Shubhashaya News
Browsing Category

ಸುದ್ದಿ

ಹಣ ನೀಡುವಂತೆ ಜೀವಬೆದರಿಕೆ: ಕರುಣೇಶ್ವರ ಬಡಾವಣೆ ಕುಟುಂಬಕ್ಕೆ ಕಿರುಕುಳ ಆರೋಪ

ಕಲಬುರಗಿ: ಹಣ ನೀಡುವಂತೆ ಒತ್ತಾಯಿಸಿ ಜೀವಬೆದರಿಕೆ ಹಾಕಿ, ಕರುಣೇಶ್ವರ ಬಡಾವಣೆಯ ನಿವಾಸಿ ಬಲರಾಮ ರಾಣಪ್ಪ ಅವರ ಕುಟುಂಬಕ್ಕೆ ನಿರಂತರವಾಗಿ ಕಿರುಕುಳ ನೀಡುತ್ತಿರುವ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ವಿವಿಧ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಬುಧವಾರ…

ಸರ್ವಧರ್ಮ ಸಮನ್ವಯದ ಸಂತ ನಾರಾಯಣ ಗುರು : ಡಾ. ಉಮೇಶ್ ಜಾಧವ್

ಕಲಬರಗಿ : ಬ್ರಹ್ಮಶ್ರೀ ನಾರಾಯಣ ಗುರುಗಳು "ಒಂದೇ ಜಾತಿ,ಒಂದೇ ಮತ, ಒಬ್ಬನೇ ದೇವರು" ಎಂಬ ವಿಶ್ವಮಾನ್ಯವಾದ ತತ್ವದೊಂದಿಗೆ ಸರ್ವಧರ್ಮ ಸಮನ್ವಯದ ಸಂದೇಶ ಸಾರಿದ ಮಹಾನ್ ಸಂತ ಎಂದು ಮಾಜಿ ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ತಿಳಿಸಿದರು. ಕಲಬುರಗಿಯಲ್ಲಿ ಸೆ. ಒಂದರಂದು ಜಿಲ್ಲಾಡಳಿತದ…

ನೊಂದ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಲು ಆಗ್ರಹಿಸಿ ಮಾದಿಗ ಸಂಘಟನೆಗಳ ಒಕ್ಕೂಟ ಪ್ರತಿಭಟನೆ

ಕಲಬುರಗಿ: ರಾಯಚೂರು ಜಿಲ್ಲೆಯ ವಕ್ರಾಣಿ ಹಾಗೂ ವಿಜಯಪುರ ಜಿಲ್ಲೆಯ ಮುತ್ತಗಿ ಗ್ರಾಮಗಳಲ್ಲಿ ದಲಿತ ಸಮುದಾಯದ ಯುವತಿಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಮತ್ತು ಕೊಲೆ ಪ್ರಕರಣಗಳನ್ನು ಖಂಡಿಸಿ, ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಹಾಗೂ ನೊಂದ ಕುಟುಂಬಗಳಿಗೆ ಸೂಕ್ತ…

ಡಾ.ಅಪ್ಪಾಜಿಯವರ ಶಿಕ್ಷಣ ಸೇವೆ ಸದಾ ಸ್ಮರಣೀಯ: ಡಾ. ಪ್ರಭಾ ಮಲ್ಲಿಕಾರ್ಜುನ ಶಾಮನೂರು

ಕಲಬುರಗಿ: ಶರಣಬಸವೇಶ್ವರ ಸಂಸ್ಥಾನದ 8ನೇ ಮಹಾದಾಸೋಹ ಪೀಠಾಧಿಪತಿಗಳಾಗಿದ್ದ ಲಿಂಗೈಕ್ಯ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿಯವರ ಪ್ರಥಮ ಪುಣ್ಯಸ್ಮರಣೋತ್ಸವದ ಅಂಗವಾಗಿ ಬುಧವಾರ ನಗರದ ಶ್ರೀ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಕಾರ್ಯಕ್ರಮದಲ್ಲಿ ಭಾವಪೂರ್ಣ ನುಡಿನಮನ…

ವಿದ್ಯಾರ್ಥಿಗಳಲ್ಲಿ ಅಂಬೇಡ್ಕರ್ ಜ್ಞಾನ ಹೆಚ್ಚಾಗಬೇಕು: ಕುಮಾರ್ ಬುರಡಿಕಟ್ಟಿ

ಕಲಬುರಗಿ: ಇಂದಿನ ವಿದ್ಯಾರ್ಥಿಗಳು ಮೌಢ್ಯವನ್ನು ಬಿತ್ತರಿಸುವ ‘ವಾಟ್ಸಪ್ ಯುನಿವರ್ಸಿಟಿ’ಯ ಪ್ರಭಾವದಿಂದ ಹೊರಬಂದು, ಡಾ. ಬಿ.ಆರ್. ಅಂಬೇಡ್ಕರ್ ಅವರ ಬರಹಗಳು ಮತ್ತು ಚಿಂತನೆಗಳನ್ನು ಹೆಚ್ಚು ಅಧ್ಯಯನ ಮಾಡಬೇಕು ಎಂದು ಪತ್ರಕರ್ತ ಕುಮಾರ್ ಬುರಡಿಕಟ್ಟಿ ಹೇಳಿದರು. ನಗರದ ಕರ್ನಾಟಕ ಪೀಪಲ್ಸ್…

