Shubhashaya News

ಸಂಶೋಧನಾ ಕೌಶಲ್ಯ ವೃದ್ಧಿಯಿಂದ ವಿಕಸಿತ ಭಾರತ–೨೦೪೭ ಗುರಿ ಸಾಧನೆ ಸಾಧ್ಯ: ಸಿಯುಕೆ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ

ಆಳಂದ: ಕಡಗಂಚಿ ಬಳಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಎರಡು ದಿನಗಳ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ ಮಾತನಾಡಿದರು.

ಆಳಂದ: ಇಂದಿನ ಆಧುನಿಕ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಕೇವಲ ಪಠ್ಯಜ್ಞಾನದೊಂದಿಗೆ ತೃಪ್ತಿಪಡದೆ, ಪ್ರಾಯೋಗಿಕ ಕೌಶಲ್ಯ ಮತ್ತು ಸಂಶೋಧನಾ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವುದು ಅತ್ಯಗತ್ಯವಾಗಿದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಹೇಳಿದರು.
ತಾಲೂಕಿನ ಕಡಗಂಚಿ ಬಳಿಯ ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ರಸಾಯನಶಾಸ್ತç ವಿಭಾಗದ ವತಿಯಿಂದ ಆಯೋಜಿಸಿದ್ದ “ಮಾಸ್ ಸ್ಪೆಕ್ಟೊçÃಮೆಟ್ರಿ ಆಧಾರಿತ ಪ್ರೋಟಿಯೋಮಿಕ್ಸ್” ಕುರಿತ ಎರಡು ದಿನಗಳ ರಾಷ್ಟಿçÃಯ ಕಾರ್ಯಾಗಾರ ಹಾಗೂ ಸೆಮಿನಾರ್ ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವವಿದ್ಯಾಲಯದಲ್ಲಿ ಲಭ್ಯವಿರುವ ಅತ್ಯಾಧುನಿಕ ಸಂಶೋಧನಾ ಪ್ರಯೋಗಾಲಯಗಳು ಹಾಗೂ ಮೂಲಸೌಕರ್ಯಗಳನ್ನು ವಿದ್ಯಾರ್ಥಿಗಳು ಸಮರ್ಪಕವಾಗಿ ಬಳಸಿಕೊಂಡು ಹೊಸ ಆವಿಷ್ಕಾರಗಳಿಗೆ ಮುಂದಾಗಬೇಕು. ಇಂತಹ ಸಂಶೋಧನೆಗಳು ‘ವಿಕಸಿತ ಭಾರತ–೨೦೪೭’ ನಿರ್ಮಾಣದ ರಾಷ್ಟಿçÃಯ ಗುರಿ ಸಾಧನೆಗೆ ಮಹತ್ವದ ಕೊಡುಗೆ ನೀಡಲಿವೆ ಎಂದು ಅವರು ಅಭಿಪ್ರಾಯಪಟ್ಟರು.
ನೊಬೆಲ್ ಪ್ರಶಸ್ತಿ ವಿಜೇತ ಡಾ. ಸಿ.ವಿ. ರಾಮನ್ ಅವರನ್ನು ಉಲ್ಲೇಖಿಸಿದ ಅವರು, ಸೀಮಿತ ಸಂಪನ್ಮೂಲಗಳಲ್ಲಿಯೇ ವಿಶ್ವಮಟ್ಟದ ಸಂಶೋಧನೆ ನಡೆಸಲು ಸಾಧ್ಯವಾಗಿತ್ತು. ಇಂದು ವಿದ್ಯಾರ್ಥಿಗಳಿಗೆ ಅತ್ಯಾಧುನಿಕ ತಂತ್ರಜ್ಞಾನ ಮತ್ತು ವಿಶ್ವದರ್ಜೆಯ ಸಂಶೋಧನಾ ಸೌಲಭ್ಯಗಳು ಲಭ್ಯವಿರುವುದರಿಂದ ಅವುಗಳನ್ನು ಸದುಪಯೋಗಪಡಿಸಿಕೊಂಡು ಗುಣಮಟ್ಟದ ಸಂಶೋಧನೆ ಕೈಗೊಳ್ಳಬೇಕು ಎಂದು ಕರೆ ನೀಡಿದರು.
