ಸಂಯುಕ್ತ ಕರ್ನಾಟಕ ಕಲಬುರಗಿ ಸ್ಥಾನಿಕ ಸಂಪಾದಕರಾದ
ಹಿರಿಯ, ಸಭ್ಯ ಪತ್ರಕರ್ತರಾದ ಜಯತೀರ್ಥ ಕಾಗಲಕರ ಇನ್ನಿಲ್ಲ ಎನ್ನುವುದು ನಂಬಲಾಗದ ಕಹಿಸತ್ಯ. ಕೆಲಸದ ಒತ್ತಡದಲ್ಲಿ ಮೈಮರೆತರೇನೋ…! ಒಬ್ಬ ಸಹೃದಯಿಯನ್ನು ಕಳೆದುಕೊಳ್ಳುವಂತಾಯಿತು.
ಹಸನ್ಮುಖಿ, ಮಿತಭಾಷಿ, ಹೃದಯವಂತ ಕಾಗಲಕರ ಅವರು ಸ್ನೇಹಜೀವಿ. ಅವರ ಗೆಳೆಯರ ಗುಂಪಿನಲ್ಲಿ ನಾವು ಇದ್ದೇವು. ಕಳೆದ ತಿಂಗಳು ಈ ದಂಪತಿ ನಮ್ಮ ಮನೆಗೆ ಬಂದಿದ್ದರು. ಇತ್ತೀಚೆಗೆ ಕಚೇರಿ ಹೊಣೆಗಾರಿಕೆ ಇವರ ಮೇಲಿತ್ತು. ಬರವಣಿಗೆಯಲ್ಲಿ ಎತ್ತಿದ ಕೈ. ರಾಜಕೀಯ,ನೀರಾವರಿ, ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವಂತ ತಮ್ಮದೇ ಶೈಲಿಯಲ್ಲಿ ವರದಿಗಳನ್ನು ಬರೆದು ಚಾಟಿ ಬೀಸಿದವರು.
ಪ್ರಾಮಾಣಿಕ ಪತ್ರಕರ್ತರಾದ ತಂದೆ ವಿ.ಎನ್.ಕಾಗಲಕರ ಅವರ ಹೆಸರನ್ನು ಮೆರೆಸಿದ ಜಯತೀರ್ಥ ಅವರು, ಇನ್ನು ಸಾಧಿಸುವುದು ಬಹಳಿತ್ತು.ಇಬ್ಬರು ಪುತ್ರಿಯರು, ಪತ್ನಿ ಪ್ರೀತಿಯ ಕುಟುಂಬದ ಆಧಾರ ಕಳಚಿತು. ಅವರ ಆತ್ಮಕ್ಕೆ ಶಾಂತಿ ಸಿಗಲಿ..
![💐]()

![🙏🏼]()

![🙏🏼]()