ಆಳಂದ: ಪಟ್ಟಣದ ರಜವಿ ರೋಡ್ ಹಿಂಭಾಗದ ಬಡಾವಣೆಯಲ್ಲಿ ಮುಚ್ಚಿಹೋಗಿದ್ದ ಚರಂಡಿಯನ್ನು ಸ್ವತಃ ಸ್ವಚ್ಛಗೊಳಿಸಿ ಕೊಳಚೆ ನೀರು ಸರಾಗವಾಗಿ ಹರಿಯುವಂತೆ ಮಾಡಿದ ಶಿಕ್ಷಣ ಪ್ರೇಮಿ ಹಾಗೂ ಸಾಮಾಜಿಕ ಕಾರ್ಯಕರ್ತ ರಫೀಕ್ ಇನಾಂದಾರ್.
ಆಳಂದ: ಪಟ್ಟಣದ ಶಿಕ್ಷಣ ಪ್ರೇಮಿ ಹಾಗೂ ಸಾಮಾಜಿಕ ಕಾರ್ಯಕರ್ತ “ರಫೀಕ್ ಸರ್” ಎಂದೇ ಕರೆಸಿಕೊಳ್ಳುವ ರಫೀಕ್ ಇನಾಂದಾರ್ ಅವರು ಸ್ಥಳೀಯ ನಿವಾಸಿಗಳ ಸಂಕಷ್ಟಕ್ಕೆ ಸ್ಪಂದಿಸಿ, ಹಲವು ದಿನಗಳಿಂದ ಮುಚ್ಚಿಹೋಗಿದ್ದ ಚರಂಡಿಯನ್ನು ಸ್ವತಃ ಸ್ವಚ್ಛಗೊಳಿಸಿ ಸಾರ್ವಜನಿಕ ಮೆಚ್ಚುಗೆಗೆ ಇಂದಿಲ್ಲಿ ಪಾತ್ರರಾಗಿದ್ದಾರೆ.
ಪಟ್ಟಣದ ರಜವಿ ರೋಡ್ ಹಿಂಭಾಗದ ಸಗರಿ ಗಲ್ಲಿಯ ಚರಂಡಿ ಹಲವು ದಿನಗಳಿಂದ ಹೂಳು ಮತ್ತು ಕಸದ ರಾಶಿಯಿಂದ ಮುಚ್ಚಿಕೊಂಡ ಪರಿಣಾಮ ಕೊಳಚೆ ನೀರು ರಸ್ತೆ ಮೇಲೆ ಹರಿದು ಸಾರ್ವಜನಿಕರು, ವಾಹನ ಸವಾರರು ಹಾಗೂ ಸ್ಥಳೀಯ ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದರು. ದುರ್ವಾಸನೆ ಹರಡುತ್ತಿದ್ದ ಈ ಕುರಿತು ಪುರಸಭೆ ಸಿಬ್ಬಂದಿಗಳ ಗಮನಕ್ಕೆ ತಂದರು ಪ್ರಯೋಜನವಾಗುತ್ತಿಲ್ಲ. ಪರಿಸ್ಥಿತಿ ಹೀಗಿದ್ದರಿಂದ ಸಾಂಕ್ರಾಮಿಕ ರೋಗಗಳ ಭೀತಿಯೂ ಎದುರಾಗಿತ್ತಿದೆ ಎಂದು ಜನರ ಬೇಸರ ತಾಳದೆ ಹಾಗೂ ಕಾರ್ಮಿಕರು ಬಂದು ತೆರವುಗೊಳಿಸದ ಇರುವುದರಿಂದ ಈ ಸಮಸ್ಯೆಯನ್ನು ಮನಗಂಡ ರಫೀಕ್ ಇನಾಂದಾರ್ ಅವರು ಯಾವುದೇ ಮುಲಾಜಿಲ್ಲದೆ ಸ್ವತಃ ಚರಂಡಿಯಲ್ಲಿದ್ದ ಹೂಳು, ಕಸ ಹಾಗೂ ತ್ಯಾಜ್ಯವನ್ನು ತೆರವುಗೊಳಿಸಿ ಕೊಳಚೆ ನೀರು ಸರಾಗವಾಗಿ ಹರಿಯುವಂತೆ ಮಾಡಿದ್ದಾರೆ.