ಕೇಂದ್ರ ಕಾರಾಗೃಹದಲ್ಲಿ ಎಲೆಕ್ಟ್ರಿಷಿಯನ್ ತರಬೇತಿ ಪಡೆದ ಬಂದಿಗಳಿಗೆ ತರಬೇತಿ

ಕಲಬುರಗಿ: ಗುಲಬರ್ಗಾ ಜನ ಶಿಕ್ಷಣ ಸಂಸ್ಥಾನ ಹಾಗೂ ಕಲಬುರಗಿ ಕೇಂದ್ರ ಕಾರಾಗೃಹದ ಸಹಯೋಗದಲ್ಲಿ ಕೌಶಲ್ಯ ಅಭಿವೃದ್ಧಿ ತರಬೇತಿ ಯೋಜನೆಯಡಿ ಕಾರಾಗೃಹದ 40 ಮಂದಿ ಶಿಕ್ಷಾ ಬಂದಿಗಳಿಗೆ ನೀಡಲಾಗಿದ್ದ ಎಲೆಕ್ಟ್ರಿಷಿಯನ್ ತರಬೇತಿಯ ಮೌಲ್ಯಮಾಪನ ಕಾರ್ಯಕ್ರಮ ನಡೆಯಿತು. ಕಳೆದ ಜುಲೈ 5ರಿಂದ ಆರಂಭಗೊಂಡಿದ್ದ…

ಆಳಂದ: ಪ್ರಜಾಸೇವಾ ಜನಸ್ಪಂದನ ಅಭಿಯಾನಕ್ಕೆ ಪೂರ್ವಸಿದ್ಧತೆ;

ಆಳಂದ: ತಹಸೀಲ್ದಾರ ಕಚೇರಿಯಲ್ಲಿ ಪ್ರಜಾಸೇವಾ ಜನಸ್ಪಂದನ ಅಭಿಯಾನ ಪೂರ್ವ ಸಿದ್ಧತೆ ಸಭೆಯಲ್ಲಿ ತಹಸೀಲ್ದಾರ ಅಣ್ಣಾರಾವ್ ಪಾಟೀಲ ಮಾತನಾಡಿದರು. ಮುಖ್ಯಾಧಿಕಾರಿ ಸಂಗಮೇಶ ಪನಶೆಟ್ಟಿ, ಬಿಸಿಎಂ ಅಧಿಕಾರಿ ಗಜಾನಂದ ಬುಕ್ಕಾ ಇತರರು ಇದ್ದರು. ಆಳಂದ: ರಾಜ್ಯ ಸರಕಾರದ ನಿರ್ದೇಶನದಂತೆ ಆಳಂದ ತಾಲೂಕಿನಲ್ಲಿ…

ಸಿಯುಕೆಯಿಂದ ಮೂರು ದಿನಗಳ ವಿಸ್ತರಣಾ ಕಾರ್ಯಕ್ರಮ

ಆಳಂದ: ಕಡಗಂಚಿ ವಿದ್ಯಾರ್ಥಿಗಳಿಗಾಗಿ ಸಿಯುಕೆ ಆಯೋಜಿಸಿದ್ದ ‘ಪ್ರವರ್ತನ’ ವಿಸ್ತರಣಾ ಕಾರ್ಯಕ್ರಮದಲ್ಲಿ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಅವರು ವಿದ್ಯಾರ್ಥಿನಿಯರಿಗೆ ಪ್ರಮಾಣ ಪತ್ರ ನೀಡಿದರು. ಆಳಂದ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಐಇಇಇ-ಎಐಜಿಎಟಿ ಅಫಿನಿಟಿ ಗ್ರೂಪ್,…

ಪಡಸಾವಳಿ ಶಾಲೆ ಬಾಲಕಿಯರ ಖೋ ಖೋ ತಾಲೂಕು ಮಟ್ಟಕ್ಕೆ

ಆಳಂದ: ಪಟ್ಟಣದ ಸಾರ್ವಜನಿಕ ಕ್ರೀಡಾಂಗಣದಲ್ಲಿ ನಡೆದ ಮಾದನಹಿಪ್ಪರಗಾ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದ ಪಡಸಾವಳಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯರು ಕೊಚ್‌ಗಳೊಂದಿಗೆ ಸಂಭ್ರಮಿಸಿದರು. ಆಳಂದ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಶ್ರಯದಲ್ಲಿ…

ಕೆಇಎ ವಿಭಾಗವಾರು ವಲಯ ಕೇಂದ್ರ ಸ್ಥಾಪಿಸಿ: ಮುಖ್ಯಮಂತ್ರಿಗಳಿಗೆ ಹಣಮಂತ ಶೇರಿ ಮನವಿ

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಏಇಂ) ಸೇವೆಗಳನ್ನು ವಿಕೇಂದ್ರೀಕರಣಗೊಳಿಸಿ, ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ವಿಭಾಗವಾರು ವಲಯ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ವಿದ್ಯಾರ್ಥಿಗಳು ಹಾಗೂ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಅಭ್ಯರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ಥಳೀಯ ಮಟ್ಟದಲ್ಲೇ…