ಆಳಂದ: ಕಡಗಂಚಿ ಬಳಿಯಿರುವ ಕರ್ನಾಟಕ ಕೇಂದ್ರೀಯ ವಿಶ್ವ ವಿದ್ಯಾಲಯ ಒಳಾಂಗಣದಲ್ಲಿ ಡಿ.2ರಿಂದ ಆಯೋಜಿಸಿತ ಅಂತರಾಷ್ಟ್ರೀಯ ಸಮ್ಮೇಳನಕ್ಕೆ ಸಜ್ಜಾಗಿದೆ.
ಆಳಂದ: ತಾಲೂಕಿನ ಕಡಗಂಚಿ ಬಳಿಯಿರುವ ಕಲಬುರಗಿಯ ಕರ್ನಾಟಕ ಕೇಂದ್ರ ವಿಶ್ವವಿದ್ಯಾಲಯದ (ಸಿಯುಕೆ) ಇಂಗ್ಲಿμï ವಿಭಾಗವು, ಪೀಟರ್ ಲ್ಯಾಂಗ್ ಪ್ರಕಾಶಕರ ಸಹಯೋಗದಲ್ಲಿ ಡಿ.2 ಮತ್ತು 3, 2025ರಂದು ಐಸಿಎಸ್‍ಎಸ್‍ಆರ್ ಪ್ರಾಯೋಜಿತ ಎರಡು ದಿನಗಳ ಅಂತರರಾಷ್ಟ್ರೀಯ ಸಮ್ಮೇಳನವನ್ನು “ನಾಟಕ ಮತ್ತು ರಂಗಭೂಮಿಯಲ್ಲಿ ಪುರಾಣ, ಇತಿಹಾಸ ಮತ್ತು ಸಂಪ್ರದಾಯ” ಎಂಬ ವಿಷಯದ ಮೇರೆಗೆ ಆಯೋಜಿಸಿದೆ. “ಪುರಾಣ, ಇತಿಹಾಸ ಹಾಗೂ ಸಂಪ್ರದಾಯಗಳ ನಾಟಕೀಯ ರೂಪಾಂತರ ಮತ್ತು ಅಭಿವ್ಯಕ್ತಿಗಳ ಅಧ್ಯಯನಕ್ಕೆ ಜಾಗತಿಕ ವೇದಿಕೆಯನ್ನು ಒದಗಿಸುವುದು ಈ ಸಮ್ಮೇಳನದ ಉದ್ದೇಶ” ಎಂದು ಇಂಗ್ಲಿμï ವಿಭಾಗದ ಮುಖ್ಯಸ್ಥರಾದ ಪೆÇ್ರ. ಬಸವರಾಜ್ ಡೋಣೂರ ತಿಳಿಸಿದ್ದಾರೆ.
ಡಿ. 2ರಂದು ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ ಅಧ್ಯಕ್ಷತೆ ವಹಿಸಲಿದ್ದು, ಕಾಶ್ಮೀರ ವಿಶ್ವವಿದ್ಯಾಲಯದ ಕುಲಪತಿ ಪೆÇ್ರ. ಎ. ರವೀಂದರ್ ನಾಥ್ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಇಎಫ್‍ಎಲ್‍ಯು, ಹೈದರಾಬಾದ್‍ನ ಕುಲಪತಿ ಪೆÇ್ರ. ಎನ್. ನಾಗರಾಜು ಮುಖ್ಯ ಅತಿಥಿಗಳಾಗಿ, ಪೆÇ್ರ. ಆರ್. ಆರ್. ಬಿರಾದಾರ್ ಹಾಗೂ ಪೆÇ್ರ. ವಿಕ್ರಮ್ ವಿಸಾಜಿ ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಠ್ಮಂಡು ವಿಶ್ವವಿದ್ಯಾಲಯದ ಡಾ. ಖಗೇಂದ್ರ ಆಚಾರ್ಯ “ಭಾರತೀಯ ಉಪಖಂಡದ ನಾಟಕ” ಕುರಿತು ಮುಖ್ಯ ಭಾಷಣ ಮಂಡಿಸಲಿದ್ದಾರೆ.
