Shubhashaya News

ಜಾತಿ ಕಾಲಂಗೆ ವೀರಶೈವ ಅಥವಾ ಲಿಂಗಾಯತ, ಉಪಜಾತಿ ಆದಿಬಣಜಿಗ ಬರೆಸಲು ಕರೆ

ಆಳಂದ: ಪಟ್ಟಣದಲ್ಲಿ ನಡೆದ ಆದಿ ಬಣಜಿಗ ಸಮುದಾಯ ಸಭೆಯಲ್ಲಿ ಜಿಲ್ಲಾ ಮುಖಂಡ ಜಗನಾಥ ಶೇಗಜಿ ಮಾತನಾಡಿದರು. ಸಮಾಜ ಅಧ್ಯಕ್ಷ ಗುರುಶಾಂತ ಪಾಟೀಲ, ಬಸವರಾಜ ಬಿರಾದಾರ, ಗುಪ್ತಲಿಂಗ ಪಾಟೀಲ, ನರಸಪ್ಪ ಬಿರಾದಾರ ಇದ್ದರು.

ಆಳಂದ: ಹಿಂದುಳಿದ ವರ್ಗಗಳ ಆಯೋಗದಿಂದ ಆರಂಭಿಸಿದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಜಾತಿ ಮತ್ತು ಉಪಜಾತಿ ದಾಖಲಿಗೆ ಸಂಬಂಧಿಸಿದಂತೆ ಆದಿ ಬಣಜಿಗ ಸಮುದಾಯದ ಮುಖಂಡರು ಒಕ್ಕೂರಲಿನಿಂದ ಇಂದಿಲ್ಲಿ ಕರೆ ನೀಡಿದರು.
ಧರ್ಮ ಕಾಲಂನಲ್ಲಿ ಹಿಂದುÀ’ ಜಾತಿ ಕಾಲಂನಲ್ಲಿ ‘ಒಟ್ಟಿಗೆ ವೀರಶೈವ ಲಿಂಗಾಯತ’ ಹಾಗೂ ಲಿಂಗಾಯತ ಅಥವಾ ವೀರಶೈವ ಎರಡರಲ್ಲಿ ಒಂದನ್ನು ಬರೆಯಬೇಕು ಹಾಗೂ ತಪ್ಪದೇ ಉಪಜಾತಿ ಕಾಲಂನಲ್ಲಿ ‘ಆದಿಬಣಜಿಗ’ ಎಂದು ದಾಖಲಿಸಬೇಕು ಎಂದು ಸಮುದಾಯಕ್ಕೆ ಒಕ್ಕೂರಲಿನಿಂದ ಸ್ಪಷ್ಟ ಸಂದೇಶ ರವಾನಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆದ ವೀರಶೈವ ಲಿಂಗಾಯತ ಆದಿಬಣಜಿಗ ಸಮಾಜದ ತಾಲೂಕು ಸಭೆಯಲ್ಲಿ ಸರ್ವ ಮುಖಂಡರು ತೀರ್ಮಾನ ಕೈಗೊಂಡು ಸಮಾಜ ಬಾಂಧವರು ಗೊಂದಲಕ್ಕೆ ಒಳಗಾಗದೇ ಧರ್ಮ ಹಿಂದೂ ಜಾತಿ ತಮಗೆ ಇಚ್ಛಾನುಸಾರ ವೀರಶೈವ ಲಿಂಗಾಯತ ಅಥವಾ ಎರಡರಲ್ಲಿ ಒಂದನ್ನು ಬರೆದು ಉಪಜಾತಿಯಲ್ಲಿ ತಪ್ಪದೇ ಆದಿ ಬಣಜಿಗ ಎಂದು ಬರೆಸುವಂತೆ ಸಮುದಾಯ ಬಾಂಧವರಲ್ಲಿ ತಿಳಿಸಬೇಕು ಎಂದು ಸಾಮೂಹಿಕವಾಗಿ ಮುಖಂಡರು ಸ್ಪಷ್ಟಪಡಿಸಿದರು.
ಸಭೆಯಲ್ಲಿ ಆದಿ ಬಣಜಿಗ ಸಮಾಜದ ಜಿಲ್ಲಾ ಮುಖಂಡ ಜಗನ್ನಾಥ್ ಶೇಗಜಿ ಅವರು ಮಾತನಾಡಿ, ಆರಂಭಗೊಂಡಿರುವ ಸಮೀಕ್ಷೆಯಲ್ಲಿ ಗೊಂದಲಗಳನ್ನು ತಪ್ಪಿಸಲು, ಈ ಬಾರಿ ಎಲ್ಲರೂ ಧರ್ಮ ಕಾಲಂನಲ್ಲಿ ಹಿಂದೂ ಎಂದು ದಾಖಲಿಸಿ, ಜಾತಿ ಕಾಲಂನಲ್ಲಿ ವೀರಶೈವ ಲಿಂಗಾಯತ ಮತ್ತು ಲಿಂಗಾಯತ್ ಅಥವಾ ವೀರಶೈವ ಬರೆದರು ಒಂದೇ ಆಗಲಿದೆ ಎಂದು ರಾಜ್ಯದ ಸಂಘದ ಅಧ್ಯಕ್ಷರು ಹೇಳಿದ್ದಾರೆ. ಹಾಗಾಗಿ ಉಪಜಾತಿ ಕಾಲಂನಲ್ಲಿ ಆದಿಬಣಜಿಗ ಜಾತಿ ಕಾಲಂನಲ್ಲಿ ಕಡ್ಡಾಯವಾಗಿ ಲಿಂಗಾಯತ ಅಥವಾ ವೀರಶೈವ ತಪ್ಪದೇ ಬರೆಸಬೇಕು ಎಂದರು.
