Shubhashaya News

ವರದಕ್ಷಣೆ ಸಮಾಜದ ಗೌರವವಲ್ಲ, ಹೆಣ್ಣುಮಕ್ಕಳ ಬದುಕಿನ ಮೇಲಿನ ಶಾಪ”: ರಾಜು ಜೆ. ಚವ್ಹಾಣ

ವರದಕ್ಷಣೆ ಮುಕ್ತ ಬಂಜಾರ ಸಮಾಜ ನಿರ್ಮಾಣ ಸಂಕಲ್ಪ ಘೋಷಣೆ

ಆಳಂದ: ಪಟ್ಟಣದಲ್ಲಿ ಬಂಜಾರಾ ಸಮಾಜ’ ಮಹಾ ಸಂಕಲ್ಪ ಸಮಾವೇಶ ಮುರಾಹರಿ ಮಹಾರಾಜ್ ಉದ್ಘಾಟಿಸಿದರು. ಬಂಜಾರಾ ಕ್ರಾಂತಿದಳ ರಾಜ್ಯಾಧ್ಯಕ್ಷ ರಾಜು ಜೆ. ಚವ್ಹಾಣ, ಕೆ.ಟಿ.ರಾಠೋಡ, ಶ್ರೀ ಸುನಿಲ ಮಹಾರಾಜ್, ಲತಾದೇವಿ ಶಿವಾಜಿ ರಾಠೋಡ ಇತರರು ಇದ್ದರು.

??

ಆಳಂದ: ಬಂಜಾರಾ ಮಹಾಸಂಕಲ್ಪ ಸಮಾವೇಶದಲ್ಲಿ ಪಾಲ್ಗೊಂಡ ಸಮುದಾಯ ಬಾಂಧವರು.

