Shubhashaya News

ತೀವ್ರತೆ ಕಡಿಮೆ, ಆತಂಕಕ್ಕೆ ಕಾರಣವಿಲ್ಲವೆಂದು ತಜ್ಞರ ಸ್ಪಷ್ಟನೆ

ಕೆ.ಎಸ್.ಎನ್.ಡಿ.ಎಂ.ಸಿ. ದಾಖಲೆ–

ಆಳಂದ: ಭೂಕಂಪ ಸಂಭಿಸಿದ ಹಿನ್ನೆಲೆಯಲ್ಲಿ ಚಿಂಚನಸೂರ ಗ್ರಾಪಂನಲ್ಲಿ ತಹಸೀಲ್ದಾರ ಅಣ್ಣಾರಾವ್ ಪಾಟೀಲ ಸಾರ್ವಜನಿಕ ಸಭೆ ನಡೆಸಿ ಮಾತನಾಡಿದರು.

ಆಳಂದ: ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಜವಾಳಗಾ ಗ್ರಾಮ ಸಮೀಪ ಇಂದು ಬೆಳಿಗ್ಗೆ ಸಂಭವಿಸಿದ ಸಣ್ಣ ಪ್ರಮಾಣದ ಭೂಕಂಪವು ಸ್ಥಳೀಯರಲ್ಲಿ ಕ್ಷಣಿಕ ಆತಂಕವನ್ನು ಮೂಡಿಸಿದರೂ ತೀವ್ರತೆ ಕಡಿಮೆಯಿರುವುದರಿಂದ ಯಾವುದೇ ಹಾನಿ ಸಂಭವಿಸುವ ಸಾಧ್ಯತೆ ಇಲ್ಲವೆಂದು ತಜ್ಞರು ಸ್ಪಷ್ಟನೆ ನೀಡಿದ್ದಾರೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರ (ಕೆ.ಎಸ್.ಎನ್.ಡಿ.ಎಂ.ಸಿ.) ಭೂಕಂಪದ ವಿವರಗಳನ್ನು ಬಿಡುಗಡೆ ಮಾಡಿದೆ.
ಕೇಂದ್ರಬಿಂದು:
ಆಳಂದ ತಾಲೂಕು ಜವಾಳಗಾ ಗ್ರಾಮದಿಂದ 0.5 ಕಿ.ಮೀ ಆಗ್ನೇಯಕ್ಕೆ, ಚಿಂಚನ್‍ಸೂರ್ ಗ್ರಾಮ ಪಂಚಾಯತಿ ವ್ಯಾಪ್ತಿ, ತೀವ್ರತೆ: 2.3 ಆಳ: 7 ಕಿ.ಮೀ ಗುರುವಾರ ಬೆಳಿಗ್ಗೆ 08:17:43 ಅಕ್ಷಾಂಶ ಮತ್ತು ರೇಖಾಂಶ: 17.53ದಲಿ ಉತ್ತರ; 76.82ಲಿ ಪೂರ್ವಕ್ಕೆ ಸಂಭವಿಸಿದೆ.
ಸಮೀಪದ ಕೇಂದ್ರಬಿಂದು:
ಸಮೀಪದ ಪ್ರದೇಶಗಳ ಭೂಗೋಳಿಕ ಮಾಹಿತಿ ಭೂಕಂಪದ ಕೇಂದ್ರ ಬಿಂದುವಿನಿಂದ ಸಮೀಪದ ಪ್ರಮುಖ ಸ್ಥಳವಾದ ಶ್ರೀಚÀಂದ ಗ್ರಾಮ ಪಂಚಾಯತಿ– 2.4 ಕಿ.ಮೀ ಪಶ್ಚಿಮಕ್ಕೆ ಚಿಂಚನ್‍ಸೂರ್ ಗ್ರಾಮ ಪಂಚಾಯತಿ 4.0 ಕಿ.ಮೀ ಆಗ್ನೇಯಕ್ಕೆ ಕಲಬುರಗಿ ನಗರ-22 ಕಿ.ಮೀ ಉತ್ತರಕ್ಕೆ ಇದೆ. ಜನರಿಗೆ ಹಾನಿಯಿಲ್ಲ ಎಂದು ಕೆ.ಎಸ್.ಎನ್.ಡಿ.ಎಂ.ಸಿ. ನೀಡಿದ ಭೂಕಂಪೀಯ ತೀವ್ರತೆ ನಕ್ಷೆಯ ಪ್ರಕಾರ, ಈ ಭೂಕಂಪದ ಕಂಪನವನ್ನು 20 ರಿಂದ 25 ಕಿ.ಮೀ ವ್ಯಾಪ್ತಿಯಲ್ಲಿ ಅನುಭವಿಸಬಹುದಾದರೂ ತೀವ್ರತೆ ಕಡಿಮೆಯಿರುವುದರಿಂದ ಕಟ್ಟಡಗಳು, ರಸ್ತೆಗಳು ಅಥವಾ ಇತರ ಮೂಲಸೌಕರ್ಯಗಳಿಗೆ ಹಾನಿಯಾಗುವ ಸಾಧ್ಯತೆ ಇಲ್ಲ. ಜನರು ಕ್ಷಣಿಕ ಕಂಪನವನ್ನು ಮಾತ್ರ ಅನುಭವಿಸುವ ಸಾಧ್ಯತೆ ಇದೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ.
