ಆಳಂದ ಕಾಮಗಾರಿಗೆ ಚಿತ್ತಾಪೂರ ಎಇಇ ಸಹಿ- ಮಾಜಿ ಶಾಸಕ ಗುತ್ತೇದಾರ ದೂರು
ದುಡ್ಡು ಹೊಡೆಯಲೆಂದೇ ಈ ಪ್ಲ್ಯಾನ್. ಡಿ. 4ರಂದು ಧರಣಿ
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ( ಕೆಕೆಆರ್‍ಡಿಬಿ) ಯೋಜನೆ ಅಡಿಯಲ್ಲಿ ಕೈಗೊಳ್ಳುತ್ತಿರುವ ಅನೇಕ ಕಾಮಗಾರಿಗಳು ಕಳಪೆ ಮಟ್ಟದಲ್ಲಿ ನಿರ್ಮಿಸಿ ಸರ್ಕಾರದ ಹಣ ಲೂಟಿ ಮಾಡುವ ಕೆಲಸ ಆಳಂದ ತಾಲೂಕಿನಲ್ಲಿ ನಡೆಯುತ್ತಿದ್ದರೂ ತಪ್ಪಿತಸ್ಥರ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಮಾಜಿ ಶಾಸಕ ಸುಭಾಷ್ ಆರ್ ಗುತ್ತೇದಾರ ದೂರು ನೀಡಿದ್ದಾರೆ.
ಕಲಬುರಗಿ ಆಳಂದ ರಾಜ್ಯ ಹೆದ್ದಾರಿ ಎಸ್‍ಎಚ್ 10 ರಿಂದ ಎಲೆನಾವದಗಿ- ಕೊಡಲಹಂಗರಗಾ ಹತ್ತಿರದಿಂದ ಎಲೆನಾವದಗಿ ಗ್ರಾಮದ ರಸ್ತೆ 4.50 ಕಿ.ಮೀ ಕಾಮಗಾರಿ ಮುಗಿಯುವ ಹಂತದಲ್ಲಿ ಕಿತ್ತು ಹೋಗಿರುತ್ತದೆ. ಮೇ ತಿಂಗಳಲ್ಲಿ ಹಾಳಾಗಿ ಹೋಗಿರುತ್ತದೆ. ಮನುಷ್ಯರಿಗೆ ನಡೆದುಕೊಂಡು ಹೋಗಲು ಬರುತ್ತಿಲ್ಲ. ದ್ವಿಚಕ್ರ ವಾಹನಗಳು ತಿರುಗಾಡಲು ಬರುತ್ತಿಲ್ಲ. ಎμÉ್ಟೂೀ ಜನರು ಬಿದ್ದು ಕೈಕಾಲು ಮುರಿದು ಕೊಂಡಿರುತ್ತಾರೆ. ಅಧಿಕಾರಿಗಳಿಗೆ ಮಳೆಗಾಲಕ್ಕಿಂತ ಮುಂಚಿತವಾಗಿಯೇ ದೂರು ನೀಡಲಾಗಿರುತ್ತದೆ. ಆದರೂ ಕೂಡ ಗುತ್ತಿಗೆದಾರರ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.
ಸರ್ಕಾರದ 4 ಕೋಟಿ ರೂಪಾಯಿ ಖರ್ಚಾಗಿದೆ, ನಾಲ್ಕು ತಿಂಗಳು ರಸ್ತೆ ಬಾಳಿಕೆ ಬಂದಿರುವುದಿಲ್ಲ. ಇದು ಯಾವ ವೈಜ್ಞಾನಿಕ ಪದ್ಧತಿ ಇರಬಹುದು. ಇಡೀ ರಸ್ತೆಯ ತುಂಬೆಲ್ಲ ಹುಡುಕಿದರು ಡಾಂಬರ್ ನೋಡಲು ಸಿಗುವುದಿಲ್ಲ. ಹೀಗಿರುವಾಗ ಯಾವ ಗುಣಮಟ್ಟದ ರಸ್ತೆ ನಿರ್ಮಿಸಿರಬೇಕು ಯೋಚನೆ ಮಾಡಬೇಕಾಗಿರುತ್ತದೆ. ಅಂದಾಜು ಪಟ್ಟಿಯಂತೆ ಕಾಮಗಾರಿ ಮಾಡಿಲ್ಲ. ಪಟ್ಟಿಯಲ್ಲಿನ ಯಾವ ನಿಯಮಗಳು ಕೂಡ ಪಾಲನೆಯಾಗಿಲ್ಲ ಸುಳ್ಳು ಲೆಕ್ಕ ತೋರಿಸಿ 4 ಕೋಟಿ. ರೂ. ಹಣ ಲೂಟಿ ಮಾಡಿರುತ್ತಾರೆ ಎಂದು ದೂರು ನೀಡಿದ್ದಾರೆ.