ವಿದ್ಯಾರ್ಥಿಗಳು ಸಮಯದ ಮೌಲ್ಯ ಅರಿತು ಸಮಯ ನಿರ್ವಹಣೆಗೆ ಆದ್ಯತೆ ನೀಡಬೇಕು. ನಿರಂತರ ಕಲಿಕೆ, ಪರಿಶ್ರಮ ಮತ್ತು ಸಂಶೋಧನಾ ಮನೋಭಾವವೇ ಯಶಸ್ಸಿನ ಗುಟ್ಟು ಎಂದು ತಿಳಿಸಿದ ಅವರು, ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿಗಾಗಿ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಶೀಘ್ರದಲ್ಲೇ ವಿಶೇಷ ತರಬೇತಿ ತರಗತಿಗಳನ್ನು ಆರಂಭಿಸುವ ಯೋಜನೆ ಇದೆ ಎಂದು ತಿಳಿಸಿದರು.
ಕಾರ್ಯಾಗಾರದಲ್ಲಿ ಹೈದರಾಬಾದ್‌ನ ಥರ್ಮೋ ಫಿಶರ್ ಸೈಂಟಿಫಿಕ್‌ನ ವಿಜ್ಞಾನಿ ಬಾಲಭಾವು ವಾರ್ಕಾಡ್, ಬೆಂಗಳೂರಿನ ಜೆಎನ್‌ಸಿಎಎಸ್‌ಆರ್‌ನ ಪ್ರೊ. ಹೇಮಲತಾ ಬಲರಾಮ್ ಹಾಗೂ ಪುಣೆಯ ಸಿಎಸ್‌ಐಆರ್–ನ್ಯಾಷನಲ್ ಕೆಮಿಕಲ್ ಲ್ಯಾಬೊರೇಟರಿಯ ಪ್ರೊ. ಮಹೇಶ್ ಜೆ. ಕುಲಕರ್ಣಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ, ಸಂಶೋಧನಾ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರಿಗೆ ಮಾಸ್ ಸ್ಪೆಕ್ಟೊçÃಮೆಟ್ರಿ, ಪ್ರೋಟಿಯೋಮಿಕ್ಸ್ ಡೇಟಾ ಸಂಗ್ರಹಣೆ, ಬಳಕೆ ಹಾಗೂ ವಿಶ್ಲೇಷಣೆಯ ಕುರಿತು ಪ್ರಾಯೋಗಿಕ ತರಬೇತಿ ನೀಡಿದರು.
ಸಮಾರೋಪ ಸಮಾರಂಭದಲ್ಲಿ ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ ಮಾತನಾಡಿ, ರಸಾಯನಶಾಸ್ತç ವಿಭಾಗವು ಅತ್ಯಂತ ಯಶಸ್ವಿಯಾಗಿ ಕಾರ್ಯಾಗಾರ ಆಯೋಜಿಸಿರುವುದು ಶ್ಲಾಘನೀಯ. ಇಂತಹ ಕಾರ್ಯಾಗಾರಗಳು ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರ ಜ್ಞಾನ ಮತ್ತು ಕೌಶಲ್ಯ ವೃದ್ಧಿಗೆ ಪೂರಕವಾಗಿದ್ದು, ಎಲ್ಲರೂ ಇದರ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ರಾಸಾಯನಿಕ ವಿಜ್ಞಾನ ವಿಭಾಗದ ಡೀನ್ ಪ್ರೊ. ವೆಂಕಟರಮಣ ದೊಡ್ಡಿ, ರಸಾಯನಶಾಸ್ತç ವಿಭಾಗದ ಮುಖ್ಯಸ್ಥ ಹಾಗೂ ಎಸ್‌ಐಸಿ ನಿರ್ದೇಶಕ ಪ್ರೊ. ಪಲ್ಲೆಪೋಗು ರಾಘವಯ್ಯ, ಸಂಘಟನಾ ಕಾರ್ಯದರ್ಶಿ ಪ್ರೊ. ಕೆ. ಹನುಮೇಗೌಡ, ಎಚ್‌ಆರ್‌ಎಂಎಸ್ ಸಂಯೋಜಕ ಡಾ. ಹರೀಶ್ ಹೊಳ್ಳ, ಪ್ರೊ. ಶೇಶಾಂತ ವಿಶ್ವನಾಥ ಭೋಸಲೆ, ಡಾ. ಎನ್.ಎಸ್. ವೆಂಕಟ ನಾರಾಯಣ, ಡಾ. ಓರುಗಂಟಿ ಆಂಜನೇಯುಲು, ಡಾ. ಪಿ. ದುರೈಪಾಂಡಿ, ಡಾ. ಅಶೋಕ್ ಪಬ್ಬತ್ತಿ ಸೇರಿದಂತೆ ಲೈಫ್ ಸೈನ್ಸ್ ಹಾಗೂ ರಸಾಯನಶಾಸ್ತç ವಿಭಾಗದ ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave A Reply

Your email address will not be published.