ಚಿತ್ತಾಪುರ: ಪಟ್ಟಣದ ಬಸವೇಶ್ವರ ಚೌಕ್ ಬಳಿ ಬಸವ ಜಯಂತಿ ನಿಮಿತ್ತ ಬಸವೇಶ್ವರ ಪುತ್ಥಳಿಗೆ ತಹಶೀಲ್ದಾರ್ ಉಮಾಕಾಂತ ಹಳ್ಳೆ ಪೂಜೆ ಸಲ್ಲಿಸಿದರು.
ಚಿತ್ತಾಪುರ: ಕೊರೊನಾ ಸೋಂಕು ನಿಮಿತ್ತ ಸೆಮಿಲಾಕ್ ಡೌನ್‍ನಿಂದಾಗಿ ಪಟ್ಟಣದ ಬಸವೇಶ್ವರ ಚೌಕ್ ಬಳಿ ಬಸವೇಶ್ವರ ಪುತ್ಥಳಿಗೆ ಹಾಗೂ ತಹಶೀಲ್ ಕಚೇರಿಯಲ್ಲಿ ಬಸವೇಶ್ವರ ಭಾವಚಿತ್ರಕ್ಕೆ ತಹಶೀಲ್ದಾರ್ ಉಮಾಕಾಂತ ಹಳ್ಳೆ ಪೂಜೆ ಸಲ್ಲಿಸುವ ಮೂಲಕ ಸರಳವಾಗಿ ಬಸವ ಜಯಂತಿ ಆಚರಿಸಲಾಯಿತು.
ಆನಂದ ಪಾಟೀಲ್ ನರಬೋಳಿ ಧ್ವಜಾರೋಹಣ ಮಾಡಿದರು.
ಪುರಸಭೆ ಅಧ್ಯಕ್ಷ ಚಂದ್ರಶೇಖರ ಕಾಶಿ, ಎಪಿಎಂಸಿ ಅಧ್ಕಕ್ಷ ಸಿದ್ದುಗೌಡ ಅಫಜಲಪುರಕರ್, ಮುಖಂಡರಾದ ನಾಗರೆಡ್ಡಿ ಪಾಟೀಲ್ ಕರದಾಳ, ಚಂದ್ರಶೇಖರ ಅವಂಟಿ, ಅಣ್ಣಾರಾವ ಪಾಟೀಲ್, ನಾಗರಾಜ ರೇಷ್ಮಿ, ನಾಗರಾಜ ಭಂಕಲಗಿ, ರವೀಂದ್ರ ಸಜ್ಜನಶೆಟ್ಟಿ, ಚಂದ್ರಶೇಖರ ಸಾತನೂರ, ಅಂಬರೀಶ ಸುಲೇಗಾಂವ, ಮಹೇಶ ಬಟಗೇರಿ, ಪ್ರಭುದೇವ ಬಮ್ಮನಳ್ಳಿ, ವೀರಣ್ಣ ಸುಲ್ತಾನಪುರ, ಅನಂದ ಪಾಟೀಲ್, ಮಲ್ಲಣ್ಣ ಮಾಸ್ತರ, ರಮೇಶ ಕಾಳನೂರ, ಎಸ್‍ಎನ್ ಪಾಟೀಲ್ ಇದ್ದರು.