Shubhashaya News

93ನೇ ರಥೋತ್ಸವ 17ಕ್ಕೆ, ಗಡಿನಾಡಿನ ಜಂಗೀ ಕುಸ್ತಿ 18ಕ್ಕೆ

ಆಳಂದ: ಖಜೂರಿ ಗ್ರಾಮ ದೇವತಾ ಶ್ರೀ ಕೋರಣೇಶ್ವರ ಜಾತ್ರೆ, ರಥೋತ್ಸವ ಪ್ರಚಾರ ಪೋಸ್ಟರ್‍ವನ್ನು ಕಮೀಟಿ ಪ್ರಮುಖ ಕರಸಪಪ್ಪ ಸುಲ್ತಾನಪೂರೆ, ಅಶೋಕ ಸಾವಳೇಶ್ವರ ಜಾತ್ರಾ ಸಮಿತಿ ಅಧ್ಯಕ್ಷ ವಿಜಯಕುಮಾರ ಅಲ್ದಿ ಇತರರು ಬಿಡುಗಡೆಗೊಳಿಸಿದರು.

ಖಜೂರಿ ಶ್ರೀ ಕೋರಣೇಶ್ವರ ಜಾತ್ರೆ ಸಪ್ತಾಹ ಆರಂಭ, ಉತ್ಸವಕ್ಕೆ ಭರದ ಸಿದ್ಧತೆ
ಆಳಂದ: ತಾಲೂಕಿನ ಹೋಬಳಿ ಕೇಂದ್ರ ಖಜೂರಿ ಗ್ರಾಮದ ಆರಾಧ್ಯ ದೈವ ಶ್ರೀ ಕೋರಣೇಶ್ವರ ವಿರಕ್ತ ಮಠದ ಶ್ರೀ ಕೋರಣೇಶ್ವರರ ಜಾತ್ರ ಮಹೋತ್ಸವ ಏ. 11ರಂದು ಆರಂಭಗೊಂಡು ಏ. 18ರವರೆಗಿನ ಅವಧಿಯಲ್ಲಿ ಪಲ್ಲಕ್ಕಿ ಉತ್ಸವ, ಮಹಾರಥೋತ್ಸವ ಹಾಗೂ ಕುಸ್ತಿ ಗೀ ಗೀ ಪದಗಳು ಸೇರಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಎಂದಿನಂತೆ ಶ್ರೀಮಠದ ಉಸ್ತವಾರಿಗಳಾದ ಗುರುಮಿಠಕಲ್ ಖಾಸಾಮಠದ ಗುರು ಮುರುಘರಾಜೇಂದ್ರ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಭರದ ಸಿದ್ಧತೆ ಆರಂಭಗೊಂಡಿದೆ.
ಈ ಕುರಿತು ಖಜೂರಿ ಕೋರಣೇಶ್ವರ ಮಠದಲ್ಲಿ ಕಮೀಟಿ ಹಾಗೂ ಜಾತ್ರಾ ಸಮಿತಿಯ ಪ್ರಮುಖರ ಜಾತ್ರಾ ವಾಲ್‍ಪೋಸ್ಟರ್ ಬಿಡುಗಡೆಗೊಳಿಡಿಸಿ ಉತ್ಸವದ ವಿವರಣೆ ನೀಡಿದ ಅವರು, ಎಂದಿನಂತೆ ನೆರೆ ಹೊರೆಯ ಗ್ರಾಮಗಳ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದರ್ಶನಾಶೀರ್ವಾದ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಏ.11ರಂದು ಸಪ್ತಾಹ ಆರಂಭಗೊಂಡಿದ್ದು, ಪ್ರತಿ ದಿನ ಭಜನೆ ದಾಸೋಹ ಕತ್ರ್ಯ ಗದ್ದುಗೆಗೆ ರುದ್ರಾಭಿμÉೀಕ ದೊಂದಿಗೆ ಏ. 16ರಂದು ಗುರುವಾರ ಸಂಜೆ ಮಹಾ ಪೂಜೆ ಕುಂಭ ಕಳಸ ಡೊಳ್ಳು ನಾಗ ಸಾದುಗಳ ಕುಣಿತ ದೊಂದಿಗೆ ಲಿಂ. ಶ್ರೀ ಕೊರಣೇಶ್ವರ ಮಹಾ ಸ್ವಾಮಿಗಳ ಭವ್ಯ ಮೂರ್ತಿ ಹಾಗೂ ನಂದಿಕೋಲ ಮಹಾಪೂಜೆ ಮೆರವಣಿಗೆಯೊಂದಿಗೆ ಗೊಂಬೆ ಕುಣಿತ, ವಾದ್ಯ ವೈಭಗಳೊಂದಿಗೆ ಗ್ರಾಮದ ಪ್ರಮುಖ ಬಿದಿಯಿಂದ ಶ್ರೀಮಠ ತಲುಪುವದು ಏ.17ರಂದು ಶುಕ್ರವಾರ ಬೆಳಗಿನ ಜಾವ ಗದ್ದುಗೆಗೆ ವಿಶೇಷ ಪೂಜೆ, ಮತ್ತು ರಥಕ್ಕೆಕಳಾಸಾರೋಹಣ ನಂತರ 8:00ಗಂಟೆಗೆ ಅಗ್ನಿ ಹಾಯುವುದು ಸಂಜೆ 6:35 ಗಂಟೆಗೆÉ 93ನೇ ಭವ್ಯ ರಥೋತ್ಸವ, ರಾತ್ರಿ ಬಿಜಾಪೂರದ ಬಬಲೇಶ್ವರ ತಾಲೂಕಿನ ಗೆಣ್ನೂರದ ಸುಜಾತಾ ದೇವರ ಮತ್ತು ಅಥಣಿಯ ಚಂದ್ರಕಾಂತ ಬಾಳಗೇರಿ ಕಲಾವಿದರಿಂದ ಗೀ ಗೀ ಪದ ಜರುಗಲಿವೆ ಎಂದು ಹೇಳಿದರು.
18ರಂದು ಮಧ್ಯಾಹ್ನ ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿನಾಡಿನ ಜಂಗಿ ಪೈಲ್ವಾನರ ಕುಸ್ತಿ, ವಿಜೇತರಿಗೆ 111 ರೂ.ಗಳಿಂದ 15 ಸಾವಿರ ವರೆಗೆ ಬಹುಮಾನದ ವಿತರಣೆ, ಸಂಜೆ 7:00ಗಂಟೆಗೆ ಲಕ್ಷ ದಿಪೆÇೀತ್ಸ ಮತ್ತು ಮದ್ದು ಸುಡುವ ಕಾರ್ಯಕ್ರಮ ಜರುಗಲಿದೆ.
ಈ ಜಾತ್ರಾ ಉತ್ಸವದಲ್ಲಿ ನಾಡಿನ ಎಲ್ಲ ಸದ್ಭಕ್ತಾದಿಗಳು ಜಾತ್ರೆಗೆ ಬಂದು ತನು ಮನ ಧನ ದಿಂದ ಸೇವೆ ಸಲ್ಲಿಸಿ ಕೊರಣೇಶ್ವರ ಅಜ್ಜನ ಆಶೀರ್ವಾದ ಪಡೆದುಕೊಂಡು ಪ್ರಸಾದ ಸ್ವೀಕರಿಸಿ ಪುನೀತರಾಗಬೇಕು ಕೋರಣೇಶ್ವರ ದೇವಸ್ಥಾನ ಟ್ರಸ್ಟ್ ಕಮೀಟಿ ಅಧ್ಯಕ್ಷ ಭೀಮರಾವ್ ಢಗೆ, ಉಪಾಧ್ಯಕ್ಷ ಕಬಸಪ್ಪ ಸುಲ್ತಾನಪೂರೆ, ಅಶೋಕ ಸಾವಳೇಶ್ವರ, ಶ್ರೀಶೈಲ ಎಸ್. ಬಂಗರಗೆ, ಅಶೋಕ ಬಿ. ಹೊಸಮನಿ, ಮಲ್ಲಣ್ಣಾ ಎನ್. ಹೆಬಳೆ, ತಿಪ್ಪಣಾ ಎಸ್. ಬಂಡೆ, ಶಿವಬಸಪ್ಪಾ ಆರ್. ಶಿವಶೆಟ್ಟಿ, ದಯಾನಂದ ಅಲ್ದಿ, ಮತ್ತು ಜಾತ್ರಾ ಕಮೀಟಿ ಅಧ್ಯಕ್ಷ ವಿಜಯಕುಮಾರ ಅಲ್ದಿ, ಮಹಾಂತೇಶ ಅಲ್ದಿ ಹಾಗೂ ಹಣಮಂತ ಸಾವಳೇಶ್ವರ, ವೈಜನಾಥ ವಾಡೆ ಸೇರಿದಂತೆ ಸಕಲ ಗ್ರಾಮದ ಭಕ್ತಾದಿಗಳು ಮನವಿ ಮಾಡಿದ್ದಾರೆ.

Leave A Reply

Your email address will not be published.