರಾಜರುನರೋಣಾದ ಶ್ರೀ ಗುರುಮಹಾಂತ ಮಹಾಸ್ವಾಮಿಗಳುಕೇಸರ ಜವಳಗಾದ ಶ್ರೀ ವೀರಂತೇಶ್ವರ ಮಹಾಸ್ವಾಮಿಗಳುಅಕ್ಕಲಕೋಟದ ಶ್ರೀ ಬಸವಲಿಂಗ ಮಹಾಸ್ವಾಮಿಗಳು ಸೇರಿದಂತೆ ಜಡಗಾದ ಮುರುಗರಾಜೇಂದ್ರ ಸ್ವಾಮೀಜಿ, ಬಬಲಾದದ ಗುರುಪಾದಲಿಂಗ ಸ್ವಾಮಿ ಹಾಗೂ ಶರಣಬಸವೇಶ್ವರ ಸಂಸ್ಥಾನದ ಚಿರಂಜೀವಿ ದೊಡ್ಡಪ್ಪ ಅಪ್ಪ ಮುಂತಾದ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.ಉಪಸ್ಥಿತರಿದ್ದ ಗಣ್ಯರು ಹಾಗೂ ಗುತ್ತೇದಾರ ಕುಟುಂಬ:ವೇದಿಕೆಯಲ್ಲಿ ಮಾಜಿ ಸಂಸದ ಉಮೇಶ ಜಾಧವ, ರವೀಂದ್ರ ಗಾಯಕವಾಡ, ಮಾಜಿ ಸಚಿವರಾದ ಮಾಲಿಕಯ್ಯ ಗುತ್ತೇದಾರ, ರೇವುನಾಯಕ ಬೆಳಮಗಿ, ಸುನೀಲ ವಲ್ಯಾಪುರೆ, ರಾಜುಗೌಡ, ಬಾಬುರಾವ ಚವ್ಹಾಣ, ಬಸವರಾಜ ಪಾಟೀಲ ಮುರುಮ, ಅಂಬಾರಾಯ ಅಷ್ಟಗಿ, ಅಮರನಾಥ ಪಾಟೀಲ್, ಹಣಮಂತ ಶೇರಿ ಸೇರಿದಂತೆ ಪ್ರಮುಖ ರಾಜಕೀಯ ಮುಖಂಡರು ಉಪಸ್ಥಿತರಿದ್ದರು.ಇವರೊಂದಿಗೆ ಜಿ.ಪಂ ಮಾಜಿ ಉಪಾಧ್ಯಕ್ಷ ಹರ್ಷಾ ಗುತ್ತೇದಾರ, ಉದ್ಯಮಿ ಸಂತೋಷ ಗುತ್ತೇದಾರ, ಕುಪೇಂದ್ರ ಗುತ್ತೇದಾರ, ಅಶೋಕ ಗುತ್ತೇದಾರ ಸೇರಿದಂತೆ ಸಮಗ್ರ ಗುತ್ತೇದಾರ ಕುಟುಂಬದವರು, ತಡಕಲ್ ಗ್ರಾಮಸ್ಥರು ಹಾಗೂ ಸಾವಿರಾರು ಅಭಿಮಾನಿಗಳು, ಭಕ್ತಾದಿಗಳು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.