Shubhashaya News

“ಕಾವ್ಯ ಕಟ್ಟಲು ಅಧ್ಯಯನಶೀಲತೆ ಮುಖ್ಯ”

ಕಲಬುರಗಿ: ಉದಯೋನ್ಮುಖ ಕವಿಗಳು ತಮ್ಮ ಕಾವ್ಯವನ್ನು ಕಟ್ಟಲು ಮೊದಲು ಅಧ್ಯಯನಶೀಲತೆ ಮುಖ್ಯವಾಘಿದೆ ಎಂದು ಕರ್ನಾಟಕ ರಾಜ್ಯ ಬರಹಗಾರರ ಬಳಗದ ಅಧ್ಯಕ್ಷ ಮಧು ನಾಯ್ಕ ಎಲ್ ಅವರು ಹೇಳಿದರು.
ಇಂದು ಕಲಬುರಗಿ ಬರಹಗಾರರ ಬಳಗದ ಜಿಲ್ಲಾ ಘಟಕ ಆಯೋಜಿಸಿದ “ಬಸವ ಜ್ಯೋತಿ” ಎಂಬ ರಾಜ್ಯ ಮಟ್ಟದ ಅಂತರ್ಜಾಲ ಕವಿಗೋಷ್ಠಿಯಲ್ಲಿ ಪಾಲ್ಗೊಂಡು ಆಶಯ ನುಡಿಗಳನ್ನಾಡಿದರು.
ಈ ಅಧ್ಯಯನಶೀಲತೆ ಇಲ್ಲದ ಕಾವ್ಯ ಸೊರಗುತ್ತದೆ. ಗಟ್ಟಿ ಸಾಹಿತ್ಯಕ್ಕೆ ಹಿರಿಯ ಸಾಹಿತಿಗಳ ಕಾವ್ಯ ಓದುವುದು ಮತ್ತು ಆಸ್ವಾದಿಸುವುದು ಆಗಬೇಕು ಎಂದರು.
ಸಾಹಿತಿ ಧರ್ಮಣ್ಣ ಧನ್ನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ನಾವು ಬರೆದ ಕವನ ಕವಿತ್ವ ಹೊಂದಬೇಕು. ಇಂದಿನ ಸಂಕೀರ್ಣ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲುವ ಕಾವ್ಯಗಳು ರಚಿಸಬೇಕಾಗಿದೆ. ವಾಸ್ತವ ನೆಲೆಗಟ್ಟಿನಲ್ಲಿ ಸಾಹಿತ್ಯದ ಜೀವಂತಿಕೆ ಎದ್ದು ಕಾಣಬೇಕು. ಅದನ್ನು ಓದಿ ಅರಿಯಬೇಕು. ಆ ಮೂಲಕ ಸಾಹಿತ್ಯವು ಚಲನಶೀಲತೆ ಪಡೆದು ಕೊಳ್ಳುತ್ತದೆ ಎಂದರು.
ಬಳಗದ ಜಿಲ್ಲಾಧ್ಯಕ್ಷ ಮಹಾಂತೇಶ ಎನ್ ಪಾಟೀಲ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಹಾಸನ ಜಿಲ್ಲಾ ಘಟಕದ ಅಧ್ಯಕ್ಷ ಅನಂತರಾಜು, ಚಿಕ್ಕಮಗಳೂರು ಅಧ್ಯಕ್ಷ ಮಂಜಪ್ಪ ಎಲ್ ಮತ್ತಿತರರು ಪಾಲ್ಗೊಂಡಿದರು.
ಇದೇ ಸಂದರ್ಭದಲ್ಲಿಸ ಬಿ ಎಂ ರಾವ ಆನೂರ ಅವರು ತೀರ್ಫುಗಾರರಾಗಿದ್ದರು. ರಾಜ್ಯದ ವಿವಿಧ ಭಾಗಗಳಿಂದ ಭಾಗವಹಿಸಿದ ಕವಿಗೋಷ್ಠಿಯಲ್ಲಿ ಸುಭಾಶ ಚವ್ಹಾಣ(ಪ್ರಥಮ), ಶೋಭಾ ವಿಜಯ ನಗರ(ದ್ವೀತಿಯ), ರೇಣುಕಾ ಡಾಂಗೆ(ತೃತೀಯ) ಶ್ರೇಣಿಗಳಲ್ಲಿ ವಿಜೇತರಾದರು. ಹಾಗೂ ಸುರೇಶ ಕಲಾಪ್ರಿಯ ಮತ್ತು ರಶ್ಮಿ ಅನೀಲ ಮಂಗಳೂರು ಅವರ ಕವನಗಳು ತೀರ್ಫುಗಾರರ ಮೆಚ್ಚುಗೆ ಪಡೆದವು.
ಸುಮಾರು ನಾಲ್ಕು ತಾಸುಗಳ ಅವಧುಯಲ್ಲಿ 60 ಜನ ಕವಿಗಳು ಭಾಗವಹಸಿ ಸ್ವರಚಿತ ಕವನ ವಾಚನ ಮಾಡಿದರು. ಶಿಕ್ಷಕಿ ಸುರೇಖಾ ಬಿರಾದಾರ ಸ್ವಾಗತಿಸಿದರು. ಕಸ್ತೂರಿ ರಾಜೇಶ್ವರ ಅವರು ನಿರೂಪಿಸಿದರು. ಅನುಸೂಯಾ ನಾಗನಳ್ಳಿ ವಂದಿಸಿದರು.

Leave A Reply

Your email address will not be published.