Shubhashaya News

ಕಲಬುರಗಿ ಬೌದ್ಧ ಧರ್ಮ ಸಮ್ಮೇಳನ: ಪೂರ್ವ ಸಿದ್ಧತೆ ಸಭೆಗೆ ಆಹ್ವಾನ

ಆಳಂದ: ಕಲಬುರಗಿಯಲ್ಲಿ ನಡೆಸಲಿರುವ ಭೌದ್ಧ ಧರ್ಮ ಸಮ್ಮೇಳನ ಸಿದ್ಧತೆಯ ಕುರಿತು ಬಂತೇ ಅಮರಜೋತಿ ಮಾತನಾಡಿದರು. ಬಂತೇ ವಿನಾಚಾರ್ಯರು, ರಮೇಶ ಲೋಹಾರ ಇದ್ದರು.

 

 

ಆಳಂದ: ಬುದ್ಧ ಗಯಾ ಮಾಹಾ ಬೋಧಿ ಮಾಹಾ ವಿಹಾರ ಮುಕ್ತಿ ಆಂದೋಲನದ ಮೂಲಕ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೋರಾಟ ನಡೆಸುತ್ತಿರುವ ಪೂಜ್ಯ ಭಂತೆ ವಿನಾಚಾರ್ಯರ ನೇತೃತ್ವದಲ್ಲಿ ಕಲಬುರಗಿ ನಗರದಲ್ಲಿ ಬೌದ್ಧ ಧರ್ಮ ಸಮ್ಮೇಳನವನ್ನು ಆಯೋಜಿಸುವ ಉದ್ದೇಶವಾಗಿದೆ ಎಂದು ಬೆಳಮಗಿ ಬುದ್ಧ ವಿವಾಹರದ ಬಂತೇ ಅಮರಜೋತಿ ಅವರು ತಿಳಿಸಿದ್ದಾರೆ.

ಈ ಕುರಿತು ವಿನಾಚಾರ್ಯರೊಂದಿಗೆ ಸಮಾಲೋಚನೆಯೊಂದಿಗೆ ವಿವರಣೆ ನೀಡಿದ ಅವರು, ಈ ಸಮ್ಮೇಳನದ ಪೂರ್ವ ಸಿದ್ಧತೆ ಸಭೆಯನ್ನು ಅಕ್ಟೋಬರ್ 5, 2025 ರಂದು ನಡೆಸಲಾಗುತ್ತಿದ್ದು, ಸರ್ವ ಬೌದ್ಧ ಹಿತೈಷಿ ಬಂಧು-ಮಿತ್ರರನ್ನು ಭಾಗವಹಿಸಬೇಕು ಎಂದು ಅವರು ಸಲಹೆ ನೀಡಿದರು.

ಪೂಜ್ಯ ಭಂತೆ ವಿನಾಚಾರ್ಯರು ದೇಶಾದಾದ್ಯಂತÀದ ಮೂಲಕ ಪ್ರವಾಸದಲ್ಲಿರುವುದರಿಂದ, ಈ ಸಮ್ಮೇಳನವು ಅಕ್ಟೋಬರ್ ತಿಂಗಳ ಕೊನೆಯ ವಾರದಲ್ಲಿ ನಡೆಸಲು ನಿರ್ಧರಿಸಲಾಗಿದೆ. ಈ ಆಂದೋಲನದ ಮೂಲಕ ಬೌದ್ಧ ಧರ್ಮದ ಮಹತ್ವ, ಸಾಮಾನ್ಯ ಹಕ್ಕುಗಳು ಮತ್ತು ಸಾಮುದಾಯಿಕ ಸಾಮರಸ್ಯವನ್ನು ಒತ್ತಿ ಹೇಳುವ ಗುರಿ ಹೊಂದಿದ್ದು, ಸಂವಿಧಾನಿಕ ಮೌಲ್ಯಗಳನ್ನು ಬೌದ್ಧ ತತ್ವಗಳೊಂದಿಗೆ ಸಂಯೋಜಿಸುವ ಚರ್ಚೆಗೆ ಒತ್ತು ನೀಡಲಾಗುತ್ತದೆ ಎಂದು ಹೇಳಿದರು.

ಈ ಸಭೆಯಲ್ಲಿ ಸರ್ವ ರಂಗದ ಬೌದ್ಧ ಅನುಯಾಯಿಗಳು, ಸಾಮಾಜಿಕ ಕಾರ್ಯಕರ್ತರು ಮತ್ತು ಧಾರ್ಮಿಕ ನಾಯಕರು ಭಾಗವಹಿಸಿ, ಸಮ್ಮೇಳನದ ಯಶಸ್ಸಿಗಾಗಿ ಯೋಜನೆಗಳನ್ನು ರೂಪಿಸುವ ಅವಕಾಶವಿದೆ ಎಲ್ಲರ ಸಹಭಾಗಿತ್ವಕ್ಕೆ ಅವರು ಕೋರಿದ್ದಾರೆ.

ಈ ಸಮ್ಮೇಳನವು ಕಲಬುರಗಿ ಜಿಲ್ಲೆಯ ಬೌದ್ಧ ಸಮುದಾಯಕ್ಕೆ ಮಹತ್ವದ್ದಾಗಿ ಪರಿಗಣಿಸಲ್ಪಟ್ಟಿದ್ದು, ಧಾರ್ಮಿಕ ಸಾಮರಸ್ಯ ಮತ್ತು ಸಾಮಾಜಿಕ ಜಾಗೃತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9880100285  ಸಂಪರ್ಕಿಸಲು ಅವರು ಸಲಹೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಭಂತೆ ವಿನಾಚಾರ್ಯರು, ಹೋರಾಟಗಾರ ರಮೇಶ ಲೋಹಾರ ಸೇರಿದಂತೆ ಮುಖಂಡರು ಹಾಜರಿದ್ದರು.

Comments are closed.

Don`t copy text!