ಆಳಂದ ರಾಷ್ಟಿçÃಯ ಲೋಕ ಅದಾಲತ್‌ನಲ್ಲಿ ೧,೯೮೪ ಪ್ರಕರಣಗಳ ರಾಜಿ ಇತ್ಯರ್ಥ
ಒಟ್ಟು ೨,೨೨೩ ಪ್ರಕರಣಗಳ ವಿಚಾರಣೆ; ಸೌಹಾರ್ದಯುತ ಪರಿಹಾರಕ್ಕೆ ನ್ಯಾಯಾಧೀಶೆ ಸುಮನ್ ಚಿತ್ತರಗಿ ಒತ್ತು
ಆಳಂದ: ನ್ಯಾಯಾಲಯದಲ್ಲಿ ನಡೆದ ರಾಷ್ಟಿçÃಯ ಲೋಕ ಅದಾಲತ್‌ನಲ್ಲಿ ರಾಜಿ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿ ಮಾತನಾಡಿದ ಸಿವಿಲ್ ನ್ಯಾಯಾಧೀಶೆ ಕುಮಾರಿ ಸುಮನ್ ಚಿತ್ತರಗಿ.
ಆಳಂದ: ನ್ಯಾಯಾಲಯಗಳಲ್ಲಿನ ಬಾಕಿ ಪ್ರಕರಣಗಳನ್ನು ತ್ವರಿತವಾಗಿ ಹಾಗೂ ಸೌಹಾರ್ದಯುತವಾಗಿ ಇತ್ಯರ್ಥಗೊಳಿಸುವ ಉದ್ದೇಶದಿಂದ ಪಟ್ಟಣದ ಕಿರಿಯ ಸಿವಿಲ್ ನ್ಯಾಯಾಲಯ ಹಾಗೂ ಹೆಚ್ಚುವರಿ ಕಿರಿಯ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಶನಿವಾರ ಹಮ್ಮಿಕೊಂಡ ರಾಷ್ಟಿçÃಯ ಲೋಕ ಅದಾಲತ್‌ನಲ್ಲಿ ೨,೨೨೩ ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಅವುಗಳಲ್ಲಿ ೧,೯೮೪ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಸ್ಥಳದಲ್ಲೇ ಯಶಸ್ವಿಯಾಗಿ ಇತ್ಯರ್ಥಪಡಿಸಲಾಯಿತು.
ರಾಷ್ಟಿçÃಯ ಲೋಕ ಅದಾಲತ್‌ಗೆ ಅಧ್ಯಕ್ಷತೆ ವಹಿಸಿದ್ದ ಸಿವಿಲ್ ನ್ಯಾಯಾಧೀಶೆ ಕುಮಾರಿ ಸುಮನ್ ಚಿತ್ತರಗಿ ಮಾತನಾಡಿ, ಲೋಕ ಅದಾಲತ್ ನ್ಯಾಯ ವ್ಯವಸ್ಥೆಯ ಅತ್ಯಂತ ಪರಿಣಾಮಕಾರಿ ಪರ್ಯಾಯ ವೇದಿಕೆಯಾಗಿದ್ದು, ಸಾರ್ವಜನಿಕರು ನ್ಯಾಯಾಲಯದ ದೀರ್ಘಕಾಲದ ವ್ಯಾಜ್ಯಗಳಿಂದ ಮುಕ್ತಿ ಪಡೆಯಲು ಇದೊಂದು ಉತ್ತಮ ಅವಕಾಶವಾಗಿದೆ ಎಂದು ಹೇಳಿದರು.
ಈ ಲೋಕ ಅದಾಲತ್‌ನಲ್ಲಿ ಸಿವಿಲ್ ಸ್ವರೂಪದ ಪ್ರಕರಣಗಳು, ಜೀವನಾಂಶ (ಮೆಂಟೆನೆನ್ಸ್) ಪ್ರಕರಣಗಳು, ಜನನ ಮತ್ತು ಮರಣ ನೋಂದಣಿ ಸಂಬAಧಿತ ಪ್ರಕರಣಗಳು, ಲಘು ಅಪರಾಧ ಪ್ರಕರಣಗಳು ಹಾಗೂ ರಾಜಿಯಾಗಬಹುದಾದ ಕ್ರಿಮಿನಲ್ ಪ್ರಕರಣಗಳನ್ನು ಉಭಯ ಪಕ್ಷಗಳ ಸಮ್ಮತಿಯ ಮೇರೆಗೆ ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಯಿತು.
ರಾಜಿ ಸಂಧಾನದ ಮೂಲಕ ಪ್ರಕರಣಗಳು ಇತ್ಯರ್ಥವಾಗುವುದರಿಂದ ನ್ಯಾಯಾಲಯಗಳ ಮೇಲಿನ ಬಾಕಿ ಪ್ರಕರಣಗಳ ಒತ್ತಡ ಕಡಿಮೆಯಾಗುವುದರ ಜೊತೆಗೆ ಸಾರ್ವಜನಿಕರಿಗೆ ಕಡಿಮೆ ವೆಚ್ಚದಲ್ಲಿ, ಕಡಿಮೆ ಅವಧಿಯಲ್ಲಿ ನ್ಯಾಯ ದೊರೆಯುತ್ತದೆ. ಪರಸ್ಪರ ಸಹಕಾರ ಮತ್ತು ಸೌಹಾರ್ದಯುತ ಮನೋಭಾವದಿಂದ ವಿವಾದಗಳನ್ನು ಬಗೆಹರಿಸಿಕೊಳ್ಳುವ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕು ಎಂದು ನ್ಯಾಯಾಧೀಶೆ ಚಿತ್ತರಗಿ ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಕಮಲ್ ರಾಠೋಡ, ಕಾರ್ಯದರ್ಶಿ ಬಿ.ಟಿ. ಸಿಂಧೆ, ಸರ್ಕಾರಿ ವಕೀಲ ಇಸ್ಲಾಲ್ ಪಟೇಲ್, ಜೋತಿ ವಿ. ಬಂದಿ, ಹಿರಿಯ ನ್ಯಾಯವಾದಿ ಎಸ್.ಎ.ಪಾಟೀಲ, ಎ. ಡಬ್ಲೂ ಅನ್ಸಾರಿ, ಡಿ.ಎಸ್. ನಾಡಕರ್, ಎಸ್.ಡಿ.ಬೋಸಗೆ, ಮಹಾದೇವ ಹತ್ತಿ, ಕೆ. ಮಲ್ಲಿಕಾರ್ಜುನ, ತಾಟಿ, ಸೇರಿದಂತೆ ನ್ಯಾಯವಾದಿಗಳು, ನ್ಯಾಯಾಲಯದ ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.