ಆಳಂದ: ದಸರಾ ಹಬ್ಬದಂದು ಜಿಡಗಾ ಶ್ರೀಮಠದಲ್ಲಿ ಷಡಕ್ಷರಿ ಶಿವಯೋಗಿ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳವರು ಬನ್ನಿ ಮಂಟಪದಲ್ಲಿ ಭಕ್ತಾದಿಗಳೊಂದಿಗೆ ಬನ್ನಿ ವಿನಿಮಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಆಳಂದ: ತಾಲೂಕಿನ ಜಿಡಗಾ ಕಲ್ಯಾಣ ಮಠದಲ್ಲಿ ದಸರಾ ಹಬ್ಬದ ಅಂಗವಾಗಿ ಪೀಠಾಧಿಪತಿಗಳಾದ ಷಡಕ್ಷರಿ ಶಿವಯೋಗಿ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳವರು ಶ್ರೀಮಠದಲ್ಲಿ ಚಂಡಿಯಾಗ ಪೂರ್ಣಾವತಿ ನೆರವೇರಿಸಿ, ಬನ್ನಿ ವಿನಿಮಯ ಕಾರ್ಯಕ್ರಮಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಅವರು ಭಕ್ತರನ್ನು ಉದ್ದೇಶಿಸಿ ಆಶೀರ್ವಚನ ನೀಡಿದ ಶ್ರೀಗಳು, ದಸರಾ ಹಬ್ಬವು ದೇವಿಯ ಆರಾಧನೆಯ ಮಹತ್ವವನ್ನು ಪ್ರತಿಪಾದಿಸುವ ಹಬ್ಬವಾಗಿದೆ “ದೇವಿಯ ಶಕ್ತಿಯ ಪ್ರತೀಕವಾಗಿರುವ ದಸರಾ, ನಮ್ಮಲ್ಲಿ ಶಕ್ತಿಯ ಧಾರಣೆ ಮಾಡುತ್ತದೆ. ದೇವಿಯ ಪೂಜೆಯು ನಮ್ಮ ಜೀವನದಲ್ಲಿ ಧರ್ಮ ಮತ್ತು ಶಕ್ತಿಯ ಸಾಥ್ ನೀಡುವ ಮಹತ್ವವನ್ನು ಪ್ರತಿಬಿಂಬಿಸುತ್ತದೆ” ಎಂದು ಅವರು ಹಬ್ಬದ ಮಹತ್ವವನ್ನು ವಿವರಿಸಿದರು.
ದಸರಾ ಹಬ್ಬವು ಧರ್ಮ ಮತ್ತು ಶಕ್ತಿಯ ಉತ್ಕರ್ಷವನ್ನು ಪ್ರತಿಬಿಂಬಿಸುವುದಾಗಿದೆ. ಈ ಹಬ್ಬವು ಜೀವನದಲ್ಲಿ ಸತ್ಯದ ಹಾದಿಯನ್ನು ಅನುಸರಿಸುವ ಶಕ್ತಿ ನೀಡುತ್ತದೆ ಎಂದು ಹೇಳಿದರು.
ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತಾದಿಗಳು ಶ್ರೀಗಳ ದರ್ಶನ ಪಡೆದರು. ಆಗಮಿಸಿದ್ದ ಭಕ್ತರಿಗೆ ಶ್ರೀಗಳ ಆಶೀರ್ವಾದ ರೂಪದಲ್ಲಿ ಬನ್ನಿ ವಿತರಿಸಿದರು. ಪ್ರತಿಯಾಗಿ ಭಕ್ತಾದಿಗಳು ಶ್ರೀಗಳಿಗೆ ಬನ್ನಿ ನೀಡಿ ದರ್ಶನ ಪಡೆದರು.
Comments are closed.