ಆಳಂದ: ವಿಶೇಷ ಲೋಕ ಅದಾಲತ್ ಕುರಿತು ಬೆಂಗಳೂರಿನಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಆಯೋಜಿಸಿದ್ದ ವಿಡಿಯೋ ಕಾನ್ಸಪ್ರೇನ್ಸ್ ಸುದ್ದಿಗೋಷ್ಠಿಯಲ್ಲಿ ಸ್ಥಳೀಯ ನ್ಯಾಯಾಲಯ ನ್ಯಾಯಾಧೀಶೆ ಕುಮಾರಿ ಸುಮನ್ ಚಿತರಿ ಸಮ್ಮುಖದಲ್ಲಿ ಪತ್ರಕರ್ತರು ಭಾಗವಹಿಸಿದ್ದರು.
ಆಳಂದ: ಬೆಂಗಳೂರುನಿAದ ನಡೆದ ವಿಡಿಯೋ ಕಾನ್ಫರೆನ್ಸ್ ಮೂಲಕ “ಸಮಾಧಾನ ಸಮಾರಂಭ” ವಿಶೇಷ ಲೋಕ ಅದಾಲತ್ ಕುರಿತು ಮಾಹಿತಿ ಹಂಚಿಕೆಯಾಗಿದ್ದು, ಆಳಂದ ನ್ಯಾಯಾಲಯದಲ್ಲಿ ಸ್ಥಳೀಯ ಪತ್ರಕರ್ತರಿಗೆ ಗುರುವಾರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಯಿತು.
ನ್ಯಾಯಾಧೀಶರಾದ ಕುಮಾರಿ ಸುಮನ್ ಚಿತರಗಿ ಅವರು ಪತ್ರಕರ್ತರಿಗೆ ಕಾರ್ಯಕ್ರಮದ ಮಹತ್ವವನ್ನು ವಿವರಿಸಿ, ಹೆಚ್ಚಿನ ಜನರಿಗೆ ಇದರ ಪ್ರಯೋಜನ ತಲುಪಿಸುವ ಅಗತ್ಯವಿದೆ ಎಂದು ತಿಳಿಸಿದರು.
ಭಾರತ ಸರ್ವೋಚ್ಚ ನ್ಯಾಯಾಲಯವು ೨೧, ೨೨ ಮತ್ತು ೨೩ ಆಗಸ್ಟ್ ೨೦೨೬ ರಂದು ನವದೆಹಲಿಯಲ್ಲಿ “ಸಮಾಧಾನ ಸಮಾರಂಭ” ಎಂಬ ವಿಶೇಷ ಲೋಕ ಅದಾಲತ್ ಆಯೋಜಿಸುತ್ತಿದೆ. ಈ ವಿಶೇಷ ಲೋಕ ಅದಾಲತ್ ಸರ್ವೋಚ್ಚ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳ ವೇಗವಾದ ಮತ್ತು ಸ್ನೇಹಪರ ಪರಿಹಾರಕ್ಕಾಗಿ ರೂಪಿಸಲಾಗಿದೆ. ರಾಜ್ಯದ ಎಲ್ಲಾ ನ್ಯಾಯಾಲಯಗಳಿಗೆ ಈ ಕುರಿತು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಹಿತಿ ನೀಡಲಾಗಿದ್ದು, ಅದರ ಭಾಗವಾಗಿ ಆಳಂದ ನ್ಯಾಯಾಲಯದಲ್ಲೂ ಕಾರ್ಯಕ್ರಮ ವೀಕ್ಷಣೆ ನಡೆದಿದೆ.
ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಹಣಾ ಅಧ್ಯಕ್ಷರಾದ ನ್ಯಾಯಮೂರ್ತಿ ಅನು ಶಿವರಾಮ್ ಅವರ ಮಾರ್ಗದರ್ಶನ ಮತ್ತು ನ್ಯಾಯಮೂರ್ತಿ ಆರ್ ದೇವದಾಸ್ ಅವರ ಸೂಚನೆಯಂತೆ, ಈ ವಿಶೇಷ ಲೋಕ ಅದಾಲತ್ ಬಗ್ಗೆ ರಾಜ್ಯದಾದ್ಯಂತ ಜಾಗೃತಿ ಮೂಡಿಸಲು ಗುರುವಾಗ ಮಧ್ಯಾಹ್ನ ಕರ್ನಾಟಕ ಹೈಕೋರ್ಟ್ನಲ್ಲಿ ಪ್ರೆಸ್ ಮೀಟ್ ಕೂಡ ನ್ಯಾಯಾಧೀಶರಿಗೆ ಮತ್ತು ಪತ್ರಕರ್ತರಿಗೆ ನೆರವೀಕ್ಷಣೆಗೆ ಅವಕಾಶ ಮಾಡಿಕೊಟ್ಟು ಇದರ ಉದ್ದೇಶದ ಕುರಿತಾಗಿ ಮಾಹಿತಿ ನೀಡಲಾಯಿತು.
