ಕಲಬುರಗಿ: ಪ್ರಮೋದ ಮುತಾಲಿಕ ಸ್ಥಾಪಿತ ಶ್ರೀರಾಮ ಸೇನೆಯ ಕಲ್ಯಾಣ ಕರ್ನಾಟಕ ವಿಭಾಗೀಯ ಅಧ್ಯಕ್ಷ ಹಾಗೂ ಅಫಜಲಪುರ ತಾಲೂಕಿನ ಮಾಶ್ಯಾಳ ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ವಿರಕ್ತ ಮಠದ ಪೀಠಾಧಿಪತಿ ಶ್ರೀ ಮರುಳಾರಾಧ್ಯ ಸ್ವಾಮೀಜಿಯವರು ಸಿನಿಮಾ ಹಾಡು ಹಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ.
ವೈರಲ್ ವಿಡಿಯೋದಲ್ಲಿ ಕಾವಿಧಾರಿ ಸ್ವಾಮೀಜಿಯವರು ಕೈಯಲ್ಲಿ ಮೈಕ್ ಹಿಡಿದು “ಯಾರಿವಳು ಯಾರಿವಳು” ಎಂಬ ಜನಪ್ರಿಯ ಸಿನಿಮಾ ಗೀತೆಯನ್ನು ಹಾಡುತ್ತಿರುವ ದೃಶ್ಯ ಕಂಡುಬಂದಿದೆ. ಅವರ ಎದುರು ಮದ್ಯದ ಬಾಟಲಿಯಂತೆ ಕಾಣುವ ವಸ್ತುಗಳು ಇರುವುದು ಕೂಡ ವಿಡಿಯೋದಲ್ಲಿ ಗೋಚರಿಸುತ್ತಿದ್ದು, ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ರೀತಿಯ ಚರ್ಚೆಗೆ ಕಾರಣವಾಗಿದೆ.
ಶ್ರಾವಣ ಮಾಸದ ಆರಂಭದಲ್ಲೇ ಸ್ವಾಮೀಜಿಯವರ ಸಿನಿಮಾ ಹಾಡಿನ ವಿಡಿಯೋ ವೈರಲ್ ಆಗಿರುವುದು ಸಾರ್ವಜನಿಕ ವಲಯದಲ್ಲಿ ಕುತೂಹಲ ಮೂಡಿಸಿದೆ. ಈ ಹಿಂದೆ “ಹಿಂದೂ ಧರ್ಮ ರಕ್ಷಣೆಗಾಗಿ ಮಕ್ಕಳ ಕೈಯಲ್ಲಿ ಪೆನ್ನಿನ ಬದಲಿಗೆ ಖಡ್ಗ ಕೊಡಿ” ಎಂದಿದ್ದ ಇದೇ ಸ್ವಾಮಿಜಿ,
ಇದೀಗ ಮಠದಲ್ಲಿಯೇ ಸ್ವಾಮಿಜಿಯ ಬಿಂದಾಸ್ ಮೋಜಿನ ವಿಡಿಯೋ ಬಹಿರಂಗವಾಗಿರುವುದು ಚರ್ಚೆಯಾಗುತ್ತಿದೆ.