ವಾಡಿ, ಕರ್ನಾಟಕ ವಿಧಾನ ಪರಿಷತ್‌ನ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಶುಕ್ರವಾರ ಶಾಂತಿಯುತ ಮತದಾನ ನಡೆಯಿತು ಎಂದು ಚಿತ್ತಾಪುರ ತಾಲ್ಲೂಕು ದಂಡಾಧಿಕಾರಿ ನಾಗಯ್ಯ ಹಿರೇಮಠ ತಿಳಿಸಿದ್ದಾರೆ.
ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದ ಮತಗಟ್ಟೆ ಸಂಖ್ಯೆ 93 ರಲ್ಲಿ ಒಟ್ಟು 125 ಮತದಾರರಲ್ಲಿ 49 ಮಹಿಳೆಯರು, 57 ಪುರುಷರು ಸೇರಿದಂತೆ ಒಟ್ಟು106 ಜನ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು, ಶೇ.84.8% ರಷ್ಟು ಮತದಾನ ದಾಖಲಾಗಿದೆ ಎಂದು ಎಂದು ಚಿತ್ತಾಪುರ ತಾಲ್ಲೂಕು ದಂಡಾಧಿಕಾರಿ ನಾಗಯ್ಯ ಹಿರೇಮಠ ಮತದಾನದ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದ್ದಾರೆ.