ಲಂಡನ್ ಕ್ವೀನ್ ಮೇರಿ ವಿಶ್ವವಿದ್ಯಾಲಯದ ಪೆÇ್ರ. ಡೇವಿಡ್ ಶಾಲ್ಕ್ವಿಕ್, ರೋಮ್ ಟೊರ್ ವೆರ್ಗಟಾ ವಿಶ್ವವಿದ್ಯಾಲಯದ ಪೆÇ್ರ. ಎಲಿಸಬೆಟ್ಟಾ ಮರಿನೋ, ತುಮಕೂರು ವಿಶ್ವವಿದ್ಯಾಲಯದ ಪೆÇ್ರ. ಎನ್.ಎಸ್. ಗುಂಡೂರು, ಇಎಫ್‍ಎಲ್‍ಯು ಹೈದರಾಬಾದ್‍ನ ಪೆÇ್ರ. ಅಮಿತ್ ಕುಮಾರ್, ಸಿಯುಕೆಯ ಸಂದರ್ಶಕ ಪ್ರಾಧ್ಯಾಪಕ ಪೆÇ್ರ. ಭೀಮರಾವ್ ಭೋಸಲೆ ಸೇರಿದಂತೆ ದೇಶ-ವಿದೇಶಗಳ ವಿದ್ವಾಂಸರು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಜೊತೆಗೆ ಪೆÇ್ರ. ಸಂಧ್ಯಾ ತಿವಾರಿ (ಕಾಶ್ಮೀರ ವಿಶ್ವವಿದ್ಯಾಲಯ), ಪೆÇ್ರ. ವಿಜಯ್ ನಾಗಣ್ಣನವರ್ (ಬೆಳಗಾವಿ ವಿಶ್ವವಿದ್ಯಾಲಯ), ಪೆÇ್ರ. ಎನ್.ಎಚ್. ಕಲ್ಲೂರು (ಕರ್ನಾಟಕ ವಿಶ್ವವಿದ್ಯಾಲಯ), ಡಾ. ವಿನಾಯಕ ನಾಯಕ್, ಡಾ. ಅರವಿಂದ ಕುಲಕರ್ಣಿ, ಪೆÇ್ರ. ಜಿ.ಕೆ. ಬಡಿಗೇರ್, ಡಾ. ಕೋಟ ಸಾಯಿಕೃಷ್ಣ, ಪೆÇ್ರ. ರಮೇಶ ರಾಠೋಡ್, ಪೆÇ್ರ. ಮುಕುಂದ ಲಮಾಣಿ, ಪೆÇ್ರ. ಗೀತಾ ಮಾಲಾ, ಡಾ. ವಿಜಯಲಕ್ಷ್ಮಿ ದಾನರೆಡ್ಡಿ ಮತ್ತು ಡಾ. ಗೀತಾ ರಾಥೋಡ್ ಮೊದಲಾದವರು ಪಾಲ್ಗೊಳ್ಳಲಿದ್ದಾರೆ.
ಸಮ್ಮೇಳನದ ಅವಧಿಯಲ್ಲಿ ಭಾರತೀಯ ನಾಟಕ, ಪುರಾಣ, ಪ್ರದರ್ಶನ ಅಭ್ಯಾಸಗಳು, ಸಂಸ್ಕøತಿ ಹಾಗೂ ತುಲನಾತ್ಮಕ ರಂಗಭೂಮಿ ಪರಂಪರೆಗಳ ಕುರಿತ ತಾಂತ್ರಿಕ ಅಧಿವೇಶನಗಳು, ಪ್ರಬಂಧ ಪ್ರಸ್ತುತಿಗಳು ಮತ್ತು ಫಲಕ ಚರ್ಚೆಗಳು ನಡೆಯಲಿವೆ. ಮೊದಲನೇ ದಿನದ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಸಮ್ಮೇಳನಕ್ಕೆ ವಿಶೇಷತೆ ನೀಡಲಿವೆ.
ಸಮ್ಮೇಳನದ ಅಂಗವಾಗಿ ಅತ್ಯುತ್ತಮ ಸಂಶೋಧನಾ ಪ್ರಬಂಧಗಳಿಗೆ ಮೂರು ವಿಭಾಗಗಳಲ್ಲಿ ನಗದು ಬಹುಮಾನಗಳನ್ನು ಘೋಷಿಸಲಾಗಿದೆ — ಅಧ್ಯಾಪಕರಿಗೆ ರೂ. 10,000, ಸಂಶೋಧನಾ ವಿದ್ವಾಂಸರಿಗೆ ರೂ. 5,000 ಹಾಗೂ ವಿದ್ಯಾರ್ಥಿಗಳಿಗೆ ರೂ. 5,000. ಪ್ರಶಸ್ತಿಗಳು ಸಮಾರೋಪ ಸಮಾರಂಭದಲ್ಲಿ ಪ್ರದಾನವಾಗಲಿವೆ ಎಂದು ಪೆÇ್ರ. ಬಸವರಾಜ್ ಡೋಣೂರ ತಿಳಿಸಿದ್ದಾರೆ.
Comments are closed.