ಈ ಸಮೀಕ್ಷೆ ಮುಂಬರುವ ದಿನಗಳಲ್ಲಿ ರಾಜ್ಯಾದ್ಯಂತ ಲಿಂಗಾಯತರ ಬಲವನ್ನು ತೋರಿಸುವ ಉದ್ದೇಶದಿಂದ, ಲಿಂಗಾಯತ ಮತ್ತು ಒಕ್ಕಲಿಗ ಶಾಸಕರ ಒತ್ತಡದಿಂದ ರಾಜ್ಯ ಸರ್ಕಾರ ಪುನಃ ಸರ್ವೆಗೆ ಸೂಚಿಸಿದೆ. ಆದ್ದರಿಂದ, ಈ ಬಾರಿಯ ಸಮೀಕ್ಷೆಯಲ್ಲಿ ಎಲ್ಲರೂ ಸಮರ್ಪಕವಾಗಿ ತಮ್ಮ ಮಾಹಿತಿಯನ್ನು ದಾಖಲಿಸಿ ಸಿಕ್ಕ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಆದಿ ಬಣಜಿಗ ಸಮಾಜದ ತಾಲೂಕು ಅಧ್ಯಕ್ಷ ಗುರುಶಾಂತ ಪಾಟೀಲ ನಿಂಬಾಳ, ಹಿರಿಯ ಬಸವರಾಜ ಬಿರಾದಾರ ನೆಲ್ಲೂರ, ಕಾರ್ಯದರ್ಶಿ ಸಿದ್ಧಲಿಂಗ ಮಲಶೆಟ್ಟಿ, ಸಮಾಜ ಶಾಸ್ತ್ರ ನಿವೃತ್ತ ಪ್ರಾಧ್ಯಾಪಕ ಪ್ರೊ. ಶ್ರೀಮಂತರಾವ್ ಗೋಧೆ, ನ್ಯಾಯವಾದಿ ಗುಪ್ತಲಿಂಗ ಪಾಟೀಲ, ನ್ಯಾಯವಾದಿ ಬಸವರಾಜ ಕೊಡ್ಲೆ, ನರಸಪ್ಪಾ ಬಿರಾದಾರ ಮಾತನಾಡಿ, ಸಭೆಯ ನಿರ್ಧಾರವನ್ನು ಸಮುದಾಯಕ್ಕೆ ತಲುಪಿಸಿ ಸಮೀಕ್ಷೆಯಲ್ಲಿ ಧರ್ಮ, ಜಾತಿ ಉಪ ಜಾತಿ ಕಾಲಂಗಳಲ್ಲಿ ಭರ್ತಿ ಮಾಡುವಂತಾಗಲು ಪರಸ್ಪರ ಸಹಕಾರಿಯಾಗಬೇಕು ಎಂದು ಹೇಳಿದರು.
ಹಿರಿಯ ಮುಖಂಡ ಸೂರ್ಯಕಾಂತ ರಾಮಜಿ ಮಾಡಿಯಾಳ, ಮಹಾದೇವಪ್ಪಾ ಪಾಟೀಲ, ಜಗದೀಶ ಪಾಟೀಲ, ಯಶ್ವಂತರಾವ್ ಇಕ್ಕಳಕಿ, ಗುರುಲಿಂಗಪ್ಪ ಬಿರಾದಾರ, ಕಲ್ಯಾಣರಾವ್ ಹಾದಿಮನಿ, ಕಲ್ಯಾಣರಾವ್ ಚಲಗೇರಿ, ಸಿದ್ಧುಗೌಡ ಪಾಟೀಲ ವಾಡಿ, ಶ್ರೀಮಂತರಾವ್ ಅಲ್ಲಾಪೂರ, ಹಣಮಂತರಾವ್ ಖೇಮದೆ, ನಾಗರಾಜ ಶೇಗಜಿ ಧಂಗಾಪೂರ, ಶಿವಶರಣಪ್ಪ ಬಿರಾದಾರ ನೆಲ್ಲೂರ, ಮಲ್ಲಿಕಾರ್ಜುನ ಸಾವಳಗಿ, ಅಂಬರಾಯ ಸೇರಿದಂತೆ ಅನೇಕ ಗ್ರಾಮಗಳಿಂದ ಮುಖಂಡರು ಆಗಮಿಸಿದ್ದರು.

Comments are closed.

Don`t copy text!