ಆಳಂದ: ಸಿಯುಕೆಯಲ್ಲಿ ಐಟಿ ವಿಭಾಗದ ಕಾರ್ಯಕ್ರಮವನ್ನು ಕುಲಪತಿ ಪ್ರೊ. ಬಟ್ಟುಸತ್ಯನಾರಾಯಣ ಉದ್ಘಾಟಿಸಿದರು.
ವಿಶ್ವೇಶ್ವರಯ್ಯ ಪಿಎಚ್‍ಡಿ ಯೋಜನೆಯಡಿ ಭಾರತ ಸರ್ಕಾರದಿಂದ ಮಂಜೂರು
ಆಳಂದ: ತಾಲೂಕಿನ ಕಡಗಂಚಿ ಬಳಿಯಿರುವ ಕರ್ನಾಟಕ ಕೇಂದ್ರ ವಿಶ್ವವಿದ್ಯಾಲಯ (ಸಿಯುಕೆಗೆ) ಸಂಶೋಧನಾ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಸಾಧನೆ ಲಭಿಸಿದೆ.
ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು “ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಕ್ಷೇತ್ರದ ಸಂಶೋಧನೆಗಾಗಿ” ವಿಶ್ವೇಶ್ವರಯ್ಯ ಪಿಎಚ್‍ಡಿ ಯೋಜನೆಯಡಿ 2025-26ನೇ ಶೈಕ್ಷಣಿಕ ವರ್ಷದಿಗಾಗಿ ಸಿಯುಕೆಗೆ ರೂ. 1.02 ಕೋಟಿ ಅನುದಾನವನ್ನು ಮಂಜೂರು ಮಾಡಿದೆ.
ಸಿಯುಕೆಯ ವಿಶ್ವೇಶ್ವರಯ್ಯ ಪಿಎಚ್‍ಡಿ ಯೋಜನೆಯ ನೋಡಲ್ ಅಧಿಕಾರಿ ಪೆÇ್ರ. ಆರ್.ಎಸ್. ಹೆಗಡಿ ಅವರು ಸಿಯುಕೆಯಲ್ಲಿ ಆಯೋಜಿತ ಕಾರ್ಯಕ್ರಮದಲ್ಲಿ ಮಾತನಾಡಿ, “ಇದು ಸತತ ಮೂರನೇ ವರ್ಷವೂ ವಿಶ್ವವಿದ್ಯಾಲಯಕ್ಕೆ ರೂ. 1.02 ಕೋಟಿ ಅನುದಾನ ದೊರೆಯುತ್ತಿರುವ ಸಾಧನೆ. ಈವರೆಗೆ ಒಟ್ಟು ರೂ. 3.08 ಕೋಟಿಗಳನ್ನು ಭಾರತ ಸರ್ಕಾರವು ಸಿಯುಕೆಗೆ ಮಂಜೂರು ಮಾಡಿದೆ” ಎಂದು ತಿಳಿಸಿದರು.
“ಹೊಸ ಯೋಜನೆಯಡಿಯಲ್ಲಿ ಮೂವರು ಪಿಎಚ್‍ಡಿ ವಿದ್ವಾಂಸರು ಐದು ವರ್ಷಗಳೊಳಗೆ ಅಥವಾ ಪಿಎಚ್‍ಡಿ ಪೂರ್ಣಗೊಳಿಸುವ ಅವಧಿವರೆಗೂ ಸಂಶೋಧನೆ ನಡೆಸಲಿದ್ದಾರೆ. ಈಗಾಗಲೇ ಮುಂಚಿನ ಎರಡು ಯೋಜನೆಗಳಲ್ಲಿ ಆರು ವಿದ್ವಾಂಸರು ಸಂಶೋಧನೆ ಮುಂದುವರೆಸುತ್ತಿದ್ದಾರೆ. ಶೀಘ್ರದಲ್ಲೇ ಹೊಸ ವಿದ್ವಾಂಸರ ಪ್ರವೇಶಕ್ಕಾಗಿ ಅಧಿಸೂಚನೆ ಹೊರಡಿಸಲಾಗುವುದು. ಫೆಲೋಶಿಪ್ ಸಹ ಕೇಂದ್ರದ ನಿರ್ದೇಶನದಂತೆ ನೀಡಲಾಗುತ್ತದೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಗೌರವಾನ್ವಿತ ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ ಹಾಗೂ ಕುಲಸಚಿವ ಪೆÇ್ರ. ಆರ್.ಆರ್. ಬಿರಾದಾರ್ ಅವರು ಪೆÇ್ರ. ಹೆಗಡಿ ಮತ್ತು ಅವರ ತಂಡವನ್ನು ಅಭಿನಂದಿಸಿದರು. ರಾಜ್ಯಮಟ್ಟದಲ್ಲಿ ಸಂಶೋಧನಾ ಚಟುವಟಿಕೆಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸಿಯುಕೆಯ ಈ ಸಾಧನೆ ಗಮನಾರ್ಹವಾಗಿ ಸಾಗಿದೆ.