Shubhashaya News

ಪೋಷಕರೇ ಗಮನಿಸಿ : `RTE’ ಉಚಿತ ಸೀಟಿಗೆ ಪರಿಷ್ಕೃತ ವೇಳಾಪಟ್ಟಿ ಪ್ರಕಟ, ಏ.21 ರಿಂದ ಅರ್ಜಿ ಸಲ್ಲಿಕೆ ಆರಂಭ

ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಅಡಿಯಲ್ಲಿ 2026-27ನೇ ಸಾಲಿನ ಖಾಸಗಿ ಶಾಲೆಗಳ ಪ್ರವೇಶಾತಿಗಾಗಿ ಶಾಲಾ ಶಿಕ್ಷಣ ಇಲಾಖೆಯು ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದೆ. ನೆರೆಹೊರೆಯ ಶಾಲೆಗಳು, ಎಲ್‌ಕೆಜಿ ಹಾಗೂ ಒಂದನೇ ತರಗತಿಗೆ ಸಂಬಂಧಿಸಿದಂತೆ ಈ ಪ್ರಕ್ರಿಯೆ ನಡೆಯಲಿದೆ.

ಅನುದಾನ ರಹಿತ ಶಾಲೆಗಳಲ್ಲಿ ಲಭ್ಯವಿರುವ ಶೇ. 25ರಷ್ಟು ಸೀಟುಗಳು ಹಾಗೂ ಅನುದಾನಿತ ಶಾಲೆಗಳಲ್ಲಿನ ಸೀಟುಗಳ ಸಂಖ್ಯೆಯನ್ನು ಏಪ್ರಿಲ್ 17ರೊಳಗೆ ವೆಬ್‌ಸೈಟ್‌ನಲ್ಲಿ ಪ್ರಕಟಿಸಲು ಸೂಚಿಸಲಾಗಿದೆ.

ಪ್ರಮುಖ ದಿನಾಂಕಗಳು ಮತ್ತು ಹಂತಗಳು:

ಅರ್ಜಿ ಸಲ್ಲಿಕೆ: ಪೋಷಕರು ಆರ್‌ಟಿಇ ಪ್ರವೇಶಕ್ಕಾಗಿ ಏಪ್ರಿಲ್ 21ರಿಂದ ಮೇ 17ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಪರಿಶೀಲನೆ: ಅರ್ಜಿ ಸಲ್ಲಿಸಿದ ನಂತರ ಪೋಷಕರು ನೀಡಿರುವ ಮಾಹಿತಿಯ ನಿಖರತೆಯನ್ನು ಇಲಾಖೆಯು ಪರಿಶೀಲಿಸುತ್ತದೆ.

ಅರ್ಹರ ಪಟ್ಟಿ: ಲಾಟರಿಗೆ ಅರ್ಹರಾದ ಮಕ್ಕಳ ಪಟ್ಟಿಯನ್ನು ಮೇ 22ರಂದು ಪ್ರಕಟಿಸಲಾಗುತ್ತದೆ.

ಮೊದಲ ಹಂತದ ಆಯ್ಕೆ ಪಟ್ಟಿ: ಮೊದಲ ಹಂತದಲ್ಲಿ ಆಯ್ಕೆಯಾದ ಮಕ್ಕಳ ಹೆಸರನ್ನು ಮೇ 25ರಂದು ಘೋಷಿಸಲಾಗುತ್ತದೆ. ಆಯ್ಕೆಯಾದ ಮಕ್ಕಳು ತಮಗೆ ಹಂಚಿಕೆಯಾದ ಶಾಲೆಗಳಲ್ಲಿ ಪ್ರವೇಶ ಪಡೆಯಬಹುದು.

ಎರಡನೇ ಸುತ್ತಿನ ಆಯ್ಕೆ: ಜೂನ್ 12ರಂದು ಆನ್‌ಲೈನ್ ಲಾಟರಿ ಮೂಲಕ ಎರಡನೇ ಸುತ್ತಿನ ಸೀಟು ಹಂಚಿಕೆ ನಡೆಯಲಿದೆ.

ಅಂತಿಮ ಪ್ರವೇಶಾತಿ: ಎರಡನೇ ಸುತ್ತಿನಲ್ಲಿ ಸೀಟು ಹಂಚಿಕೆಯಾದ ಮಕ್ಕಳು ಜೂನ್ 13ರಿಂದ ಜೂನ್ 19ರೊಳಗೆ ಶಾಲೆಗಳಲ್ಲಿ ಪ್ರವೇಶ ಪಡೆಯಲು ಶಿಕ್ಷಣ ಇಲಾಖೆ ಅವಕಾಶ ಕಲ್ಪಿಸಿದೆ.

Comments are closed.

Don`t copy text!