ಆಳಂದ: ಕೊರಳಿ ತಾಂಡಾ ವಸತಿ ಶಾಲೆಯಲ್ಲಿ ಆಚರಿಸಿದ ಸಾತಂತ್ರೊö್ಯÃತ್ಸವ ಧ್ವಜಾರೋಹಣ ಸಮಾರಂಭದಲ್ಲಿ ಪಾಲಕರು ಮಾತನಾಡಿದರು. ಉತ್ಸವದಲ್ಲಿ ಮಕ್ಕಳ ಉಡುಗೆ ತೊಡಗೆಯೊಂದಿಗೆ ಪಾಲ್ಗೊಂಡು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟು ಗಮನ ಸೆಳೆದರು.
ಆಳಂದ: ತಾಲೂಕಿನ ಕೊರಳ್ಳಿ ತಾಂಡದಲ್ಲಿರುವ ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿನ ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯಲ್ಲಿ ೮೦ನೇ ಸ್ವಾತಂತ್ರ‍್ಯ ದಿನಾಚರಣೆ ಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ದೇಶಭಕ್ತಿ ಗೀತೆ, ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಗಮನ ಸೆಳೆದರು.
ಕೊರಳ್ಳಿ ತಾಂಡಾದ ಮುಖಂಡರಾದ ಸಂಜಯ ರಾಠೋಡ, ಮೋತಿರಾಮ ಪವಾರ, ದಿನೇಶ ಪವಾರ, ಪಂಚಾಯಿತಿ ಸದಸ್ಯರಾದ ಮೋಹನ ರಾಠೋಡ, ಅನಿಲ್ ಚವ್ಹಾಣ, ಮಹೇಶ ರಾಠೋಡ, ಹಿರಿಯ ಮುಖಂಡ ನಂದು ರಾಠೋಡ ಸೇರಿದಂತೆ ತಾಂಡಾದ ಪಾಲಕರು ಹಾಗೂ ವಿವಿಧ ಊರುಗಳಿಂದ ಆಗಮಿಸಿದ್ದ ಪಾಲಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ನಂದು ರಾಠೋಡ, ಸ್ವಾತಂತ್ರ‍್ಯ ದಿನಾಚರಣೆ ಕೇವಲ ಧ್ವಜಾರೋಹಣಕ್ಕೆ ಸೀಮಿತವಾಗದೆ, ಮಕ್ಕಳಲ್ಲಿ ದೇಶಪ್ರೇಮ, ಶಿಸ್ತು, ಸಾಮಾಜಿಕ ಜವಾಬ್ದಾರಿ ಹಾಗೂ ರಾಷ್ಟಾçಭಿಮಾನದ ಮೌಲ್ಯಗಳನ್ನು ಬೆಳೆಸುವ ದಿನವಾಗಬೇಕು ಎಂದು ಹೇಳಿದರು.
ವಸತಿ ಶಾಲೆಯ ಮುಖ್ಯಗುರು ಸಿದ್ದಾರಾಮ ವಡಗಾಂವ, ಶಿಕ್ಷಕರಾದ ರಾಜು ದೋಣಿ, ಕರಿಷ್ಮಾ ಪವಾರ್, ಮಾರುತಿ ಜಮಾದಾರ, ಶಶಿಕಾಂತ ಜಮಾದಾರ ಸೇರಿದಂತೆ ಸಿಬ್ಬಂದಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳ ಸಾಂಸ್ಕೃತಿಕ ಪ್ರದರ್ಶನವನ್ನು ಪಾಲಕರು ಹಾಗೂ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದರು. ಶಿಕ್ಷಕ ಶಶಿಕಾಂತ ಜಮಾದಾರ ಕಾರ್ಯಕ್ರಮ ನಿರೂಪಿಸಿದರು.