ಲಿವ್‌ಇನ್ ಸಂಬAಧಗಳ ಕಾನೂನು ಆಯಾಮಗಳ ಸಮಗ್ರ ಪರಿಶೀಲನೆ ಅಗತ್ಯ ವಿವಾಹ ಸಾಮಾಜಿಕ ಸಂಸ್ಥೆ; ವೈಯಕ್ತಿಕ ಒಪ್ಪಂದವಲ್ಲ: ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್
ಆಳಂದ: ಸಿಯುಕೆಯಲ್ಲಿ ಆಯೋಜಿಸಿದ್ದ ‘ಸಹಜೀವನದ ವಿಕಸನ: ವಿವಾಹ ಮತ್ತು ಲಿವ್‌ಇನ್ ಸಂಬAಧಗಳಲ್ಲಿನ ಪಾವಿತ್ರ‍್ಯತೆ, ಕಾನೂನುಬದ್ಧತೆ ಹಾಗೂ ಸಾಮಾಜಿಕ ಆಯಾಮಗಳು’ ಕಾರ್ಯಕ್ರಮ ಒಡಿಶಾ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಉದ್ಘಾಟಿಸಿದರು. ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಇತರರು ಇದ್ದರು.
ಆಳಂದ: ವಿವಾಹವನ್ನು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಕಾನೂನು ಒಪ್ಪಂದವಾಗಿ ಪರಿಗಣಿಸದೆ, ಕುಟುಂಬದ ಸ್ಥಿರತೆ, ಸಾಮಾಜಿಕ ಮೌಲ್ಯಗಳು ಹಾಗೂ ಮುಂದಿನ ಪೀಳಿಗೆಯ ಹಿತಾಸಕ್ತಿಯನ್ನು ರೂಪಿಸುವ ಪ್ರಮುಖ ಸಾಮಾಜಿಕ ಸಂಸ್ಥೆಯಾಗಿ ನೋಡಬೇಕು ಎಂದು ಒಡಿಶಾ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಹೇಳಿದರು.
ತಾಲೂಕಿನ ಕಡಗಂಚಿ ಬಳಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (ಸಿಯುಕೆ)ಯ ಕಾನೂನು ವಿಭಾಗ, ವಿಜ್ಞಾನೇಶ್ವರ ಪ್ರತಿಷ್ಠಾನ ಟ್ರಸ್ಟ್ (ರಿ.) ಹಾಗೂ ಮರತೂರ ಸಹಯೋಗದಲ್ಲಿ ಆಯೋಜಿಸಿದ್ದ ‘ಸಹಜೀವನದ ವಿಕಸನ: ವಿವಾಹ ಮತ್ತು ಲಿವ್‌ಇನ್ ಸಂಬAಧಗಳಲ್ಲಿನ ಪಾವಿತ್ರ‍್ಯತೆ, ಕಾನೂನುಬದ್ಧತೆ ಹಾಗೂ ಸಾಮಾಜಿಕ ಆಯಾಮಗಳು’ ವಿಷಯದ ಒಂದು ದಿನದ ರಾಷ್ಟಿçÃಯ ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಭಾರತೀಯ ಪರಂಪರೆಯಲ್ಲಿ ವಿವಾಹವು ಹದಿನಾರು ಸಂಸ್ಕಾರಗಳಲ್ಲಿ ಒಂದಾಗಿದೆ. ಅದು ಕೇವಲ ವೈವಾಹಿಕ ಬಂಧನವಲ್ಲದೆ, ಬದ್ಧತೆ, ಪರಸ್ಪರ ಜವಾಬ್ದಾರಿ, ನಂಬಿಕೆ, ಕುಟುಂಬದ ನಿರಂತರತೆ ಹಾಗೂ ಸಾಮಾಜಿಕ ಹೊಣೆಗಾರಿಕೆಯನ್ನು ಒಳಗೊಂಡಿರುವ ಸಂಸ್ಕಾರವಾಗಿದೆ. ಆದರೆ ಬದಲಾಗುತ್ತಿರುವ ಜೀವನಶೈಲಿ ಹಾಗೂ ವಿದೇಶಿ ಸಂಸ್ಕೃತಿಯ ಪ್ರಭಾವದ ಹಿನ್ನೆಲೆಯಲ್ಲಿ ಭಾರತೀಯತೆ ಮತ್ತು ಸಾಮಾಜಿಕ ಮೌಲ್ಯಗಳನ್ನು ಸಮಕಾಲೀನ ಸಂದರ್ಭದಲ್ಲಿ ಸಂರಕ್ಷಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ವೈಯಕ್ತಿಕ ಸ್ವಾತಂತ್ರ‍್ಯ ಮತ್ತು ಸಾಮಾಜಿಕ ಜವಾಬ್ದಾರಿಯ ನಡುವೆ ಸಮತೋಲನ ಸಾಧಿಸುವುದು ಇಂದಿನ ಸಂದರ್ಭದಲ್ಲಿ ಅತ್ಯಂತ ಅಗತ್ಯವಾಗಿದೆ. ಮಹಿಳೆಯರ ಸ್ವಾತಂತ್ರ‍್ಯ, ಸಮಾನತೆ ಮತ್ತು ಸಬಲೀಕರಣವನ್ನು ಗೌರವಿಸುವುದರ ಜತೆಗೆ ಕುಟುಂಬ ಹಾಗೂ ಸಮಾಜದ ವಿಶಾಲ ಹಿತಾಸಕ್ತಿಯನ್ನೂ ಪರಿಗಣಿಸಬೇಕು ಎಂದು ನ್ಯಾಯಮೂರ್ತಿ ದೀಕ್ಷಿತ್ ಹೇಳಿದರು.
