Shubhashaya News

ಜಯಂತಿ ಆಚರಣೆ ಪೂರ್ವಭಾವಿ ಸಭೆ

ಯಲಬುರ್ಗಾ: ಪಟ್ಟಣದ ತಹಸಿಲ್ ಕಚೇರಿಯಲ್ಲಿ ಡಾ.ಬಾಬು ಜೀವನರಾಮ್ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ ಹಿನ್ನೆಲೆ ಪೂರ್ವಭಾವಿ ಸಭೆ ಮಂಗಳವಾರ ನಡೆಯಿತು.
ತಹಶೀಲ್ದಾರ್ ಶ್ರೀಶೈಲ್ ತಳವಾರ ಮಾತನಾಡಿ,ಕೋವಿಡ್-19 ಹಿನ್ನೆಲೆ ಅಧಿಕಾರಿಗಳು ಸರಕಾರದ ಆದೇಶಗಳನ್ನು ಪಾಲಿಸಬೇಕು.ಜಯಂತಿಗಳನ್ನು ಸರಳವಾಗಿ ಆಚರಣೆ ಮಾಡಬೇಕಿದೆ. ಎರಡನೇ ಹಂತದ ಕೊರೊನಾ ಆರಂಭವಾದ ಹಿನ್ನೆಲೆ ಎಲ್ಲ ತಾಲೂಕು ಮಟ್ಟದ ಅಧಿಕಾರಿಗಳು ತಪ್ಪದೇ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಮುಂದಾಗಬೇಕು.ಎಪ್ರೀಲ್ 5 ರಂದು ಡಾ.ಬಾಬು ಜಗಜೀವನರಾಮ್ ಜಯಂತಿ, ಏಪ್ರೀಲ್ 14ಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆಯನ್ನು ಎಲ್ಲ ಇಲಾಖೆಯಲ್ಲಿ ಕಚೇರಿಯಲ್ಲಿ ಸರಳ ಆಚರಣೆ ನಡೆಸಲು ಮುಂದಾಗಬೇಕು ಎಂದು ಸಭೆಯಲ್ಲಿ ತಿಳಿಸಿದರು.
ಸಮಾಜ ಕಲ್ಯಾಣ ಅಧಿಕಾರಿ ವಿ.ಕೆ.ಬಡಿಗೇರ್, ಕ್ಷೇತ್ರ ಶಿಕ್ಷಣಾಧಿಕಾರಿ ಮೌನೇಶ ಬಡಿಗೇರ್,ಸಿಡಿಪಿಒ ವಿರುಪಾಕ್ಷಯ್ಯ ಹಿರೇಮಠ, ಬಿಸಿಎಂ ಹಿಂದುಳಿದ ವರ್ಗಗಳ ಕಲ್ಯಾಣಧಿಕಾರಿ ಎಸ್.ವಿ.ಭಜಂತ್ರಿ, ತಾಲೂಕು ಅಕ್ಷರ ದಾಸೋಹ ಅಧಿಕಾರಿ ಎಫ್.ಎಂ.ಕಳ್ಳಿ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಮರೇಶ ಹುಬ್ಬಳ್ಳಿ,ಸ್ಥಾಯಿ ಸಮಿತಿ ಅಧ್ಯಕ್ಷ ವಸಂತ ಬಾವಿಮನಿ,ಸದಸ್ಯ ಕಳಕಪ್ಪ ತಳವಾರ, ಮುಖಂಡರಾದ ಡಿ.ಕೆ.ಪರಶುರಾಮ, ಛತ್ರಪ್ಪ ಛಲವಾದಿ, ಮಲ್ಲು ಜಕ್ಕಲಿ,ಈರಪ್ಪ ಬಣಕಾರ್,ಶಿವಾನಂದ ಬಣಕಾರ್,ವಿಜಯ ಜಕ್ಕಲಿ,

Leave A Reply

Your email address will not be published.