ಇದೇ ರೀತಿ ವಾಗ್ಧರಿ ರಿಪ್ಪನಪಲ್ಲಿ ಮುಖ್ಯ ರಸ್ತೆಯಿಂದ ಪಡಸಾವಳಿ ಗ್ರಾಮದವರೆಗಿನ ರಸ್ತೆ ಅಭಿವೃದ್ಧಿಪಡಿಸುವ ಕಾಮಗಾರಿ ರೂ. 1.00 ಕೋಟಿ( ಕೆಕೆಆರ್‍ಡಿಬಿ 2023-24ನೇ ಸಾಲಿನ) ಮಾಡಿರುತ್ತಾರೆ. ಈ ರಸ್ತೆಯೂ ಮಾಡಿದ 2 ತಿಂಗಳಲ್ಲೇ ಹಾಳಾಗಿ ಹೋಗಿರುತ್ತದೆ. ಇಲ್ಲಿಯೂ ಸರ್ಕಾರದ ಬೊಕ್ಕಸಕ್ಕೆ 1 ಕೋಟಿ ನಷ್ಟವಾಗಿರುತ್ತದೆ ಎಂದು ದೂರಿದ್ದಾರೆ.
ಆಳಂದ ತಾಲೂಕಿನ ವಾಗ್ಧರಿ- ರಿಪ್ಪನಪಲ್ಲಿ ಮುಖ್ಯರಸ್ತೆಯಿಂದ ಪಡಸಾವಳಿ ರಸ್ತೆ ಕಾಮಗಾರಿಯು ಕರ್ನಾಟಕ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಿಗಮದವರಿಗೆ ವಹಿಸಿಕೊಟ್ಟಿದ್ದು, ಅದು ನಿಯಮಬಾಹಿರವಾಗಿ ಹಣ ಲೂಟಿ ಮಾಡಲೆಂದೇ ಚಿತ್ತಾಪೂರ ಉಪವಿಭಾಗದವರಿಗೆ ನೀಡಿರುತ್ತಾರೆ. ಆಳಂದ ಕಾಮಗಾರಿಯ ಬಿಲ್ಲನ್ನು ಎಇ, ಎಇಇ ಏಖIಆಐ ಚಿತ್ತಾಪೂರದವರು ದಾಖಲಿಸಿ ಹಣ ಲೂಟಿ ಮಾಡಿರುತ್ತಾರೆ. ಆಳಂದ ತಾಲೂಕು ಎಇಇ ಏಖIಆಐ SUಃ ಆIಗಿISIಔಓ ಂಈZಂಐPUಖ ವ್ಯಾಪ್ತಿಗೆ ಬರುತ್ತದೆ. ಇಷ್ಟೆಲ್ಲ ನಡೆದರೂ ಜಿಲ್ಲಾಡಳಿತ ಮೌನವಾಗಿರಲು ಕಾರಣವೇನು?. ಇದಕ್ಕೆ ಸರ್ಕಾರವೇ ಉತ್ತರಿಸಬೇಕಾಗಿದೆ ಎಂದು ಪ್ರಶ್ನಿಸಿದ್ದಾರೆ.
ಆಳಂದ ತಾಲೂಕಿನಾದ್ಯಂತ ಕೆಕೆಆರ್‍ಡಿಬಿ ಅನುದಾನದ ಅನೇಕ ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ನಿರ್ಮಿಸಿ ಕೋಟ್ಯಾಂತರ ರೂ.ಗಳನ್ನು ಲೂಟಿ ಮಾಡುತ್ತಿರುವುದು ಸರ್ವೇಸಾಮಾನ್ಯವಾಗಿಬಿಟ್ಟಿದೆ. ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಭಯವಿಲ್ಲದಂತಾಗಿದೆ. ಭೃಷ್ಟಾಚಾರ ತಾಂಡವವಾಡುತ್ತಿದೆ. ಇದೆಲ್ಲವನ್ನು ಖಂಡಿಸಿ ಕಳಪೆ ಗುಣಮಟ್ಟದಿಂದ ನಿರ್ಮಿಸಿರುವ ಗುತ್ತಿಗೆದಾರರು ಮತ್ತು ಅದಕ್ಕೆ ಸಹಕರಿಸಿರುವ ಅಧಿಕಾರಿಗಳ ವಿರುದ್ಧ ಕಠಿಣವಾದ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ದಿ. 4ನೇ ಡಿಸೆಂಬರ್ 2025ರಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಛೇರಿ ಎದುರುಗಡೆ ಆ ವ್ಯಾಪ್ತಿಯ ಗ್ರಾಮಸ್ಥರೊಂದಿಗೆ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Comments are closed.