ಆಳಂದ: ತಾಲೂಕಿನ ಕಡಗಂಚಿ ಬಳಿಯ ಸಿಯುಕೆಯಲ್ಲಿ ಕಂಪ್ಯೂಟಿAಗ್ ಪ್ರಯೋಗಾಲಯ, ಹೈ ಪರ್ಫಾರ್ಮೆನ್ಸ್ ಕಂಪ್ಯೂಟಿAಗ್ ಪ್ರಯೋಗಾಲಯ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಉದ್ಘಾಟಿಸಿದರು.
ಆಳಂದ: ತಾಲೂಕಿನ ಕಡಗಂಚಿ ಬಳಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಗಣಿತ ವಿಭಾಗದ ವತಿಯಿಂದ ಕಂಪ್ಯೂಟಿAಗ್ ಪ್ರಯೋಗಾಲಯ, ಹೈ ಪರ್ಫಾರ್ಮೆನ್ಸ್ ಕಂಪ್ಯೂಟಿAಗ್ (ಎಚ್‌ಪಿಸಿ) ಪ್ರಯೋಗಾಲಯ ಹಾಗೂ ರಾಷ್ಟ್ರೀಯ ಉನ್ನತ ಗಣಿತ ಮಂಡಳಿ (ಎನ್‌ಬಿಎಚ್‌ಎಂ) ಗ್ರಂಥಾಲಯವನ್ನು ಇಂದು ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಉದ್ಘಾಟಿಸಿ ಮಾತನಾಡಿದ ಅವರು ನೂತನ ಸೌಲಭ್ಯಗಳನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಬಿ.ಟೆಕ್. ಗಣಿತ ಮತ್ತು ಕಂಪ್ಯೂಟಿAಗ್ ವಿದ್ಯಾರ್ಥಿಗಳಿಗಾಗಿ ದೇಶ ಹಾಗೂ ವಿದೇಶಗಳಲ್ಲಿನ ವೃತ್ತಿ ಮತ್ತು ಉನ್ನತ ಶಿಕ್ಷಣದ ಅವಕಾಶಗಳ ಕುರಿತು ‘ನಿಮ್ಮ ವೃತ್ತಿ ಪಥ ರೂಪಿಸಿಕೊಳ್ಳಿ’ ಎಂಬ ವೃತ್ತಿ ಮಾರ್ಗದರ್ಶಿ ಪುಸ್ತಕ ಬಿಡುಗಡೆ ಮಾಡಿದರು.
ಗಣಿತ ವಿಭಾಗದ ಮುಖ್ಯಸ್ಥ ಪ್ರೊ. ಜಿ. ಜನಾರ್ದನ ರೆಡ್ಡಿ ಅವರು ಸ್ವಾಗತಿಸಿ, ನೂತನವಾಗಿ ಸ್ಥಾಪಿಸಲಾದ ಸೌಲಭ್ಯಗಳ ಮಹತ್ವ ಹಾಗೂ ಅವುಗಳ ಶೈಕ್ಷಣಿಕ ಮತ್ತು ಸಂಶೋಧನಾ ಬಳಕೆಯ ಕುರಿತು ವಿವರಿಸಿದರು.
ವಿ.ವಿ.ಯ ಪರೀಕ್ಷಾ ನಿಯಂತ್ರಕ ಪ್ರೊ. ಭರತ್ ಕುಮಾರ್, ಭೌತ ವಿಜ್ಞಾನ ನಿಕಾಯದ ಡೀನ್ ಪ್ರೊ. ರಾಜೀವ್ ಶೇಷ ಜೋಶಿ ಹಾಗೂ ಕೇಂದ್ರ ಗ್ರಂಥಪಾಲಕ ಡಾ. ಪಿ. ಎಸ್. ಕಟ್ಟಿಮನಿ ಅವರು ಮಾತನಾಡಿದರು.
ಕಾರ್ಯಕ್ರಮವು “ವಂದೇ ಮಾತರಂ”ದೊAದಿಗೆ ಆರಂಭವಾಗಿ, ರಾಷ್ಟ್ರಗೀತೆಯೊಂದಿಗೆ ಮುಕ್ತಾಯವಾಯಿತು. ಡಾ. ಮೇಘಾ ಖಂಡೇಲ್ವಾಲ್ ನಿರೂಪಿಸಿದರು. ಡಾ. ಸುಮುಖ ಎಸ್. ವಂದನಾರ್ಪಣೆ ಸಲ್ಲಿಸಿದರು.
ಗಣಿತ ವಿಭಾಗದ ಡಾ. ಎನ್. ಸಂದೀಪ್, ಡಾ. ಶ್ರೀನಿವಾಸುಲು ಬಲ್ಲೆಮ್, ಡಾ. ರಂಗನಾಥ ಡಿ., ಡಾ. ಸಮೀರ್ ಕರ್, ಡಾ. ದೇವಿಕಾ ದಾಬ್ಕೆ, ತಾಂತ್ರಿಕ ಸಹಾಯಕ ಶ್ರೀ ಶಕಿಕಾಂತ ಸೇರಿದಂತೆ ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು, ವಿದ್ಯಾರ್ಥಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.