Shubhashaya News

ಸಂಪೂರ್ಣ ಲಾಕ್ ಡೌನ್ ಎಲ್ಲೆಡೆ ನಿಶಬ್ದ

ಯಲಬುರ್ಗಾ ಪಟ್ಟಣದ ಪ್ರಮುಖ ರಸ್ತೆಯು ಸೋಮವಾರ ಬಿಕೋ ಎನ್ನುತ್ತಿರುವುದು.
ಯಲಬುರ್ಗಾ: ಪಟ್ಟಣ ಸೇರಿದಂತೆ ನಾನಾ ಹಳ್ಳಿಗಳಲ್ಲಿ ಸೋಮವಾರದಿಂದ ಸಂಪೂರ್ಣವಾಗಿ ಲಾಕ್ ಡೌನ್ ಮಾಡಿದ ಹಿನ್ನೆಲೆ ಬಿಕೋ ವಾತವರಣ ಕಂಡು ಬಂದಿತು.
ಮುಂಜಾನೆಯಿಂದ ಪಟ್ಟಣದ ಪ್ರಮುಖ ಬೀದಿಗಳ ಸೇರಿದಂತೆ ಯಾವುದೇ ವಾಹನ ಚಲಾಯಿಸುವದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಿದ್ದು,ಹಳ್ಳಿಯಲ್ಲೂ ಯಾವುದೇ ಅಂಗಡಿ ಮುಗ್ಗಟ್ಟುಗಳ ಸಹ ತೆರೆದಿರಲಿಲ್ಲ.ಜನರು ಸಹ ಅನಾವಶ್ಯವಾಗಿ ಓಡಾಡಂತೆ ಕಟ್ಟು ನಿಟ್ಟಾದ ಕ್ರಮ ಅನುಸರಿವುದು ಬಹಳ ಯಶಸ್ವಿಯಾಗಿ ಕಂಡು ಬಂದಿತು. ಈಗಾಗಲೇ ಕೆಲವಡೆ ಕೋವಿಡ್ ನಿಯಮ ಅನುಸರಿಸಲು ನೀಡಿದ ಕರೆಗೆ ಸಾರ್ವಜನಿಕರು ಸ್ಪಂದಿಸಲಾಗಿದೆ.ತಾಲೂಕಿನ ಬೇವೂರು, ಹಿರೇವಂಕಲಕುಂಟಾ, ಮುಧೋಳ, ಹಿರೇಅರಳಿಹಳ್ಳಿ, ಮಾಟಲದಿನ್ನಿ, ಗಾಣದಾಳ ಸೇರಿದಂತೆ ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ಕೋವಿಡ್ ಕ್ರಮ ಅನುಸರಿಸಲು ಸೂಚನೆ ನೀಡಿದ್ದು, ಗ್ರಾಮೀಣ ಭಾಗದಲ್ಲಿ ಸಾರ್ವಜನಿಕರು ಓಡಾಡದಂತೆ ನಿಗಾವಹಿಸಲಾಗಿತ್ತು.

Leave A Reply

Your email address will not be published.