Shubhashaya News

ಸಂತ್ರಸ್ತ ಕುಟುಂಬಕ್ಕೆ ಉದ್ಯಮಿ ಚನ್ನಬಸವ ಪಾಟೀಲರ ಸಾಂತ್ವನ: ಲಕ್ಷ ರೂಪಾಯಿ ಸಹಾಯಧನ

ಆಳಂದ: ಮಂಟಕಿ ತಾಂಡಾದಲ್ಲಿನ ಸ್ಫೋಟದಿಂದ ಸಂಭವಿಸಿದ ಸಾವು ನೋವಿನ ಕುಟುಂಬ ಸ್ಥಳಕ್ಕೆ ಭೇಟಿ ನೀಡಿದ ಉದ್ಯಮಿ ಚನ್ನಬಸವ ಪಾಟೀಲ ಅವರು ಕುಟುಂಬಸ್ಥರಿಗೆ ಲಕ್ಷ ರೂಪಾಯಿ ಸಹಾಯಧನ ನೀಡಿ ಸಾಂತ್ವಾನ ಹೇಳಿ ದೈರ್ಯ ತುಂಬಿದರು.

ಆಳಂದ: ತಾಲೂಕಿನ ಮಂಟಕಿ ತಾಂಡಾದಲ್ಲಿ ಜಿಲೆಟಿನ್ ಸ್ಫೋಟದಿಂದ ತಂದೆ–ಮಗಳು ಸೇರಿದಂತೆ ಕುಟುಂಬದ ಸದಸ್ಯರನ್ನು ಕಳೆದುಕೊಂಡು ಸಂಕಷ್ಟದಲ್ಲಿರುವ ಕುಟುಂಬಕ್ಕೆ ಆಳಂದದ ಉದ್ಯಮಿ ಚನ್ನಬಸವ ಕೆ. ಪಾಟೀಲ ಅವರು ನೆರವಿನ ಹಸ್ತ ಚಾಚಿದ್ದಾರೆ.
ಮಂಗಳವಾರ ಮಂಟಕಿ ತಾಂಡಾಕ್ಕೆ ಭೇಟಿ ನೀಡಿದ ಚನ್ನಬಸವ ಪಾಟೀಲ ಅವರು ಸ್ಫೋಟದ ಘಟನೆಯಿಂದ ಮೃತಪಟ್ಟವರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ, ದುಃಖದಲ್ಲಿ ಕುಟುಂಬದೊAದಿಗೆ ನಾವಿದ್ದೇವೆ ಎಂದು ಧೈರ್ಯ ತುಂಬಿದರು. ಇದೇ ವೇಳೆ ಸ್ಥಳದಲ್ಲೇ ೧ ಲಕ್ಷ ಸಹಾಯಧನವನ್ನು ಕುಟುಂಬಕ್ಕೆ ವಿತರಿಸಿದರು.
ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಚಿಕಿತ್ಸೆಗೆ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದ ಅವರು, ಕುಟುಂಬದ ಮಕ್ಕಳ ಶಿಕ್ಷಣಕ್ಕೂ ಮುಂದಿನ ದಿನಗಳಲ್ಲಿ ಅಗತ್ಯ ಸಹಾಯ ಮಾಡುವುದಾಗಿ ತಿಳಿಸಿದರು.
“ದುರಂತದಿAದ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಸಂತ್ರಸ್ತ ಕುಟುಂಬದ ನೆರವಿಗೆ ಸಮಾಜ ಹಾಗೂ ದಾನಿಗಳು ನಿಲ್ಲಬೇಕು. ಮಕ್ಕಳ ಭವಿಷ್ಯಕ್ಕೆ ಯಾವುದೇ ತೊಂದರೆಯಾಗದAತೆ ಅಗತ್ಯ ನೆರವು ನೀಡಲಾಗುವುದು” ಎಂದು ಚನ್ನಬಸವ ಪಾಟೀಲ ಅವರು ಕುಟುಂಬಸ್ಥರಿಗೆ ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ನ್ಯಾಯವಾದಿ ಬಾಬಾಸಾಹೇಬ ವಿ. ಪಾಟೀಲ, ಸಂಜಯ ನಾಯಕ, ಶಿವುಪುತ್ರ ನಡಗೇರಿ, ತುಳಸಿರಾಮ ನರೋಟೆ, ರವಿ ನಾಯಕ ಸುರೇಶ ರಾಠೋಡ, ರೂಪಸಿಂಗ್ ರಾಠೋಡ ಸೇರಿದಂತೆ ಹಲವರು ಚನ್ನಬಸವ ಪಾಟೀಲ ಅವರೊಂದಿಗೆ ತಾಂಡಾಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

Leave A Reply

Your email address will not be published.