ಘಟನೆಯು ಸ್ಥಳೀಯ ಪುರಸಭೆಯ (ಟಿಎಂಸಿ) ನಿರ್ಲಕ್ಷ್ಯವನ್ನೂ ಎತ್ತಿತೋರಿಸಿರುವುದು. ಅಲ್ಲದೆ, ಸದ್ಯ ಆಡಳಿತ ಮಂಡಳಿಯೂ ಇಲ್ಲ. ಯಾರಿಗೆ ಹೇಳಬೇಕು ಬಡಾವಣೆ ಸಮಸ್ಯೆ ಎಂದು ಸಾರ್ವಜನಿಕರು ಅಳಲು ತೋಡಿಕೊಂಡಿದ್ದಾರೆ. ಇಂಥ ಸಾರ್ವಜನಿಕರ ಮೂಲಭೂತ ಸೌಲಭ್ಯಗಳಾದ ಸ್ವಚ್ಛತೆ ಹಾಗೂ ನೈರ್ಮಲ್ಯ ಕಾಪಾಡುವುದು ಸ್ಥಳೀಯ ಆಡಳಿತದ ಜವಾಬ್ದಾರಿಯಾಗಿದ್ದರೂ, ಚರಂಡಿ ನಿರ್ವಹಣೆಯಲ್ಲಿ ನೈರ್ಮಲ್ಯ ಅಧಿಕಾರಿಗಳ ನಿರಾಸಕ್ತಿ ತೋರಿಸಿದ್ದಾರೆ ಎಂದು ನಿವಾಸಿಗಳು ಆರೋಪಿಸಿದ್ದಾರೆ. ಮತ್ತೊಂದಡೆ ಬಸ್ ನಿಲ್ದಾಣ ಮುಂಭಾಗದ ರಸ್ತೆಯ ಚರಂಡಿಯೂ ಹೋಟೆಲ್ ಹಾಗೂ ಬೀದಿ ವ್ಯಾಪಾರಿಗಳ ಎಸೆದ ತ್ಯಾಜ್ಯಗಳಿಂದ ತುಂಬಿಕೊAಡು ಗಬ್ಬು ವಾಸನೆ ಹರಡತೊಡಗಿದೆ. ಇಂತಹ ಸಮಸ್ಯೆಗಳು ಮರುಕಳಿಸದಂತೆ ಪುರಸಭೆ ಅಧಿಕಾರಿಗಳು ಹಾಗೂ ನೈರ್ಮಲ್ಯ ನಿರೀಕ್ಷಕರು ನಿಯಮಿತವಾಗಿ ಚರಂಡಿಗಳ ಪರಿಶೀಲನೆ ನಡೆಸಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
“ಸ್ವಚ್ಛ ಪರಿಸರ ನಿರ್ಮಾಣ ಕೇವಲ ಸರ್ಕಾರದ ಜವಾಬ್ದಾರಿಯಲ್ಲ; ಪ್ರತಿಯೊಬ್ಬ ನಾಗರಿಕರೂ ತಮ್ಮ ಸುತ್ತಮುತ್ತಲಿನ ಪರಿಸರದ ಬಗ್ಗೆ ಕಾಳಜಿ ವಹಿಸಿದಾಗ ಮಾತ್ರ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ” ಎಂಬ ಅಭಿಪ್ರಾಯವನ್ನು ರಫೀಕ್ ಇನಾಂದಾರ್ ಅವರು ಪ್ರತಿಕ್ರಿಯೆಸಿದ್ದಾರೆ.
ಸಾರ್ವಜನಿಕರ ಪ್ರತಿಕ್ರಿಯೆ:
“ಹಲವು ದಿನಗಳಿಂದ ಚರಂಡಿ ಮುಚ್ಚಿಕೊಂಡಿದ್ದರಿAದ ಕೊಳಚೆ ನೀರು ರಸ್ತೆ ಮೇಲೆ ಹರಿದು ಓಡಾಡಲು ತುಂಬಾ ತೊಂದರೆಯಾಗುತ್ತಿತ್ತು. ದುರ್ವಾಸನೆಯಿಂದ ಹಿರಿಯರು, ಮಕ್ಕಳು ಹಾಗೂ ಸಾರ್ವಜನಿಕರು ಸಂಕಷ್ಟ ಅನುಭವಿಸುತ್ತಿದ್ದರು. ಪುರಸಭೆಗೆ ಹಲವು ಬಾರಿ ಗಮನ ಸೆಳೆದರೂ ಸಮಸ್ಯೆ ಬಗೆಹರಿಯಲಿಲ್ಲ. ಇಂತಹ ಸಂದರ್ಭದಲ್ಲಿ ರಫೀಕ್ ಇನಾಂದಾರ್ ಅವರು ಸ್ವತಃ ಮುಂದೆ ಬಂದು ಚರಂಡಿ ಸ್ವಚ್ಛಗೊಳಿಸಿರುವುದು ಶ್ಲಾಘನೀಯ. ಆದರೆ ಇಂತಹ ಕೆಲಸಗಳನ್ನು ಸಾರ್ವಜನಿಕರು ಮಾಡುವ ಪರಿಸ್ಥಿತಿ ಬರಬಾರದು. ಪುರಸಭೆ ಅಧಿಕಾರಿಗಳು ನಿಯಮಿತವಾಗಿ ಚರಂಡಿಗಳ ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು.”
ಅಬ್ಬಾಸ್ ಅಲಿ ಪಾಶಾ ಗುತ್ತೇದಾರ ಬಸಾವಣೆ ನಿವಾಸ ಆಳಂದ.
ಪುರಸಭೆ ಅಧಿಕಾರಿಗಳ ಪ್ರತಿಕ್ರಿಯೆ:
ಸಗರಿಗಲಿ ಚರಂಡಿ ಸಮಸ್ಯೆಯ ಕುರಿತು ಮಾಹಿತಿ ದೊರೆತಿದೆ. ಸ್ಥಳಕ್ಕೆ ಸಿಬ್ಬಂದಿಯನ್ನು ಕಳುಹಿಸಿ ಆದ್ಯತೆಯ ಮೇರೆಗೆ ಸ್ವಚ್ಛಗೊಳಿಸಿ, ಕೊಳಚೆ ನೀರು ಸರಾಗವಾಗಿ ಹರಿಯುವಂತೆ ಮಾಡಲು ಸೂಚಿಸಲಾಗುವುದು. ಸಾರ್ವಜನಿಕರೂ ಸಹ ಚರಂಡಿಗಳಿಗೆ ಕಸ ಹಾಗೂ ಘನ ತ್ಯಾಜ್ಯವನ್ನು ಹಾಕದಂತೆ ಸಹಕರಿಸಿದರೆ ನೈರ್ಮಲ್ಯ ಕಾಪಾಡಲು ಅನುಕೂಲವಾಗುತ್ತದೆ.”
ಸಂಗಮೇಶ ಪನಶೆಟ್ಟಿ ಮುಖ್ಯಾಧಿಕಾರಿಗಳು ಪುರಸಭೆ ಆಳಂದ.