Shubhashaya News

ಗಡಿಭಾಗದಲ್ಲಿ ಜಾನುವಾರು ಕಳ್ಳರ ಅಟ್ಟಹಾಸ ತೊಡೋಳ–ಖಂಡಾಳದಲ್ಲಿ  ಜಾನುವಾರು ಸರಣಿ ಕಳ್ಳತನ

ಆಳಂದ್:  ಖಂಡಾಳ ಗ್ರಾಮದ ಸಿದ್ದಪ್ಪ ಬಿ. ಗುರವ್ ಅವರ ಮನೆಯ ಮುಂದೆ ಶನಿವಾರ ಕಟ್ಟಲಾದ ಹಸುಗಳು ರಾತ್ರಿ ಕಳ್ಳತನ ನಡೆದಿದೆ.

ಆಳಂದ್: ಗಡಿಭಾಗದ ತೊಡೋಳ ಹಾಗೂ ಖಂಡಾಳ ಗ್ರಾಮಗಳಲ್ಲಿ ಜಾನುವಾರು ಸರಣಿ ಕಳ್ಳತನದ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರೈತರು ಭಯಭೀತರಾಗಿದ್ದಾರೆ.
ಶನಿವಾರ ಹಾಗೂ ಭಾನುವಾರ ಮಧ್ಯರಾತ್ರಿಯ ವೇಳೆ ಖಂಡಾಳ ಗ್ರಾಮದ ಸಿದ್ದಪ್ಪ ಭೀಮಶ್ಯಾ ಗುರವ್ ಅವರ ಮನೆ ಮುಂದೆ ಕಟ್ಟಿದ   ಮೂರು ಆಕಳುಗಳು ಕಳ್ಳತನವಾಗಿದೆ. ಅಲ್ಲದೆ   ತೊಡೋಳ ಗ್ರಾಮದ ರೈತ ವಿಜಯ ಅವರ ಎರಡು ಎತ್ತುಗಳು ಕಳ್ಳತನವಾಗಿದ್ದು, ಇದೇ ದೊಡ್ಡೋಳ ಗ್ರಾಮದಲ್ಲೇ ಈ ಹಿಂದೆ ಎರಡು ಎಮ್ಮೆಗಳೂ ಕಳ್ಳತನವಾಗಿರುವ ಘಟನೆ ನಡೆದಿದ್ದು, ಇದರಿಂದ ರೈತರಲ್ಲಿ ಆತಂಕ ಮತ್ತಷ್ಟು ಹೆಚ್ಚಿದೆ.

ರಾತ್ರಿ ವೇಳೆ ಜಾನುವಾರುಗಳನ್ನು ವಾಹನಗಳಲ್ಲಿ ತುಂಬಿಕೊಂಡು ಕಳ್ಳರು ಪರಾರಿಯಾಗುತ್ತಿರುವ ಬಗ್ಗೆ ಸ್ಥಳೀಯರು ಆರೋಪಿಸಿದ್ದು,
ಈಗಾಗಲೇ ಮಳೆ ಕೊರತೆ ಹಾಗೂ ಬೆಳೆ ನಷ್ಟದಿಂದ ಸಂಕಷ್ಟದಲ್ಲಿರುವ ರೈತರಿಗೆ ಜಾನುವಾರು ಕಳ್ಳತನ ಮತ್ತೊಂದು ದೊಡ್ಡ ಹೊಡೆತವಾಗಿದೆ.
ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗಳು ಹಿನ್ನಡೆಯಾಗಿದ್ದು, ಬೆಳೆ ಇಲ್ಲದೆ ಆರ್ಥಿಕ ಸಂಕಷ್ಟದಲ್ಲಿರುವ ರೈತರಿಗೆ ಜಾನುವಾರು ಕಳ್ಳತನದಿಂದ ಜೀವನೋಪಾಯಕ್ಕೂ ಧಕ್ಕೆಯಾಗಿದೆ. ಹೀಗಾಗಿ ಸಂಬಂಧಿತ ಪೊಲೀಸ್ ಇಲಾಖೆ ಹಾಗೂ ಅಧಿಕಾರಿಗಳು ಕೂಡಲೇ ಕಳ್ಳರನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು. ಜೊತೆಗೆ ಗಡಿಭಾಗದಲ್ಲಿ ರಾತ್ರಿ ಗಸ್ತು ಹೆಚ್ಚಿಸಿ, ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಹಾಗೂ ನಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಸೂಕ್ತ ನೆರವು ನೀಡಬೇಕು ಎಂದು ತಡೋಳ ಗ್ರಾಮದ ರೈತ ವಿಶ್ವನಾಥ್ ಪಾಟೀಲ್ ಹಾಗೂ ಖಂಡಾಳ ಗ್ರಾಮದ ಗುರುನಾಥ್ ಬಿರಾಜ್ದಾರ್ ಅವರು ಒತ್ತಾಯಿಸಿದ್ದಾರೆ.

ಜಾನುವಾರಗಳ ಕಳ್ಳತನ ಬಗ್ಗೆ ಆಳಂದ ಪೊಲೀಸ್ ಠಾಣೆಗೆ ರೈತರು ದೂರು ಸಲ್ಲಿಸಿದ್ದಾರೆ.

 ಖಂಡಾಳ ಗ್ರಾಮದ ಕೂಲಿ ಕಾರ್ಮಿ ರಾದ  ಸಿದ್ಧಪ್ಪಾ ಬಿ ಗುರುವ ಇವರ ತಡರಾತ್ರಿ ಮನೆ ಹತ್ತಿರ ಇರುವ 3 ಹಸುಗಳ ಕಳ್ಳತನ ಪ್ರಕರಣ ನಡೆದಿದೆ. ಚಿತ್ರದಲ್ಲಿ ಇರುವ ಹಸುಗಳು ಕಂಡು ಬಂದಲ್ಲಿ ಕೂಡಲೇ ಈ ಮೊಬೈಲ್ ಸಂಖ್ಯೆಗೆ ಸಂಪರ್ಕಿಸಲು8105749452, 8108938966, 7899614277 ರೈತರು ಕೋರಿದ್ದಾರೆ.

Leave A Reply

Your email address will not be published.