Shubhashaya News

ಖಜೂರಿ: ಆಧಾರ ನೋಂದಣಿ ಹಾಗೂ ತಿದ್ದುಪಡಿ ಕೇಂದ್ರವನ್ನು ಪುನಃ ಪ್ರಾರಂಭಿಸುವ0ತೆ ಆಗ್ರಹ

ಕಂದಾಯ ಹೋಬಳಿ ಖಜೂರಿ ನಾಡ ಕಾರ್ಯಾಲಯದಲ್ಲಿದ್ದ ಆಧಾರ ನೋಂದಣಿ ಹಾಗೂ ತಿದ್ದುಪಡಿ ಕೇಂದ್ರವನ್ನು ಪುನಃ ಪ್ರಾರಂಭಿಸುವAತೆ ಖಜೂರಿ ಹೋಬಳಿ ವ್ಯಾಪ್ತಿಯ ಜನರು ಒತ್ತಾಯಿಸಿದ್ದಾರೆ.
ಈ ಕುರಿತು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿರುವ ಸಾರ್ವಜನಿಕರು, ಆಳಂದ ತಾಲೂಕಿನ ಖಜೂರಿ ಕಂದಾಯ ಹೋಬಳಿ ನಾಡ ಕಾರ್ಯಾಲಯದಲ್ಲಿ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಆಧಾರ ನೋಂದಣಿ ಹಾಗೂ ತಿದ್ದುಪಡಿ ಕೇಂದ್ರವನ್ನು ಕೆಲವು ಸಮಯದಿಂದ ಸ್ಥಗಿತಗೊಳಿಸಲಾಗಿದೆ. ಇದರಿಂದ ಖಜೂರಿ ಹೋಬಳಿಯ ವ್ಯಾಪ್ತಿಯ ಗ್ರಾಮಗಳ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಖಜೂರಿ ಕಂದಾಯ ಹೋಬಳಿ ಕೇಂದ್ರವು ೨೧ ಗ್ರಾಮಗಳನ್ನು ಹೊಂದಿದೆ. ಈ ಕಂದಾಯ ಹೋಬಳಿಯು ಮಹಾರಾಷ್ಟçದ ಗಡಿಗೆ ಹೊಂದಿಕೊAಡಿದೆ. ಈ ಹೋಬಳಿ ವ್ಯಾಪ್ತಿಯ ಪ್ರತಿ ಗ್ರಾಮಗಳ ಪ್ರತಿ ಮನೆಯಲ್ಲಿ ಒಂದಿಲ್ಲೊAದು ಕೌಟುಂಬಿಕ ಸಂಬAಧ ಮಹಾರಾಷ್ಟçದ ಗ್ರಾಮಗಳೊಂದಿಗೆ ಬೆಸೆದುಕೊಂಡಿದೆ. ಆಧಾರ ಕಾರ್ಡ್ಗೆ ಸಂಬAಧಿಸಿದ ಹೊಸ ನೋಂದಣಿ, ವಿಳಾಸ ಬದಲಾವಣೆ, ಮೊಬೈಲ್ ಸಂಖ್ಯೆ ನವೀಕರಣ, ಬಯೋಮೆಟ್ರಿಕ್ ತಿದ್ದುಪಡಿ ಸೇರಿದಂತೆ ವಿವಿಧ ಸೇವೆಗಳಿಗಾಗಿ ನಾಗರಿಕರು ದೂರದ ಆಳಂದ ಅಥವಾ ಕಲಬುರಗಿ ನಗರಕ್ಕೆ ತೆರಳಬೇಕಾಗುತ್ತಿದೆ. ಇದರಿಂದ ಬಡವರು, ರೈತರು, ಹಿರಿಯ ನಾಗರಿಕರು, ಮಹಿಳೆಯರು, ವಿದ್ಯಾರ್ಥಿಗಳು ಹಾಗೂ ದಿವ್ಯಾಂಗರು ಅನಗತ್ಯ ಸಮಯ ಮತ್ತು ಹಣವನ್ನು ವ್ಯಯಿಸಬೇಕಾಗುತ್ತಿದೆ ಎಂದು ಅಲವತ್ತುಕೊಂಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಯೋಜನೆಗಳು, ವಿದ್ಯಾರ್ಥಿವೇತನ, ಪಿಂಚಣಿ, ಬ್ಯಾಂಕಿAಗ್ ಸೇವೆಗಳು, ಪಡಿತರ ವಿತರಣೆ ಸೇರಿದಂತೆ ಬಹುತೇಕ ಎಲ್ಲಾ ಸೇವೆಗಳಿಗೆ ಆಧಾರ ಕಡ್ಡಾಯವಾಗಿರುವ ಹಿನ್ನೆಲೆಯಲ್ಲಿ ಸ್ಥಳೀಯ ಮಟ್ಟದಲ್ಲಿ ಆಧಾರ ಸೇವೆ ಲಭ್ಯವಾಗುವುದು ಅತ್ಯಂತ ಅಗತ್ಯವಾಗಿದೆ ಎಂದು ಮನವರಿಕೆ ಮಾಡಿದ್ದಾರೆ.
ಆದ್ದರಿಂದ, ಸಾರ್ವಜನಿಕರ ಅನುಕೂಲವನ್ನು ಪರಿಗಣಿಸಿ ಖಜೂರಿ ಕಂದಾಯ ಹೋಬಳಿ ನಾಡ ಕಾರ್ಯಾಲಯದಲ್ಲಿದ್ದ ಆಧಾರ ನೋಂದಣಿ ಹಾಗೂ ತಿದ್ದುಪಡಿ ಕೇಂದ್ರವನ್ನು ಶೀಘ್ರವಾಗಿ ಪುನಃ ಪ್ರಾರಂಭಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

Leave A Reply

Your email address will not be published.