Shubhashaya News

ಸಹಕಾರಿ ಚಳುವಳಿಯ ಯಶಸ್ವಿಗೆ ಜನರ ಸಕ್ರಿಯ ಭಾಗವಹಿಸುವಿಕೆ ಅಗತ್ಯ

ಆಳಂದ: ಸುಂಟನೂರನಲ್ಲಿ ಕಲಬುರಗಿಯ ‘ಬಸವೇಶ್ವರ ಸಮಾಜ ಸೇವಾ ಬಳಗ ಆಯೋಜಿಸಿದ್ದ ‘ಅಂತಾರಾಷ್ಟಿçÃಯ ಸಹಕಾರ ದಿನಾಚರಣೆ’ಯಲ್ಲಿ ಶಂಕರ ಹುಲಮನಿ ಮಾತನಾಡಿದರು.

ಆಳಂದ: ಭಾರತದಲ್ಲಿ ಸಹಕಾರಿ ಚಳುವಳಿ ಆರಂಭವಾಗಿ ಶತಮಾನ ಕಳೆದರು ಕೂಡಾ ಅದರ ತತ್ವ, ಆಶಯ ಜನಸಾಮಾನ್ಯರಿಗೆ ಮುಟ್ಟುತ್ತಿಲ್ಲ. “ತಾನು ಎಲ್ಲರಿಗಾಗಿ, ಎಲ್ಲರೂ ತನಗಾಗಿ” ಎಂಬ ಸಹಕಾರದ ತತ್ವದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಹಕಾರಿ ಸಂಘಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ಅವುಗಳ ಸದುಪಯೋಗವನ್ನು ಮಾಡಿಕೊಂಡು ಸಹಕಾರಿ ಚಳುವಳಿಯ ಯಶಸ್ವಿಯಲ್ಲಿ ಜನರ ಸಕ್ರಿಯ ಭಾಗವಹಿಸುವಿಕೆ ಅಗತ್ಯವಾಗಿದೆ ಎಂದು ಯುವ ಮುಖಂಡ, ಸಮಾಜ ಸೇವಕ ಶಂಕರ ಹುಲಮನಿ ಹೇಳಿದರು.
ತಾಲೂಕಿನ ಸುಂಟನೂರನಲ್ಲಿ ಕಲಬುರಗಿಯ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶನಿವಾರ ಜರುಗಿದ ‘ಅಂತಾರಾಷ್ಟಿçÃಯ ಸಹಕಾರ ದಿನಾಚರಣೆ’ಯಲ್ಲಿ ಅವರು ಮಾತನಾಡುತ್ತಿದ್ದರು.
ಅರ್ಥಶಾಸ್ತç ಉಪನ್ಯಾಸಕ ಎಚ್.ಬಿ.ಪಾಟೀಲ್ ಮಾತನಾಡಿ, ರಾಷ್ಟçದ ಜನಸಾಮಾನ್ಯರ ಆರ್ಥಿಕ ಜೀವನದ ಸುಗಮ ನಿರ್ವಹಣೆಗೆ ಸಹಾಯಕರವಾಗಿ ಸಹಕಾರಿ ಸಂಸ್ಥೆಗಳು ಸೇವೆ ಸಲ್ಲಿಸುತ್ತಿವೆ. ಜನರು ಸದಸ್ಯರಾಗುವುದು, ಸಂಘಗಳ ರಚನೆ, ಸ್ವಯಂ ಉದ್ಯೋಗವನ್ನು ಮಾಡುವ ಮೂಲಕ ಸ್ವಂತ ಬೆಳವಣಿಗೆಗೆ ಜೊತೆ ಸಂಘ-ಸAಸ್ಥೆಗಳನ್ನು ಅಭಿವೃದ್ಧಿಪಡಿಸಬೇಕು. ಸರ್ಕಾರದ ವಿವಿಧ ಸಹಕಾರಿ ಯೋಜನೆಗಳನ್ನು ಬಳಸಿಕೊಳ್ಳುಬೇಕು. ‘ಸಹಕಾರ’ ಎಂಬ ಶಬ್ದವೇ ಬಹಳ ಅದ್ಭುತವಾದದ್ದು. ಎಲ್ಲೆಡೆ ಸಹಕಾರವಿರಬೇಕು. ‘ವಸ್ತು ವಿನಿಯಮ ಪದ್ಧತಿ’ಯಿಂದ ‘ಹಣ ವಿನಿಮಯ ಪದ್ಧತಿ’ಯೆಡೆಗೆ ಜನಸಾಮಾನ್ಯರನ್ನು ಸೆಳೆದು, ಆರ್ಥಿಕ ಜ್ಞಾನವನ್ನುಂಟು ಮಾಡುವಲ್ಲಿ ಸಹಕಾರ ಚಳುವಳಿ ಪಾತ್ರವಹಿಸಿದೆ. ಸಹಕಾರಿ ಸಂಸ್ಥೆಗಳ ಪಾತ್ರದ ಬಗ್ಗೆ ವ್ಯಾಪಕವಾದ ಜನಜಾಗೃತಿಯಾಗಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಎಲೆನಾವದಗಿ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯ ಶಿವಯೋಗೆಪ್ಪಾ ಎಸ್.ಬಿರಾದಾರ, ಪ್ರಮುಖರಾದ ದತ್ತು ಹಡಪದ, ದಿನೇಶ್ ಮಿಶ್ರಾ, ಶರಣಬಸಪ್ಪ, ಅನಿಲ್, ಮಲ್ಲಿಕಾರ್ಜುನ ಸೇರಿದಂತೆ ಇನ್ನಿತರರಿದ್ದರು.
ಕೋಟ್
ಸಹಕಾರಿ ತತ್ವವು ವೈಯಕ್ತಿಕ ಸ್ವಾರ್ಥವನ್ನು ಬಿಟ್ಟಿ ಪರಸ್ಪರ ಬೆರೆಯುವುದುನ್ನು ಕಲಿಸುತ್ತದೆ. ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಪ್ರಜಾಪ್ರಭುತ್ವ ಸಂಸ್ಥೆಯಾಗಿದೆ. ಸ್ವಸಹಾಯ ಮತ್ತು ಪರಸ್ಪರ ಸಹಾಯದ ಗುಣವನ್ನು ಹೊಂದಿದೆ. ಸೇವೆಯೇ ಮುಖ್ಯ ಗುರಿಯಾಗಿದ್ದು, ಲಾಭ ಗಳಿಕೆ ಗೌಣವಾಗಿದೆ. ಅಗ್ಗದ ಸಾಲ ಸೌಲಭ್ಯ ದೊರೆಯುತ್ತದೆ. ಉಳಿತಾಯ ಹಾಗೂ ಹೂಡಿಕೆಗೆ ಉತ್ತೇಜನ ನೀಡುತ್ತದೆ. ಸಹಕಾರಿ ಸಂಘಗಳು ವಿಶೇಷವಾಗಿ ರೈತರು, ಜನಸಾಮಾನ್ಯರಿಗೆ ತುಂಬಾ ಪ್ರಯೋಜನೆಯಾಗಿವೆ. ಎಚ್.ಬಿ.ಪಾಟೀಲ್, ಅರ್ಥಶಾಸ್ತç ಉಪನ್ಯಾಸಕರು.

Leave A Reply

Your email address will not be published.