ತಜ್ಞರ ಪ್ರಕಾರ, ಈ ಪ್ರದೇಶವು ಭೂಕಂಪೀಯ ವಲಯ IIIಯಲ್ಲಿ ಬಿದ್ದಿದ್ದು, ಟೆಕ್ಟಾನಿಕ್ ನಕ್ಷೆಯ ಪ್ರಕಾರ ಗಂಭೀರ ರಚನಾತ್ಮಕ ಅಸಂನಿಯಮಗಳಿಂದ ಮುಕ್ತವಾಗಿದೆ. ಆದ್ದರಿಂದ ಇಂತಹ ಸಣ್ಣ ಪ್ರಮಾಣದ ಭೂಕಂಪಗಳು ಸಹಜ ಘಟನೆಯಾಗಿದ್ದು ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಸ್ಥಳೀಯ ಪ್ರತಿಕ್ರಿಯೆ:
ಆಳಂದ ತಾಲೂಕು ಗ್ರಾಮಾಂತರದಲ್ಲಿ ಬೆಳಿಗ್ಗೆ ಕಂಪನವನ್ನು ಕೆಲವರು ಅನುಭವಿಸಿದರೂ ಅದು ಕೆಲವೇ ಕ್ಷಣಗಳ ಮಟ್ಟಿಗೆ ಸೀಮಿತವಾಗಿದ್ದು, ಜನರಲ್ಲಿ ಹೆಚ್ಚಿನ ಭಯ ಮೂಡಲಿಲ್ಲ. “ಬೆಳಿಗ್ಗೆ ನೆಲದಡಿ ಸ್ವಲ್ಪ ಕಂಪನ ಕಂಡುಬಂದಿತು, ಆದರೆ ತಕ್ಷಣವೇ ನಿಂತಿತು. ಬಳಿಕ ಭೂಕಂಪದ ಸುದ್ದಿ ದೃಢವಾದ ನಂತರ ಎಲ್ಲರೂ ಆತಂಕದಿಂದ ಹೊರಬಂದರು” ಎಂದು ಸ್ಥಳೀಯರು ತಿಳಿಸಿದರು.
ತಹಸೀಲ್ದಾರ ಭೇಟಿ:
ಭೂಕಂಪದ ಮಾಹಿತಿ ಲಭ್ಯವಾದ ತಕ್ಷಣ ಸ್ಥಳೀಯ ಆಡಳಿತ ಮತ್ತು ವಿಪತ್ತು ನಿರ್ವಹಣಾ ಸಿಬ್ಬಂದಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದು, “ತೀವ್ರತೆ ಕಡಿಮೆಯಿರುವುದರಿಂದ ಯಾವುದೇ ತುರ್ತು ಪರಿಸ್ಥಿತಿ ಇಲ್ಲ. ಜನಸಾಮಾನ್ಯರು ಶಾಂತವಾಗಿರಬೇಕು” ಎಂದು ಚಿಂಚನಸೂರ ಗ್ರಾಮಕ್ಕೆ ಭೇಟಿ ನೀಡಿದ ತಹಸೀಲ್ದಾರ ಅಣ್ಣಾರಾವ್ ಪಾಟೀಲ ತಿಳಿಸಿದ್ದಾರೆ.
ಗ್ರಾಪಂನಲ್ಲಿ ತಹಸೀಲ್ದಾರರು ಸಭೆ ನಡೆಸಿ ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ. ಮುಂಜಾಗೃತೆ ಕ್ರಮ ಅನುಸರಿಸಬೇಕು. ಯಾವುದೇ ಸಂದರ್ಭದಲ್ಲಿ ಆಡಳಿತ ನೆರವಿಗೆ ಬರಲಿದೆ ಎಂದು ವಿಶ್ವಾಸ ಮೂಡಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆÀ್ಷ ವಿಮಲಾಬಾಯಿ ರಾಮನ್, ಉಪಾಧ್ಯಕ್ಷ ಪ್ರಶಾಂತ ಇಂಡಿ, ಸದಸ್ಯ ತೀರ್ಥಪ್ಪ ಭೀಮನ್, ಶಿವನಂದ ರಾಮನ್, ಗ್ರಾಮ ಆಡಳಿತಾಧಿಕಾರಿ, ಸ್ಥಳೀಯ ಮುಖಂಡ ಪಾಂಡುರಂಗ ಮಾವಿನಕರ್ ಅನೇರಕರು ಹಾಜರಿದ್ದು ಚರ್ಚಿಸಿದರು.

Comments are closed.

Don`t copy text!