ಯಲಬುರ್ಗಾ: ತಾಲೂಕಿನ ಹಿರೇಮ್ಯಾಗೇರಿ ಹಾಗೂ ಸಂಕನೂರು ಗ್ರಾಮ ಗ್ರಾಮ ಪಂಚಾಯಿತಿಯ ಚುನಾವಣೆಗೆ ಫಲಿತಾಂಶ ಬುಧವಾರ ಹೊರ ಹೊಮ್ಮಿತು.
ಈ ಎರಡು ಗ್ರಾಮ ಪಂಚಾಯಿತಿಯ ಪೈಕಿ ಹಿರೇಮ್ಯಾಗೇರಿ ಗ್ರಾಮ ಪಂಚಾಯಿತಿಯಲ್ಲಿ 13 ಸ್ಥಾನಗಳ ಪೈಕಿ 10 ಜನ ಕಾಂಗ್ರೆಸ್ ಬೆಂಬಲಿತರು ಆಯ್ಕೆಯಾಗಿದ್ದು, ಇನ್ನೂ ಉಳಿದ 3ಜನ ಬಿಜೆಪಿ ಪಕ್ಷದಿಂದ ಆಯ್ಕೆಯಾಗಿದ್ದಾರೆ. ಸಂಕನೂರು ಗ್ರಾಮ ಪಂಚಾಯಿತಿಯಲ್ಲಿ 11 ಸ್ಥಾನಗಳ ಪೈಕಿ 6 ಜನ ಕಾಂಗ್ರೆಸ್ ಬೆಂಬಲಿತವಾಗಿ ಆಯ್ಕೆಗೊಂಡರೆ 5 ಜನ ಬಿಜೆಪಿ ಪಕ್ಷದಿಂದ ಆಯ್ಕೆಗೊಂಡಿದ್ದಾರೆ.
ವಿಜಯೋತ್ಸವ: ಈ ವೇಳೆಯಲ್ಲಿ ಪಟ್ಟಣದ ತಹಸೀಲ್ ಕಚೇರಿಯಲ್ಲಿ ಮುಂಜಾನೆ ಗ್ರಾಮ ಪಂಚಾಯಿತಿ ಸದಸ್ಯರ ಫಲಿತಾಂಶ ಹೊರ ಹೊಮ್ಮುತ್ತಿದ್ದಾರೆ.ಕಾಂಗ್ರೆಸ್ ಪಕ್ಷದ ಮುಖಂಡರು ಪಟಾಕಿ ಸಿಡಿಸಿ ಸಂಭ್ರಮದಿಂದ ವಿಜಯೋತ್ಸವ ಆಚರಣೆ ಮಾಡಿದರು.
ಈ ವೇಳೆಯಲ್ಲಿ ಮುಖಂಡರಾದ ಆನಂದ ಉಳ್ಳಾಗಡ್ಡಿ, ಛತ್ರಪ್ಪ ಛಲವಾದಿ ,ದಸ್ತಗಿರಿಸಾಬ್ ಮ್ಯಾಗೇರಿ,ಖಾಜಾಸಾಬ್ ಅಮರವತಿ, ಅಬ್ದುಲ್ ಖಾದರಸಾಬ್, ಮಲ್ಲು ಜಕ್ಕಲಿ,ಚಂದುಸಾಬ್ ಮದಾರಿ,ಹುಸೇನಸಾಬ್ ಮ್ಯಾಗೇರಿ,ಈರಣ್ಣ ಪೋ.ಪಾಟೀಲ್,ಫಾತಿಮಾ ಖಾಜಾಸಾಬ್ ಅಮರವತಿ,ರಂಜಾನ್ ಮ್ಯಾಗೇರಿ,ಬಸಮ್ಮ ಕಟ್ಟಿಮನಿ,ವಿರೇಶ ಮಳ್ಳಿಕೇರಿ,ಲಕ್ಷ್ಮವ್ವ ಗೋಡಿನಾಳ,ನಾಗವ್ವ ತಳವಾರ ಇನ್ನಿತರರು ಇದ್ದರು.
Prev Post
Next Post
Comments are closed.