Shubhashaya News

ಪತ್ರಕರ್ತ ಕಾಗಲಕರ್ ನಿಧನಕ್ಕೆ ಶಾಸಕ ಗುತ್ತೇದಾರ ಸಂತಾಪ

ಸಂಯುಕ್ತ ಕರ್ನಾಟಕದ ಸ್ಥಾನಿಕ ಸಂಪಾದಕ ಜಯತೀರ್ಥ ಕಾಗಲಕರ್ ನಿಧನಕ್ಕೆ ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಜಯತೀರ್ಥ ಕಾಗಲಕರ ಅವರ ನಿಧನದಿಂದ ಕಲ್ಯಾಣ ಕರ್ನಾಟಕದ ಪತ್ರಿಕಾ ರಂಗಕ್ಕೆ ಬಹು ದೊಡ್ಡ ನಷ್ಟವುಂಟಾಗಿದೆ. ಅವರ ಸಕಾಲಿಕ ವರದಿಗಳು ಮತ್ತು ಲೇಖನಗಳು ಈ ಭಾಗದ ಅಭಿವೃದ್ಧಿಗೆ ಪೂರಕವಾಗಿದ್ದವು.
ಪತ್ರಿಕಾ ರಂಗದಲ್ಲಿ ವಿವಿಧ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ ಅವರು ಇತ್ತೀಚಿಗಷ್ಟೇ ಸ್ಥಾನಿಕ ಸಂಪಾದಕರ ಹುದ್ದೆಗೆ ಬಡ್ತಿ ಹೊಂದಿದ್ದರು. ಅಪಾರ ಅನುಭವ ಹೊಂದಿದ ಇವರು ಹಿರಿಯರೊಂದಿಗೆ ಹಿರಿಯರಾಗಿ ಕಿರಿಯರೊಂದಿಗೆ ಕಿರಿಯರಾಗಿ ಎಲ್ಲರೊಂದಿಗೆ ಬೆರೆಯುತ್ತಿದ್ದರು ಅವರನ್ನು ಕಳೆದುಕೊಂಡ ಈ ಪ್ರದೇಶ ಬಡವಾಗಿದೆ ಎಂದು ಸಂತಾಪ ಸೂಚಕ ಪತ್ರದಲ್ಲಿ ತಿಳಿಸಿದ್ದಾರೆ.

Leave A Reply

Your email address will not be published.