ಆಳಂದ: ಸಿಯುಕೆಯಲ್ಲಿ ಮಕ್ಕಳ ಸ್ನೇಹಿ ಗ್ರಂಥಾಲಯ ಆನ್‌ಲೈನ್ ಕೋರ್ಸ್ ಮಾಹಿತಿ ಕೈಪಿಡಿಯನ್ನು ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಬಿಡುಗಡೆಗೊಳಿಸಿದರು. ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ, ಡೀನ್ ಪ್ರೊ. ಜಿ. ಆರ್. ಅಂಗಡಿ, ಡಾ. ಮಯೂರ್ ಪೂಜಾರಿ ಇತರರು ಇದ್ದರು.
ಆಳAದ: ತಾಲೂಕಿನ ಕಡಗಂಚಿ ಬಳಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಶಿಕ್ಷಣ ಅಧ್ಯಯನ ವಿಭಾಗ ಹಾಗೂ ಕಲಿಕೆ–ಟಾಟಾ ಟ್ರಸ್ಟ್, ಬೆಂಗಳೂರು ಇವರ ಸಹಯೋಗದಲ್ಲಿ ‘ಮಕ್ಕಳ ಸ್ನೇಹಿ ಗ್ರಂಥಾಲಯಗಳ ಅಭಿವೃದ್ಧಿ ಮತ್ತು ನಿರ್ವಹಣೆ’ ಕುರಿತು ಪ್ರಮಾಣಪತ್ರ ಕೋರ್ಸ್ಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಆನ್‌ಲೈನ್ ನೋಂದಣಿ ಪ್ರಕ್ರಿಯೆಯು ಸೆಪ್ಟೆಂಬರ್ ೨೩ರಿಂದ ಪ್ರಾರಂಭವಾಗಿದ್ದು, ಅಕ್ಟೋಬರ್ ೯, ೨೦೨೬ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಆಸಕ್ತ ಅಭ್ಯರ್ಥಿಗಳು (hಣಣಠಿs://ಛಿuಞಚಿಜm.sಚಿmಚಿಡಿಣh.eಜu.iಟಿ/iಟಿಜex.ಠಿhಠಿ/siಣe/iಟಿಜex) ಮೂಲಕ ಅರ್ಜಿ ಸಲ್ಲಿಸಬಹುದು. ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಅಕ್ಟೋಬರ್ ೩೦, ೨೦೨೬ರಂದು ಪ್ರಕಟಿಸಲಾಗುವುದು. ಕೋರ್ಸ್ನ ತರಗತಿಗಳು ನವೆಂಬರ್ ೯, ೨೦೨೬ರಿಂದ ಆರಂಭವಾಗಲಿವೆ.
ಕರ್ನಾಟಕದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಂಥಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರು ಹಾಗೂ ಗ್ರಂಥಾಲಯ ಮೇಲ್ವಿಚಾರಕರು ಈ ಕೋರ್ಸ್ಗೆ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ಸಂಸ್ಥೆಯಿAದ ೧೨ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಪ್ರತಿ ಬ್ಯಾಚ್‌ನಲ್ಲಿ ಗರಿಷ್ಠ ೪೦ ಅಭ್ಯರ್ಥಿಗಳಿಗೆ ಪ್ರವೇಶ ನೀಡಲಾಗುವುದು.
ಐದು ತಿಂಗಳ ಅವಧಿಯ ಈ ೯ ಕ್ರೆಡಿಟ್‌ಗಳ ಕೌಶಲ್ಯವರ್ಧನಾ ಪ್ರಮಾಣಪತ್ರ ಕೋರ್ಸ್ ಪ್ರಸ್ತುತ ಕನ್ನಡ ಮಾಧ್ಯಮದಲ್ಲಿ ನೀಡಲಾಗುತ್ತಿದೆ.ಕೋರ್ಸ್ನಲ್ಲಿ ಸೈದ್ಧಾಂತಿಕ ಜ್ಞಾನಕ್ಕೆ ಪೂರಕವಾಗಿ ವಿವಿಧ ಪ್ರಾಯೋಗಿಕ ಚಟುವಟಿಕೆಗಳನ್ನೂ ಒಳಗೊಂಡಿದೆ. ಓದುಗರನ್ನು ತೊಡಗಿಸಿಕೊಳ್ಳುವುದು, ಗ್ರಂಥಪಾಲಕರ ಪಾತ್ರ, ಪುಸ್ತಕಗಳ ಸಂಗ್ರಹ ಹಾಗೂ ಮಕ್ಕಳನ್ನು ಓದಿನತ್ತ ಆಕರ್ಷಿಸುವ ಚಟುವಟಿಕೆಗಳ ಕುರಿತು ತರಬೇತಿ ನೀಡಲಾಗುವುದು.
ಇದರ ಜೊತೆಗೆ ಪುಸ್ತಕ ಪರಿಚಯ (ಃooಞ ಖಿಚಿಟಞs), ಗಟ್ಟಿ ಓದು (ಖeಚಿಜ-ಂಟouಜ Sessioಟಿs), ಕಥೆ ಹೇಳುವಿಕೆ (Sಣoಡಿಥಿ ಣeಟಟiಟಿg), ಪುಸ್ತಕ ವಿಮರ್ಶೆ (ಃooಞ ಖevieತಿs), ನಿಧಿಶೋಧನೆ (ಖಿಡಿeಚಿsuಡಿe ಊuಟಿಣs), ಪುಸ್ತಕ ಹರಾಜು (ಃooಞ ಂuಛಿಣioಟಿs), ಪುಸ್ತಕ ವಿನಿಮಯ (ಃooಞ ಖeಟಚಿಥಿs) ಸೇರಿದಂತೆ ಮಕ್ಕಳನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವ ಹಲವು ನವೀನ ಚಟುವಟಿಕೆಗಳನ್ನು ಪರಿಚಯಿಸಲಾಗುವುದು.
ಈ ಕಾರ್ಯಕ್ರಮವನ್ನು ಆನ್‌ಲೈನ್ ಹಾಗೂ ಮುಖಾಮುಖಿ (ನೇರ) ತರಗತಿಗಳನ್ನು ಒಳಗೊಂಡ ಮಿಶ್ರ ಕಲಿಕಾ ವಿಧಾನದಲ್ಲಿ (ಃಟeಟಿಜeಜ ಒoಜe oಜಿ ಐeಚಿಡಿಟಿiಟಿg) ನಡೆಸಲಾಗುತ್ತದೆ. ಕಾರ್ಯಕ್ರಮದ ಪಠ್ಯಕ್ರಮದಲ್ಲಿ ‘ಕಲಿಕಾ ತಾಣವಾಗಿ ಗ್ರಂಥಾಲಯ’, ‘ಮಕ್ಕಳ ಸ್ನೇಹಿ ಗ್ರಂಥಾಲಯಗಳು’ ಮತ್ತು ‘ಕೋರ್ಸ್ ಪ್ರಾಜೆಕ್ಟ್’ ಪ್ರಮುಖ ವಿಷಯಗಳಾಗಿದ್ದು, ಭಾಗವಹಿಸುವವರಿಗೆ ಪರಿಕಲ್ಪನಾತ್ಮಕ ತಿಳುವಳಿಕೆಯೊಂದಿಗೆ ಪ್ರಾಯೋಗಿಕ ಅನುಭವವನ್ನೂ ಒದಗಿಸಲಾಗುತ್ತದೆ.
“ರಾಷ್ಟ್ರೀಯ ಶಿಕ್ಷಣ ನೀತಿ–೨೦೨೦ರ ಆಶಯದಂತೆ, ಗ್ರಂಥಪಾಲಕರ ಸಾಮರ್ಥ್ಯವನ್ನು ಬಲಪಡಿಸುವುದು ಅಗತ್ಯ. ಮಕ್ಕಳ ಸಮಗ್ರ ಅಭಿವೃದ್ಧಿಗೆ ಪೂರಕವಾದ ಮಕ್ಕಳ ಸ್ನೇಹಿ ಗ್ರಂಥಾಲಯಗಳನ್ನು ರೂಪಿಸುವಲ್ಲಿ ಈ ಪ್ರಮಾಣಪತ್ರ ಕೋರ್ಸ್ ಮಹತ್ವದ ಪಾತ್ರ ವಹಿಸಲಿದೆ,” ಎಂದು ವಿ.ವಿ.ಯ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ತಿಳಿಸಿದ್ದಾರೆ.
“ಗ್ರಾಮ ಪಂಚಾಯಿತಿ ಗ್ರಂಥಾಲಯಗಳನ್ನು ಬಲಪಡಿಸುವ ಹಾಗೂ ಗ್ರಂಥಪಾಲಕರು ಮತ್ತು ಶಿಕ್ಷಕರ ವೃತ್ತಿಪರ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ಈ ಕಾರ್ಯಕ್ರಮವು ರಾಜ್ಯದ ಲಕ್ಷಾಂತರ ಮಕ್ಕಳಿಗೆ ಪ್ರಯೋಜನಕಾರಿಯಾಗಲಿದೆ,” ಎಂದು ಕುಲಸಚಿವ ಪ್ರೊ. ಆರ್. ಆರ್. ಬಿರಾದಾರ್ ತಿಳಿಸಿದ್ದಾರೆ.
ಈ ಪ್ರಮಾಣಪತ್ರ ಕೋರ್ಸ್ಗೆ ಕಲಿಕೆ–ಟಾಟಾ ಟ್ರಸ್ಟ್, ಬೆಂಗಳೂರು ಆರ್ಥಿಕ ನೆರವು ನೀಡುತ್ತಿದೆ. ಅಭ್ಯರ್ಥಿಗಳು ₹೫೦೦ ನೋಂದಣಿ ಶುಲ್ಕ ಪಾವತಿಸಬೇಕು. ಆದರೆ ₹೩,೫೦೦ ಪರೀಕ್ಷಾ ಶುಲ್ಕ ಹಾಗೂ ಪ್ರಯಾಣ ಭತ್ಯೆ ಸೇರಿದಂತೆ ಇತರ ಅರ್ಹ ವೆಚ್ಚಗಳನ್ನು ಕಲಿಕೆ–ಟಾಟಾ ಟ್ರಸ್ಟ್ ಭರಿಸಲಿದೆ.
ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯಿತಿಗಳಿಗೆ ಸಂಬAಧಿಸಿದ ಅಧಿಕಾರಿಗಳು ಮತ್ತು ಸಂಸ್ಥೆಗಳು, ರಾಜ್ಯದಾದ್ಯಂತ ಕಾರ್ಯನಿರ್ವಹಿಸುತ್ತಿರುವ ಅರ್ಹ ಗ್ರಾಮ ಪಂಚಾಯಿತಿ ಗ್ರಂಥಾಲಯ ಸಿಬ್ಬಂದಿಗಳು ಈ ಪ್ರಯೋಜನ ಪಡೆಯುವಂತೆ ಸಿಯುಕೆ ವಿನಂತಿಸುತ್ತದೆ.
ಕೋರ್ಸ್ನ ಪ್ರವೇಶಾತಿ ಹಾಗೂ ಇತರೆ ಹೆಚ್ಚಿನ ಮಾಹಿತಿಗಾಗಿ ಸಿಯುಕೆ ಶಿಕ್ಷಣ ಮತ್ತು ತರಬೇತಿ ನಿಕಾಯದ ಡೀನ್ ಪ್ರೊ. ಜಿ. ಆರ್. ಅಂಗಡಿ ಹಾಗೂ ಕಾರ್ಯಕ್ರಮ ಸಂಯೋಜಕ ಮತ್ತು ಸಹಾಯಕ ಪ್ರಾಧ್ಯಾಪಕ ಡಾ. ಮಯೂರ್ ಪೂಜಾರಿ ಅವರನ್ನು ಸಂಪರ್ಕಿಸಬಹುದಾಗಿದೆ. ಇ-ಮೇಲ್: mಚಿಥಿuಡಿಠಿooರಿಚಿಡಿi@ಛಿuಞ.ಚಿಛಿ.iಟಿ, ಮೊಬೈಲ್: ೮೮೮೮೧೫೭೦೫೮.