Shubhashaya News

‘ನಾನು ರಸ್ತೆ ಕಾಮಗಾರಿಗೆ ವಿರೋಧಿಸಿಲ್ಲ; ನಕ್ಷೆಯಂತೆ ಕಾಮಗಾರಿ ನಡೆಸಬೇಕು ಎಂದಷ್ಟೇ’ – ರಾಜಕೀಯ ಆರೋಪಗಳಿಗೆ ತಿರುಗೇಟು

ಶುಕ್ರವಾಡಿ–ಹೊನ್ನಳ್ಳಿ ರಸ್ತೆ ವಿವಾದ: ನ್ಯಾಯಾಲಯದ ತಡೆಯಾಜ್ಞೆ ರೈತರಿಗೆ ಸಂದ ನ್ಯಾಯದ ಜಯ: ಮಹೇಶ್ವರಿ ಎಸ್. ವಾಲಿ

ಆಳಂದ: ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆ ಮಹೇಶ್ವರಿ ಎಸ್. ವಾಲಿ ಮಾತನಾಡಿದರು.

ಆಳಂದ: ಶುಕ್ರವಾಡಿ–ಹೊನ್ನಳ್ಳಿ ರಸ್ತೆ ನಿರ್ಮಾಣ ಕಾಮಗಾರಿಗೆ ಸಂಬAಧಿಸಿದAತೆ ತಮ್ಮ ವಿರುದ್ಧ ಕೇಳಿಬಂದಿರುವ ಆರೋಪಗಳನ್ನು ಕಲಬುರಗಿ ಜಿಲ್ಲಾ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಮಹೇಶ್ವರಿ ಎಸ್. ವಾಲಿ ತೀವ್ರವಾಗಿ ಖಂಡಿಸಿದ್ದು, ರಸ್ತೆ ನಿರ್ಮಾಣಕ್ಕೆ ತಾವು ಎಂದಿಗೂ ವಿರೋಧ ವ್ಯಕ್ತಪಡಿಸಿಲ್ಲ. ಸರ್ಕಾರದ ಅನುಮೋದಿತ ನಕ್ಷೆ ಹಾಗೂ ನಿಯಮಾವಳಿಯಂತೆ ರಸ್ತೆ ನಿರ್ಮಾಣವಾಗಬೇಕು ಮತ್ತು ರೈತರ ಜಮೀನಿಗೆ ಅನ್ಯಾಯವಾಗಬಾರದು ಎಂಬ ಉದ್ದೇಶದಿಂದಲೇ ಆಕ್ಷೇಪ ವ್ಯಕ್ತಪಡಿಸಿದ್ದಾಗಿ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಪಟ್ಟಣದಲ್ಲಿನ ಜೆಡಿಎಸ್ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ರಸ್ತೆ ಕಾಮಗಾರಿಯನ್ನು ಸರ್ಕಾರಿ ನಕ್ಷೆಯಲ್ಲಿ ನಮೂದಿಸಿರುವ ಮಾರ್ಗದಲ್ಲಿಯೇ ಕೈಗೊಳ್ಳಬೇಕು ಎಂದು ಆರಂಭದಿAದಲೂ ಆಗ್ರಹಿಸಿದ್ದೆವು. ಆದರೆ ನಕ್ಷೆಯಲ್ಲಿಲ್ಲದ ರೈತರ ಕೃಷಿ ಭೂಮಿಯಲ್ಲಿ ರಸ್ತೆ ನಿರ್ಮಿಸಲು ಪ್ರಯತ್ನ ನಡೆದ ಹಿನ್ನೆಲೆಯಲ್ಲಿ ಸಂಬAಧಪಟ್ಟ ಅಧಿಕಾರಿಗಳ ಗಮನಕ್ಕೆ ವಿಷಯವನ್ನು ತಂದಿದ್ದೆವು. ಇದನ್ನು ರಾಜಕೀಯ ಬಣ್ಣ ಬಳಿದು ತಮ್ಮ ವಿರುದ್ಧ ಅಪಪ್ರಚಾರ ನಡೆಸುತ್ತಿರುವುದು ದುರದೃಷ್ಟಕರ ಎಂದು ಹೇಳಿದರು.
ತಮ್ಮ ವಿರುದ್ಧ ಶಾಸಕರ ಬೆಂಬಲಿಗರು ಹಾಗೂ ಕೆಲ ಗ್ರಾಮಸ್ಥರನ್ನು ಮುಂದಿಟ್ಟು, “ಮಹೇಶ್ವರಿ ವಾಲಿ ಗ್ರಾಮಕ್ಕೆ ರಸ್ತೆ ನಿರ್ಮಾಣಕ್ಕೆ ಅಡ್ಡಿಪಡಿಸುತ್ತಿದ್ದಾರೆ, ರಾಜಕೀಯ ಮಾಡುತ್ತಿದ್ದಾರೆ” ಎಂಬ ಆರೋಪ ಮಾಡಿರುವುದನ್ನು ಅವರು ತಳ್ಳಿಹಾಕಿದರು. ರಸ್ತೆ ನಿರ್ಮಾಣದ ಹೆಸರಿನಲ್ಲಿ ರೈತರ ಹಕ್ಕುಗಳಿಗೆ ಧಕ್ಕೆಯಾಗುವುದನ್ನು ಪ್ರಶ್ನಿಸಿದ್ದೇ ಹೊರತು ಅಭಿವೃದ್ಧಿಗೆ ವಿರೋಧ ವ್ಯಕ್ತಪಡಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ಹಿಂದೆ ರೈತರ ಜಮೀನಿನ ಸ್ಥಳಕ್ಕೆ ಭೇಟಿ ನೀಡಿ, ಶುಕ್ರವಾಡಿ–ಹೊನ್ನಳ್ಳಿ ಗ್ರಾಮಕ್ಕೆ ಉತ್ತಮ ರಸ್ತೆ ನಿರ್ಮಾಣವಾಗಲೇಬೇಕು ಎಂಬುದು ನಮ್ಮ ಬೇಡಿಕೆಯೂ ಆಗಿದೆ. ಆದರೆ ರೈತರ ಕೃಷಿ ಭೂಮಿಯಲ್ಲಿ ಅಕ್ರಮವಾಗಿ ರಸ್ತೆ ನಿರ್ಮಾಣ ಕೈಗೊಳ್ಳದೆ, ಸರ್ಕಾರದ ಅನುಮೋದಿತ ನಕ್ಷೆ ಹಾಗೂ ಕಾನೂನುಬದ್ಧ ನಿಯಮಾವಳಿಯಂತೆ ಕಾಮಗಾರಿ ನಡೆಸಬೇಕು ಎಂದು ತಾಲ್ಲೂಕು ಆಡಳಿತ ಹಾಗೂ ಸಂಬAಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದ್ದೆವು ಎಂದು ಮಹೇಶ್ವರಿ ವಾಲಿ ತಿಳಿಸಿದರು.
ಆದರೆ ರೈತರ ಆಕ್ಷೇಪಣೆ ಹಾಗೂ ತಮ್ಮ ಮನವಿಯನ್ನು ಪರಿಗಣಿಸದೆ ಕಾಮಗಾರಿ ಮುಂದುವರಿಸಲು ಯತ್ನಿಸಿದ್ದರಿಂದ, ಭೂಮಿ ಕಳೆದುಕೊಳ್ಳುವ ಭೀತಿಯಲ್ಲಿದ್ದ ರೈತರು ನ್ಯಾಯಾಲಯದ ಮೊರೆ ಹೋಗಬೇಕಾಯಿತು. ಇದೀಗ ನ್ಯಾಯಾಲಯ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಮಧ್ಯಂತರ ತಡೆಯಾಜ್ಞೆ ನೀಡಿರುವುದು ರೈತರ ಹಕ್ಕುಗಳಿಗೆ ಸಂದ ನ್ಯಾಯದ ಜಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ನ್ಯಾಯಾಲಯದ ಆದೇಶವನ್ನು ಸಂಬAಧಿಸಿದ ಎಲ್ಲಾ ಇಲಾಖೆಗಳು ಕಟ್ಟುನಿಟ್ಟಾಗಿ ಪಾಲಿಸಬೇಕು. ರೈತರ ಭೂಮಿ ಹಾಗೂ ಹಕ್ಕುಗಳಿಗೆ ಯಾವುದೇ ಧಕ್ಕೆಯಾಗದಂತೆ, ಸರ್ಕಾರದ ನಕ್ಷೆ ಮತ್ತು ಕಾನೂನುಬದ್ಧ ಪ್ರಕ್ರಿಯೆಯಂತೆ ಮಾತ್ರ ಮುಂದಿನ ರಸ್ತೆ ಕಾಮಗಾರಿ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ರೈತರ ಜಮೀನಿನ ವಿಚಾರವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವುದು ಸರಿಯಲ್ಲ. ಗ್ರಾಮಾಭಿವೃದ್ಧಿಯ ಹೆಸರಿನಲ್ಲಿ ರೈತರ ಹಕ್ಕುಗಳನ್ನು ಕಡೆಗಣಿಸಬಾರದು. ಅಭಿವೃದ್ಧಿ ಮತ್ತು ನ್ಯಾಯ ಎರಡೂ ಜೊತೆಯಾಗಿ ಸಾಗಬೇಕು. ನ್ಯಾಯಾಲಯದ ಆದೇಶವು ಸತ್ಯ ಮತ್ತು ನ್ಯಾಯದ ಪರವಾಗಿದೆ. ಆದ್ದರಿಂದ ಅನಗತ್ಯ ಆರೋಪಗಳನ್ನು ಕೈಬಿಟ್ಟು ರೈತರ ಹಿತಾಸಕ್ತಿಗೆ ಎಲ್ಲರೂ ಸಹಕರಿಸಬೇಕು ಎಂದು ಮಹೇಶ್ವರಿ ಎಸ್. ವಾಲಿ ಮನವಿ ಮಾಡಿದರು.

Leave A Reply

Your email address will not be published.