ಜೇವರ್ಗಿ: ವಿಜಯಪುರ ಜಿಲ್ಲೆಯ ಬಸವನ ಭಾಗೇವಾಡಿ ತಾಲೂಕಿನ ನಂದಿಹಾಳ ಗ್ರಾಮದಲ್ಲಿ ೧೪ ವರ್ಷಗಳಿಂದ ಇದ್ದ ಗಾಣಿಗರ ಆರಾಧ್ಯ ದೇವತೆ ಗಾಣದೇವತೆ ಮೂರ್ತಿಯನ್ನು ಯಾರೋ ಕಿಡಗೇಡಿಗಳು ರಾತ್ರೋ ರಾತ್ರಿ ತೆರವು ಗೊಳಿಸಿ ಗಾಣಿಗ ಸಮಾಜದ ಸ್ವಾಭಿಮಾನಕ್ಕೆ ದಕ್ಕೆ ತಂದಿದ್ದು ಇದನ್ನು ಸಮಾಜ ಉಗ್ರವಾಗಿ ಖಂಡಿಸುತ್ತದೆ ಎಂದು ಜೇವರ್ಗಿ ತಾಲೂಕ ಗಾಣಿಗ ಸಮಾಜ ಅಧ್ಯಕ್ಷ ಸುರೇಶ ಪಾಟೀಲ್ ನೇದಲಗಿ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ನಂದಿಹಾಳ ಗ್ರಾಮದಲ್ಲಿ ೧೪ ವರ್ಷಗಳಿಂದ ಇದ್ದ ಗಾಣಿಗರ ಆರಾಧ್ಯ ದೇವತೆ ಗಾಣದೇವತೆ ಮೂರ್ತಿಯನ್ನು ಯಾರೋ ಕಿಡಗೇಡಿಗಳು ರಾತ್ರೋ ರಾತ್ರಿ ತೆರವು ಗೊಳಿಸಿ ಗಾಣಿಗರ ಸ್ವಾಭಿಮಾನಕ್ಕೆ ದಕ್ಕೆ ಉಂಟುಮಾಡಿದೆ. ಎಲ್ಲಾ ಸಮಾಜವನ್ನು ಪ್ರೀತಿಸಿ ತನ್ನ ಸಮಾಜವನ್ನು ಪೂಜಿಸುವ ಸಮಾಜವಾಗಿದ್ದು, ಹಿಂತ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಕಿಡಗೇಡಿಗಳು ಮಾಡಿದ ಷಡ್ಯಂತ್ರವನ್ನು ಗಾಣಿಗರು ಸಹಿಸುವದಿಲ್ಲ ಎಂದಿದ್ದಾರೆ.
ಗಾಣಿಗರ ಸ್ವಾಭಿಮಾನದ ಪ್ರತೀಕವಾಗಿರುವ ಗಾಣದೇವಿ ಮೂರ್ತಿ ತೆರವಾದ ಸ್ಥಳದಲ್ಲೇ ಮರು ಪ್ರತಿಷ್ಠಾಪನೆ ಆಗಲೇಬೇಕು, ಒಂದು ವೇಳೆ ನಿರ್ಲಕ್ಷ ದೋರಣೆ ಮುಂದುವರಿಸಿದರೆ ರಾಜ್ಯದ್ಯಂತ ಉಗ್ರವಾದ ಹೋರಾಟ ಹಮ್ಮಿಕೊಳ್ಳುತ್ತೇವೆ ಎಂದು ತಿಳಿಸಿದರು.