ವಿವಾಹಕ್ಕೆ ಸಂಬAಧಿಸಿದ ಕುಟುಂಬ ಕಾನೂನು, ಉತ್ತರಾಧಿಕಾರ, ಆಸ್ತಿ ಹಕ್ಕು, ನಿರ್ವಹಣಾ ಹಕ್ಕು, ಪೋಷಕರ ಜವಾಬ್ದಾರಿ ಹಾಗೂ ಮಕ್ಕಳ ಹಕ್ಕುಗಳಂತಹ ಹಲವು ಕಾನೂನು ಆಯಾಮಗಳು ಹೊಸ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿವೆ. ಇದೇ ರೀತಿಯಲ್ಲಿ ಲಿವ್‌ಇನ್ ಸಂಬAಧಗಳನ್ನೂ ಕಾನೂನುಬದ್ಧ ಹಕ್ಕುಗಳು, ಮಕ್ಕಳ ಹಿತಾಸಕ್ತಿ, ಉತ್ತರಾಧಿಕಾರ, ನಿರ್ವಹಣೆ ಮತ್ತು ಪೋಷಕರ ಜವಾಬ್ದಾರಿಯ ದೃಷ್ಟಿಕೋನದಿಂದ ಸಮಗ್ರವಾಗಿ ಪರಿಶೀಲಿಸುವ ಅಗತ್ಯವಿದೆ ಎಂದು ಅವರು, ವೀರರಾಣಿ ಕಿತ್ತೂರು ಚೆನ್ನಮ್ಮ, ರಾಜಮಾತೆ ಅಹಲ್ಯಾಬಾಯಿ ಹೋಳ್ಕರ್ ಹಾಗೂ ವಿದ್ವಾಂಸಿ ಉಭಯಭಾರತಿ ಅವರ ಉದಾಹರಣೆಗಳನ್ನು ಉಲ್ಲೇಖಿಸಿದ ನ್ಯಾಯಮೂರ್ತಿ ದೀಕ್ಷಿತ್, ಭಾರತೀಯ ಪರಂಪರೆಯಲ್ಲಿ ಮಹಿಳೆಯರು ಕೇವಲ ಕುಟುಂಬದ ಚೌಕಟ್ಟಿಗೆ ಸೀಮಿತರಾಗಿರದೆ ಆಡಳಿತ, ನಾಯಕತ್ವ ಹಾಗೂ ಬೌದ್ಧಿಕ ಕ್ಷೇತ್ರಗಳಲ್ಲಿಯೂ ಮಹತ್ವದ ಪಾತ್ರ ವಹಿಸಿರುವುದನ್ನು ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಿಯುಕೆ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಮಾತನಾಡಿ, ಬದಲಾಗುತ್ತಿರುವ ವಿವಾಹ ಪದ್ಧತಿ, ಲಿವ್‌ಇನ್ ಸಂಬAಧಗಳು ಹಾಗೂ ಪರಸ್ಪರ ನಂಬಿಕೆ ಮತ್ತು ಗೌರವದ ಕೊರತೆ ಕುಟುಂಬಗಳ ಮೇಲೆ ಮಾತ್ರವಲ್ಲದೆ ಸಮಾಜ ಮತ್ತು ದೇಶದ ಮೇಲೂ ಪರಿಣಾಮ ಬೀರುತ್ತಿವೆ. ಈ ಹಿನ್ನೆಲೆಯಲ್ಲಿ ಕುಟುಂಬ ವ್ಯವಸ್ಥೆಯ ಮಹತ್ವ ಹಾಗೂ ಪರಸ್ಪರ ಗೌರವದ ಮೌಲ್ಯಗಳನ್ನು ಯುವಜನರಲ್ಲಿ ಬೆಳೆಸುವ ಅಗತ್ಯವಿದೆ ಎಂದರು.
ಡೀನ್ ಪ್ರೊ. ಬಸವರಾಜ ಎಂ. ಕುಬಕಡ್ಡಿ ಸ್ವಾಗತಿಸಿದರು. ಡಾ. ರೇಣುಕಾ ಎಸ್. ಗುಬ್ಬೇವಾಡ್ ವಿಚಾರ ಸಂಕಿರಣದ ಕುರಿತು ಮಾಹಿತಿ ನೀಡಿದರು. ಡಾ. ಅನಂತ ಚಿಂಚುರೆ ವಂದಿಸಿದರು. ವಿವಿಧ ಕಾನೂನು ಕಾಲೇಜುಗಳ ವಿದ್ಯಾರ್ಥಿಗಳು, ವಕೀಲರು ಹಾಗೂ ಕಾನೂನು ಕ್ಷೇತ್ರದ ಗಣ್ಯರು ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದರು.