ಆಳಂದ: ಪಟ್ಟಣದಲ್ಲಿ ಕರವೇ ಅಧ್ಯಕ್ಷ ಪ್ರವೀಣ ಮೊದಲೆ ನೇತೃತ್ವದಲ್ಲಿ ಕಾರ್ಯಕರ್ತರು ತಹಸೀಲ್ದಾರ ಮೂಲಕ ಜಿಲ್ಲಾಧಿಕಾರಿಗಳಿಗೆ ಬೇಡಿಕೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಆಳಂದ: ಜೇವರ್ಗಿ ಹಾಗೂ ಶಹಾಬಾದ ತಾಲೂಕಿನ ಮದರಿ–ಕಡೆಹಳ್ಳಿ ಗ್ರಾಮಗಳ ನಡುವಿನ ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿರುವ ಬ್ಯಾರೇಜ್ ಕಾಮಗಾರಿಯಲ್ಲಿ ಸಿಲ್ಟ್ ಮಿಶ್ರಿತ ಮರಳು ಬಳಕೆ ಹಾಗೂ ಅನುಮತಿ ಇಲ್ಲದೆ ಬೇರೆ ಸ್ಥಳಗಳಿಂದ ಬೋಟ್, ಜೆಸಿಬಿ ಮೂಲಕ ಅಕ್ರಮ ಮರಳು ಗಣಿಗಾರಿಕೆ ನಡೆಸಲಾಗಿದೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಜಿಲ್ಲಾಧಿಕಾರಿಗಳಿಗೆ ತಹಸೀಲ್ದಾರ ಮೂಲಕ ಮನವಿ ಸಲ್ಲಿಸಿ ಒತ್ತಾಯಿಸಿದರು.
ಪಟ್ಟಣದ ತಾಲೂಕು ಆಡಳಿತ ಸೌಧ ಮುಂದೆ ಕರವೇ ತಾಲೂಕು ಅಧ್ಯಕ್ಷ ಪ್ರವೀಣ ಪಿ. ಮೊದಲೆ ನೇತೃತ್ವದಲ್ಲಿ ಕಾರ್ಯಕರ್ತರು ಅಲ್ಲಿನ ಆಡಳಿತ ವ್ಯವಸ್ಥೆ ವಿರುದ್ಧ ಘೋಷಣೆ ಕೂಗಿ ತಹಸೀಲ್ದಾರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಕಾರ್ಯಖರ್ತರು, ಖಾಸಗಿ ಸಂಸ್ಥೆ ಕೈಗೊಂಡಿರುವ ಕಾಮಗಾರಿಯಲ್ಲಿ ನಿಯಮ ಉಲ್ಲಂಘನೆಯಾಗಿರುವ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಮೇ ೧೯ರ ಪತ್ರದಲ್ಲಿ ಕಾಮಗಾರಿ ಸ್ಥಳದಲ್ಲಿ ದೊರೆಯುವ ಮರಳು ಸಿಲ್ಟ್ ಮಿಶ್ರಿತವಾಗಿದ್ದು, ಬಳಕೆಗೆ ಯೋಗ್ಯವಲ್ಲದ ಕಾರಣ ಒ-Sಚಿಟಿಜ ಬಳಸುವಂತೆ ಸೂಚಿಸಲಾಗಿತ್ತು. ಆದರೂ ಸಿಲ್ಟ್ ಮಿಶ್ರಿತ ಮರಳನ್ನೇ ಕಾಮಗಾರಿಗೆ ಬಳಸಲಾಗಿದೆ ಅವರು ಹೇಳಿದರು.
ಕಾಮಗಾರಿ ಸ್ಥಳವನ್ನು ಹೊರತುಪಡಿಸಿ ಬೇರೆ ಪ್ರದೇಶಗಳಿಂದ ಬೋಟ್ ಹಾಗೂ ಜೆಸಿಬಿ ಬಳಸಿ ಮರಳು ತೆಗೆಯಲಾಗಿದೆ. ಸ್ಥಳ ಪರಿಶೀಲನೆ ವೇಳೆ ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಆಡಳಿತ ಅಧಿಕಾರಿಗಳು ಅಕ್ರಮ ಮರಳು ಗಣಿಗಾರಿಕೆ ಪತ್ತೆಹಚ್ಚಿ ವರದಿ ಮಾಡಿದ್ದರೂ, ಸಂಬAಧಪಟ್ಟವರ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸದಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಕಾರ್ಯಕರ್ತರು ದೂರಿದರು.
ಎಂ ಸ್ಯಾಂಡ್ ಬಳಕೆಗೆ ಸೂಚನೆ ನೀಡಿದ್ದರೂ ಸಿಲ್ಟ್ ಮರಳಿಗೆ ರಾಯಲ್ಟಿ ವಿಧಿಸಿದ ಗಣಿ ಇಲಾಖೆ ಅಧಿಕಾರಿಗಳು ಹಾಗೂ ಅಕ್ರಮ ಗಣಿಗಾರಿಕೆ ತಡೆಯುವಲ್ಲಿ ವಿಫಲರಾದ ಸಣ್ಣ ನೀರಾವರಿ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳ ವಿರುದ್ಧವೂ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ್ಲ ಆಗ್ರಹಿಸಿ ತಹಸೀಲ್ದಾರ ಪರ ಆಗಮಿಸಿದ್ದ ಶಿರಸ್ತೆದಾರ ರಾಕೇಶ ಶೀಲವಂತ ಅವರ ಮೂಲಕ ಮನವಿ ಸಲ್ಲಿಸಿ ಒಂದು ವಾರದೊಳಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಜಿಲ್ಲೆಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಕರವೇ ತಾಲೂಕು ಅಧ್ಯಕ್ಷ ಪ್ರವೀಣ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಮಹೇಶ ವಾರಿಕ, ಸಂಚಾಲಕ ಆಕಾಶ ದೇಗಾಂವ, ಯುವ ಅಧ್ಯಕ್ಷ ಅಜಯ ಸಿ.ಎಂ., ಆಕಾಶ ಜಿಡಗಾ, ಪ್ರೀತಮ ಕೋರೆ, ಮಲ್ಲಿಕಾರ್ಜುನ ಶ್ರೀಂಗೇರಿ, ಕರಣ ಡೋಲೆ, ಆನಂದ ಬಿದರಿ, ಪ್ರೇಮ ರಾಠೋಡ, ನಿಖಿಲ ರಾಠೋಡ, ಭಾಗೇಶ ಮತ್ತಿತರು ಇದ್ದರು.