ಉದ್ದೇಶ: ಈ “ಸಮಾಧಾನ ಸಮಾರೋಹÀ” ವಿಶೇಷ ಲೋಕ ಅದಾಲತ್‌ನ ಮುಖ್ಯ ಉದ್ದೇಶವೆಂದರೆ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ವೇಗವಾಗಿ, ಕಡಿಮೆ ವೆಚ್ಚದಲ್ಲಿ ಮತ್ತು ಪರಸ್ಪರ ಒಪ್ಪಂದದ ಮೂಲಕ ಇತ್ಯರ್ಥಗೊಳಿಸುವುದು. ಕಕ್ಷಿದಾರರು ದೀರ್ಘಕಾಲದ ನ್ಯಾಯಾಂಗ ಪ್ರಕ್ರಿಯೆಯಿಂದ ಹೊರಬಂದು ಸುಲಭವಾಗಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಇದು ಉತ್ತಮ ವೇದಿಕೆಯಾಗಿದೆ ಎಂದು ಬೆಂಗಳೂರಿನ ನ್ಯಾಯಮೂರ್ತಿಗಳು ಕಾನ್ಸಪ್ರೇಸ್‌ನಲ್ಲಿ ವಿವರಿಸಿದರು.
ಕಕ್ಷಿದಾರರು ಪಾಲ್ಗೊಳ್ಳುವ ನಿಯಮಗಳು:
ಸರ್ವೋಚ್ಚ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳೇ ಈ ಲೋಕ ಅದಾಲತ್‌ಗೆ ಅರ್ಹ. ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶದಲ್ಲಿನ ಪ್ರಕರಣದ ಇಬ್ಬರೂ ಪಕ್ಷಗಳು ಸ್ವಯಂಸಮ್ಮತಿಯಿAದ ಸ್ಥಳೀಯ ತಮ್ಮ ಸಮೀಪದ ನ್ಯಾಯಾಲಯಗಳಲ್ಲಿ ಪಾಲ್ಗೊಳ್ಳಬೇಕು.
ಒಪ್ಪಂದದ ಮೂಲಕ ಸಮಸ್ಯೆ ಪರಿಹರಿಸಲು ಸಿದ್ಧತೆ ಇರಬೇಕು.
ಕಾನೂನು ಸೇವಾ ಪ್ರಾಧಿಕಾರ ಅಥವಾ ಸಂಬAಧಿತ ವಕೀಲರ ಮೂಲಕ ಅಥವಾ ಸ್ವಯಂ ಅರ್ಜಿ ಸಲ್ಲಿಸಬಹುದು.
ಲೋಕ ಅದಾಲತ್‌ನಲ್ಲಿ ಕೈಗೊಳ್ಳುವ ತೀರ್ಮಾನ ಅಂತಿಮವಾಗಿದ್ದು, ಅದಕ್ಕೆ ಮೇಲ್ಮನವಿ ಇರುವುದಿಲ್ಲ.
ಒಟ್ಟಿನಲ್ಲಿ, “ಸಮಾಧಾನ ಸಮಾರಂಭ” ವಿಶೇಷ ಲೋಕ ಅದಾಲತ್ ನ್ಯಾಯಾಂಗ ವ್ಯವಸ್ಥೆಗೆ ಹೊಸ ಚೈತನ್ಯ ನೀಡುವ ಮಹತ್ವದ ಹೆಜ್ಜೆಯಾಗಿದ್ದು, ಕಕ್ಷಿದಾರರು ಇದರ ಸದುಪಯೋಗ ಪಡೆದುಕೊಳ್ಳುವಂತೆ ನ್ಯಾಯಾಂಗ ವಲಯ ಮನವಿ ಮಾಡಿದೆ.
Comments are closed.