Shubhashaya News

ಎಸ್ಸಿ,ಎಸ್ಟಿ ಶಿಕ್ಷಕರ ತಾಲೂಕು ಸಂಘ ಅಸ್ತಿತ್ವಕ್ಕೆ

ಆಳಂದ: ಪಟ್ಟಣದಲ್ಲಿ ಅಸ್ತಿತ್ವಕ್ಕೆ ಬಂದ ತಾಲೂಕು ಎಸ್ಸಿ,ಎಸ್ಟಿ ನೌಕರರ ಸಂಘಕ್ಕೆ ಆಯ್ಕೆಯಾದ ನೂತನ ಪದಾಧಿಕಾರಿಗಳಿಗೆ ಜಿಲ್ಲಾಧ್ಯಕ್ಷ ಜಿತೇಂದ್ರ ತಳವಾರ ಸನ್ಮಾನಿಸಿ ಅಧಿಕಾರ ವಹಿಸಿದ್ದು.

ಆಳಂದ: ಸರ್ಕಾರದ ಮಾನ್ಯತೆ ಪಡೆದಿರುವ ಕರ್ನಾಟಕ ರಾಜ್ಯ ಎಸ್ಸಿ/ಎಸ್ಟಿ ಪ್ರಾಥಮಿಕ ಮಾಧ್ಯಮಿಕ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘ (ರಿ.), ಬೆಂಗಳೂರು ಆಶ್ರಯದಲ್ಲಿ ಪಟ್ಟಣದಲ್ಲಿ ನಡೆದ ಸಭೆಯಲ್ಲಿ ಆಳಂದ ತಾಲೂಕು ಘಟಕವನ್ನು ರಚಿಸಲಾಗಿದೆ.
ಸಂಘದ ಸಂಸ್ಥಾಪಕ ಅಧ್ಯಕ್ಷ ವಿ.ಟಿ ವೇಂಕಟೇಶಯ್ಯ ಮಾರ್ಗದರ್ಶನದಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಜೀತೇಂದ್ರ ಕೆ. ತಳವಾರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತಾಲೂಕಿನ ಎಲ್ಲ ಎಸಿ, ಎಸ್ಟಿ ಶಿಕ್ಷಕ ಪ್ರಮುಖರಾದ ಶಿವಲಿಂಗಪ್ಪ ಬಾವಿಮನಿ, ರಮೇಶ ಸಕ್ಕರಗಿ, ಅಶೋಕ ಗಾಯಕ್ವಾಡ, ದತ್ತಪ್ಪ ಸುಳ್ಳನ, ಈಶ್ವರ ದೇಗಾಂವ, ತುಕಾರಾಮ ಬೀಳಗೆ ಅವರು ಸಮ್ಮುಖದಲ್ಲಿ ನೂತನ ಸಂಘದ ಅಸ್ತಿತ್ವದೊಂದಿಗೆ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಮೆಮಾಡಲಾಯಿತು.
ನೌಕರರ ಒಗ್ಗಟ್ಟೇ ಬಲ, ಬಲವೇ ಗೆಲುವು:
ಸಭೆಯಲ್ಲಿ ನೂತನ ಪದಾಧಿಕಾರಿಗಳಿಗೆ ಅಧಿಕಾರ ವಹಿಸಿ ಸನ್ಮಾನಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಜೀತೇಂದ್ರ ಕೆ. ತಳವಾರ ಮಾತನಾಡಿ, “ನಮ್ಮ ಸಂಘದ ಏಕೈಕ ಗುರಿ ಹಿರಿಯತೆ ಆಧಾರದ ಮೇಲೆ ಬಡ್ತಿ, ವರ್ಗಾವಣೆಯಲ್ಲಿ ನ್ಯಾಯ ಪಡೆಯುವುದು. ಸುಳ್ಳು ಪ್ರಕರಣಗಳಿಂದ ರಕ್ಷಣೆ, ಉಚಿತ ಕಾನೂನು ಮತ್ತು ಆರ್ಥಿಕ ಸಹಾಯ, ಮಕ್ಕಳ ಶಿಕ್ಷಣಕ್ಕೆ ವಿದ್ಯಾರ್ಥಿವೇತನ, ಜಾತಿ-ಉಪಜಾತಿ ಭೇದ ಮರೆತು ಒಗ್ಗಟ್ಟು ಈ ಎಲ್ಲವನ್ನೂ ಸಾಧಿಸಲು ಆಳಂದ ತಾಲೂಕು ಘಟಕ ಮೈಲಿಗಲ್ಲಾಗಿ ರಾಜ್ಯಕ್ಕೆ ಮಾದರಿಯಾಗುವ ಮೂಲಕ ಪ್ರತಿಯೊಬ್ಬ ಶಿಕ್ಷಕರೂ ಸದಸ್ಯರಾಗಿ ಸಂಘವನ್ನು ಬಲಪಡಿ ಎಂದು ಕರೆ ನೀಡಿದರು.
ನೂತನ ಪದಾಧಿಕಾರಿಗಳಾಗಿ ಶಂಭುಲಿಂಗ ಸುತಾರ (ಗೌರವ ಅಧ್ಯಕ್ಷÀ), ಸಂತೋಷ ಕುಮಾರ ನೂಲೆ (ಅಧ್ಯಕ್ಷ), ಕವಿತಾ ರಾಠೋಡ (ಉಪಾಧ್ಯಕ್ಷೆ), ಹಣಮಂತ ಪಾತ್ರೆ (ಪ್ರಧಾನ ಕಾರ್ಯದರ್ಶಿ), ಈರಣ್ಣ ಸೋನಕವಡೆ (ಸಹ ಕಾರ್ಯದರ್ಶಿ), ಸೂರ್ಯಕಾಂತ ಮಂಡ್ಲೆ (ಖಜಾಂಚಿ), ಚಂದ್ರಕಲಾ ಕಾಂಬಳೆ (ಸಹ ಕಾರ್ಯದರ್ಶಿ), ಅನಿಲ ರಾಠೋಡ, ರಮಾಬಾಯಿ ಬೀಳಗೆ ಮನೋಜ ಸೋನ್, ಸಿದ್ಧಣ್ಣಾ ಮಾನೆ (ಸಂಘಟನಾ ಕಾರ್ಯದರ್ಶಿ), ಸೇರಿದಂತೆ ಸದಸ್ಯರನ್ನಾಗಿ ಆಯ್ಕೆಮಾಡಲಾಗಿದೆ.

Comments are closed.

Don`t copy text!