Shubhashaya News

ಬಸವೇಶ್ವರ ಜಯಂತ್ಯೋತ್ಸವ ಆಚರಣೆ

ಯಲಬುರ್ಗಾ ತಾಲೂಕಿನ ಗುಳೆ ಗ್ರಾಮದಲ್ಲಿ ಜಗಜ್ಯೋತಿ ಬಸವೇಶ್ವರ ಜಯಂತಿಯನ್ನು ಶುಕ್ರವಾರ ಆಚರಿಸಲಾಯಿತು.
ಯಲಬುರ್ಗಾ: ತಾಲೂಕಿನ ಗುಳೆ ಗ್ರಾಮದಲ್ಲಿ ಜಗಜ್ಯೋತಿ ಬಸವೇಶ್ವರ ಜಯಂತಿಯನ್ನು ಶುಕ್ರವಾರ ಆಚರಿಸಲಾಯಿತು. ರಾಷ್ಟ್ರೀಯ ಬಸವ ದಳದ ಅಧ್ಯಕ್ಷ ರೇಣುಕಪ್ಪ ಮಂತ್ರಿ ಮಾತನಾಡಿ, 12ನೇ ಶತಮಾನದಲ್ಲಿ ಕಾಂತ್ರಿಕಾರಿ ಬಸವಣ್ಣನವರ ವಚನಗಳು ಇಂದಿಗೂ ಪ್ರಸುತ್ತವಾಗಿದೆ. ಅಣ್ಣ ವಿಶ್ವಗುರುವೆಂದು ಖ್ಯಾತಿಯಾದ ಬಸವಣ್ಣವರ ಹಾಕಿ ಕೊಟ್ಟ ವಚನಗಳಿಂದ ಇಡೀ ಸಮಾಜವನ್ನು ಸುಧಾರಣೆ ಕೊಂಡಯ್ಯುವುದರ ಮೂಲಕ ಹೊಸ ಮಾರ್ಗವನ್ನು ಹಾಕಿ ಕೊಟ್ಟಿದ್ದಾರೆ. ಪ್ರತಿಯೊಬ್ಬರೂ ಬಸವಣ್ಣನವರ ಮಾರ್ಗವನ್ನು ಅನುಸರಿಸಬೇಕು. ಸಾಮಾಜಿಕ ವ್ಯವಸ್ಥೆಯನ್ನು ಪರಿವರ್ತನಗೊಳಿಸಲು ಅತ್ಯಂತ ಪಾತ್ರದಾಯಕವಾದ ಕೆಲಸ ನಿರ್ವಹಿಸಲಾಗಿದೆ. ಇಂದಿನ ಗ್ರಾಮೀಣ ಭಾಗದಲ್ಲಿ ಬಸವಣ್ಣನವರ ಆದರ್ಶ ಪಾಲನೆ ಚಾಚು ತಪ್ಪದೇ ಅನುರಿಸಬೇಕಿದೆ ಎಂದು ತಿಳಿಸಿದರು.
ಬಸವ ದಳದ ಉಪಾಧ್ಯಕ್ಷ ಶರಣಪ್ಪ ಹೊಸಳ್ಳಿ, ಪ್ರಮುಖರಾದ ಬಸವರಾಜ ಹೂಗಾರ, ಹನುಮೇಶ ಹೊಸಳ್ಳಿ, ಬಸವರಾಜ ಕೋಳೂರು, ಯಲ್ಲಪ್ಪ ವನಜಬಾವಿ, ಫಕೀರಪ್ಪ ಮಂತ್ರಿ, ಪಂಪಣ್ಣ ಹೊಸಳ್ಳಿ,ಶೇಖರಪ್ಪ ಮಂತ್ರಿ, ನಾಗಮ್ಮ ಜಾಲಿಹಾಳ,ಮಲ್ಲಮ್ಮ ಮಂತ್ರಿ ಸೇರಿ ಇನ್ನಿತರರು ಇದ್ದರು.

Leave A Reply

Your email address will not be published.