ಆಳಂದ: “ವರದಕ್ಷಣೆ ಎಂಬುದು ಸಂಪ್ರದಾಯದ ಹೆಸರಿನಲ್ಲಿ ಬೆಳೆದು ಬಂದಿರುವ ಸಾಮಾಜಿಕ ಪಿಡುಗು. ಹೆಣ್ಣುಮಕ್ಕಳನ್ನು ಹಣದ ಅಳತೆಯಲ್ಲಿ ನೋಡುವ ಮನೋಭಾವ ಸಮಾಜಕ್ಕೆ ಕಳಂಕ. ಸಮಾಜದ ಗೌರವವು ವರದಕ್ಷಣೆಯಿಂದಲ್ಲ, ಹೆಣ್ಣುಮಕ್ಕಳಿಗೆ ನೀಡುವ ಗೌರವ, ಶಿಕ್ಷಣ ಮತ್ತು ಸಮಾನ ಅವಕಾಶಗಳಿಂದ ಹೆಚ್ಚುತ್ತದೆ” ಎಂದು ಬಂಜಾರಾ ಕ್ರಾಂತಿದಳದ ರಾಜ್ಯಾಧ್ಯಕ್ಷ ರಾಜು ಜೆ. ಚವ್ಹಾಣ ಹೇಳಿದರು.
ಪಟ್ಟಣದ ಹಳೆ ಚೆಕ್‌ಪೋಸ್ಟ್ ಸಮೀಪದ ರಾಯಲ್ ಪ್ಯಾಲೇಸ್ ಫಂಕ್ಷನ್ ಹಾಲ್ನಲ್ಲಿ ವರದಕ್ಷಣೆ ಮುಕ್ತ ತಾಲೂಕು ಬಂಜಾರಾ ಸಮಾಜ ವೇದಿಕೆ ಆಯೋಜಿಸಿದ್ದ ‘ವರದಕ್ಷಣೆ ಮುಕ್ತ ಬಂಜಾರಾ ಸಮಾಜ’ ಮಹಾ ಸಂಕಲ್ಪ ಬೃಹತ್ ಸಮಾವೇಶ ಉದ್ದೇಶಿಸಿ ಅವರು ಮಾತನಾಡಿದರು.
ಬಂಜಾರಾ ಸಮಾಜವು ಸಂಸ್ಕೃತಿ, ಪರಂಪರೆ ಹಾಗೂ ಸ್ವಾಭಿಮಾನದ ಸಂಕೇತವಾಗಿದೆ. ಸಮಾಜದ ಅಭಿವೃದ್ಧಿಗೆ ಶಿಕ್ಷಣ, ಸ್ವಾವಲಂಬನೆ, ಮಹಿಳಾ ಸಬಲೀಕರಣ ಮತ್ತು ಸಾಮಾಜಿಕ ಐಕ್ಯತೆ ಅತ್ಯಗತ್ಯ. ಮಹಿಳೆಯರಿಗೆ ಗೌರವ ನೀಡುವ ಸಮಾಜವೇ ನಿಜವಾದ ಅಭಿವೃದ್ಧಿ ಹೊಂದಿದ ಸಮಾಜವಾಗುತ್ತದೆ. ಹೆಣ್ಣು-ಗಂಡು ಸಮಾನತೆ ಮನೆಮನೆಗಳಲ್ಲಿ ಆರಂಭವಾದಾಗ ಮಾತ್ರ ಸಾಮಾಜಿಕ ಪರಿವರ್ತನೆ ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಸಮಾಜವು ಕೈಗೊಂಡ ವರದಕ್ಷಣೆ ತಡೆ, ಸರಳ ವಿವಾಹ ಸೇರಿ ಜಾರಿಗೆ ತಂದ ನಿರ್ಣಯಗಳನ್ನು ಅನುಷ್ಠಾನಕ್ಕೆ ತರಲು ಸರ್ವರು ಮುಂದಾಗಬೇಕು ಎಂದು ಕರೆ ನೀಡಿದರು.
ಇದೇ ವೇಳೆ ಸಮಾಜದ ಜಿಲ್ಲಾ ಮುಖಂಡ ಕೆ.ಟಿ. ರಾಠೋಡ ಮಾತನಾಡಿ, ವರದಕ್ಷಣೆ ನಿರ್ಮೂಲನೆ, ಸರಳ ವಿವಾಹ ಮತ್ತು ಮಹಿಳೆಯರಿಗೆ ಗೌರವದ ಸ್ಥಾನ ಕಲ್ಪಿಸುವ ಇಂತಹ ಕಾರ್ಯಕ್ರಮಗಳು ಸಮಾಜಕ್ಕೆ ದಾರಿದೀಪವಾಗಿವೆ. ಇತಿಹಾಸದಲ್ಲಿ ಮಹಿಳೆಯರ ಮೇಲಿನ ಶೋಷಣೆ, ಬಾಲ್ಯವಿವಾಹ ಸೇರಿದಂತೆ ಹಲವು ಅನಿಷ್ಠ ಪದ್ಧತಿಗಳ ವಿರುದ್ಧ ಸಮಾಜ ಹೋರಾಟ ನಡೆಸಿದೆ. ಈಗ ಮಹಿಳೆಯರಿಗೆ ಶಿಕ್ಷಣ, ಉದ್ಯೋಗ ಹಾಗೂ ಆರ್ಥಿಕ ಸ್ವಾವಲಂಬನೆ ಕಲ್ಪಿಸುವ ಮೂಲಕ ಸಮಾಜವನ್ನು ಪ್ರಗತಿಯತ್ತ ಕೊಂಡೊಯ್ಯುವ ಸಂಕಲ್ಪ ಮಾಡಲಾಗಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಶ್ರೀ ಮುರಾಹರಿ ಮಹಾರಾಜ್, ಲಾಡಚಿಂಚೋಳಿ ತಾಂಡಾದ ಶ್ರೀ ಸುನಿಲ ಮಹಾರಾಜ, ಕಲಬುರಗಿ ಶರಣಿ ಲತಾದೇವಿ ಅವರು ಶೀರ್ವಚನ ನೀಡಿ ಐಕತ್ಯಯೊಂದಿಗೆ ಸರಳ ಜೀವನ ಶಿಕ್ಷಣ ಸ್ವಾಲಂಬನೆ ಮುಂದಾಗಿರುವುದ ಸಂಕಲ್ಪ ಶ್ಲಾಘನೀಯವಾಗಿದೆ ಇದನ್ನು ಅನುಸರಿಸಿಕೊಂಡು ಹೋಗಬೇಕು ಎಂದ ಸಲಹೆ ನೀಡಿದರು.
ಬಂಜಾರಾ ಭೂವಿ, ಕೊಂಚ ಕೊರಮ ಸಂಘದ ಶ್ಯಾಮರಾವ್ ಪವಾರ, ನ್ಯಾಯವಾದಿ ಸಂಘದ ಅಧ್ಯಕ್ಷ ಕಮಲ ರಾಠೋಡ, ಸೀತಾರಾಮ ರಾಠೋಡ, ಸುಭಾಷ ರಾಠೋಡ ಕೊರಳ್ಳಿ, ಗಂಗಾರಾಮ ಪವಾರ, ಮಾಣಿಕ ಜಾಧವ, ಸತೀಷ ಚವ್ಹಾಣ ಅನೇಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವರದಕ್ಷಣೆ ಮುಕ್ತ ಬಂಜಾರ ವೇದಿಕೆಯ ಭೋಜು ಆಡೆ, ಠಾಕೂರಸಿಂಗ್ ರಾಠೋಡ, ಕಂಟು ರಾಠೋಡ, ಶಿವಾಜಿ ಹೊದಲೂರ, ಸಂತೋಷ ಪವಾರ, ರಮೇಶ ರಾಠೋಡ, ಕೋಟೇಶ ರಾಠೋಡ, ಅನೀಮ ರಾಠೋಡ, ಕಿಶನ ರಾಠೋಡ, ಮನ್ನು ರಾಠೋಡ, ದಗಡು ಪವಾರ, ಸಜ್ಜನ ಚವ್ಹಾಣ ಸೇರಿ ೫೦ ತಾಂಡಾಗಳಿAದ ಸಾವಿರ ಮಹಿಳೆಯರು ಪುರುಷರು ಭಾಗವಹಿಸಿದ್ದರು. ಲಂಬಾಣಿ ತರುಣ ಸಂಘದ ಅಧ್ಯಕ್ಷ ಶಿವಾಜಿ ರಾಠೋಡ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ವೇದಿಕೆಯಲ್ಲಿ ವಿವಿಧ ತಾಂಡಾಗಳಿAದ ಆಗಮಿಸಿದ್ದ ಕಾರಬಾರಿಗಳಿಗೆ ಸಭೆಯ ನಿರ್ಣಯ ಪುಸ್ತಕಗಳನ್ನು ನೀಡಿ ಸನ್ಮಾನಿಸಿ ಗೌರವಿಸಲಾಯಿತು.

Leave A Reply

Your email address will not be published.