ಶಹಾಬಾದ: ಶಿಕ್ಷಕರ ಮತಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ೨೩೩ ಜನ ಶಿಕ್ಷಕ ಮತದಾರರು ಮತ ಚಲಾಯಿಸಿದರು, ಶೇ.೮೪.೭೩ ಮತದಾನವಾಗಿದೆ.
ಒಟ್ಟು ೨೭೫ ಜನ ಶಿಕ್ಷಕ ಮತದಾರರಲ್ಲಿ ೧೧೨ ಜನ ಪುರಷ ಮತದಾರರ ಪೈಕಿ ೯೬ ಜನ, ೧೬೩ ಮಹಿಳಾ ಮತದಾರರಲ್ಲಿ ೧೩೭ ಜನ ಮತದಾರರು ಮತ ಚಲಾಯಿಸಿದರು.
ಮುಖ್ಯ ಚುನಾವಣಾಧಿಕಾರಿ ತಹಶೀಲ್ದಾರ ನೀಲಪ್ರಭ ಬಬಲಾದ, ಚುನಾವಣೆ ಶಿರಸ್ಥೇದಾರ ರಾಜೇಶ ದೇವಣಿ, ಚುನಾವಣಾ ವಿಷಯ ನಿರ್ವಾಹಕ ಗಂಗಾಧರ ವಾಗ್ಮೋರೆ, ಪಿಆರ್‌ಒ ಕಿರಣ ಕುಮಾರ, ಎಪಿಆರ್‌ಒ ದಯಾನಂದ, ಪಿಒ-೧ ಜಗದೀಶ, ಪಿಒ-೨ ರಾಹುಲ್, ಸೂಕ್ಷ ವೀಕ್ಷಕರ ರಾಜೇಶ ಜಾಧವ ಅವರು ಕರ್ತವ್ಯ ನಿರ್ವಹಿಸಿದರು.
ತಾಲೂಕ ತಹಶೀಲ್ದಾರ ಕಚೇರಿಯಲ್ಲಿ ನಡೆದ ಚುನಾವಣೆಗೆ ಪಿಐ ಪರಶುರಾಮ ವನಂಜಕರ್, ಪಿಎಸ್‌ಐ ಚಂದ್ರಕಾಂತ ಮೆಕಾಲೆ ಸಿಬ್ಬಂದಿ ವರ್ಗದವರು ಬಂದೋ ಬಸ್ತ್ ವ್ಯವಸ್ಥೆ ಮಾಡಿದ್ದರು.
Prev Post
ತಡಕಲ್ ಗ್ರಾಮದಲ್ಲಿ ದಸರಾ ಸಂಪನ್ನ: ಬಸವಕಲ್ಯಾಣದ ವೀರಶೆಟ್ಟಿ ಪಾಟೀಲರಿಗೆ ‘ಅಂಬವ್ವಾ ಮಾತೃರತ್ನ’ ಪ್ರಶಸ್ತಿ ಪ್ರದಾನ
Next Post