Shubhashaya News

ಸಿಯುಕೆಯಲ್ಲಿ ಸಾಫ್ಟ್ ಸ್ಕಿಲ್ಸ್ ಡೆವಲಪ್‍ಮೆಂಟ್ ಸೆಂಟರ್ ಉದ್ಘಾಟನೆ

ಆಳಂದ: ಸಿಯುಕೆಯಲ್ಲಿ ಹಮ್ಮಿಕೊಂಡ ಸಾಫ್ಟ್ ಸ್ಕಿಲ್ಸ್ ಡೆವಲಪ್‍ಮೆಂಟ್ ಸೆಂಟರ್ ಮತ್ತು ಮೊದಲ ಮೃದು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ ಕುಲಪತಿ ಪ್ರೊ. ಬಟ್ಟುಸತ್ಯನಾರಾಯಣ ಅವರು ಉದ್ಘಾಟಿಸಿ ಮಾತನಾಡಿದರು. ಪೆÇ್ರ. ಪಾಂಡುರಂಗ ಪತ್ತಿ, ಪೆÇ್ರ. ಭೀಮರಾವ್ ಭೋಸ್ಲೆ ಇತರರು ಇದ್ದರು.

ಆಳಂದ: “ದುರ್ಯೋಧನನಂತೆ ಅಲ್ಲ, ಧರ್ಮರಾಜನಂತೆ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಿ” ಎಂದು ಸಿಯುಕೆಯ ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ ಹೇಳಿದರು.
ತಾಲೂಕಿನ ಕಡಗಂಚಿ ಬಳಿಯ ಸಿಯುಕೆಯಲ್ಲಿ ಸಾಫ್ಟ್ ಸ್ಕಿಲ್ಸ್ ಡೆವಲಪ್‍ಮೆಂಟ್ ಸೆಂಟರ್ ಮತ್ತು ಮೊದಲ ಸಾಫ್ಟ್ ಸ್ಕಿಲ್ಸ್ ಕಾರ್ಯಕ್ರಮದ ಉದ್ಘಾಟನೆಯ ಸಂದರ್ಭದಲ್ಲಿ ಮಾತನಾಡುತ್ತಿದ್ದರು.
“ವ್ಯಕ್ತಿಯ ವ್ಯಕ್ತಿತ್ವವು ಆತನ ಮೃದು ಕೌಶಲ್ಯದ (ಸಾಫ್ಟ್ ಸ್ಕಿಲ್ಸ್) ಮೂಲಕ ಪ್ರತಿಫಲಿಸುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಸಮಗ್ರ ವ್ಯಕ್ತಿತ್ವವನ್ನು ಹೊಂದಲು ಪರಿಣಾಮಕಾರಿ ಸಂವಹನ, ಪರಸ್ಪರ ಕೌಶಲ್ಯಗಳು, ತಂಡದಲ್ಲಿ ಕೆಲಸಮಾಡುವ ಮನೋಭಾವ, ಪರಿಣಾಮಕಾರಿ ನಾಯಕತ್ವ, ಸಮಯ ನಿರ್ವಹಣೆ, ಸಕಾರಾತ್ಮಕ ಮನೋಭಾವ, ಸೃಜನಶೀಲತೆ, ಹೊಂದಿಕೊಳ್ಳುವಿಕೆ, ಸಹಾನುಭೂತಿ ಮುಂತಾದ ಮೃದು ಕೌಶಲ್ಯಗಳನ್ನು ಹೊಂದಿರಬೇಕು. ಅಂತಹ ಕೌಶಲ್ಯಗಳನ್ನು ಒದಗಿಸಲು ನಾವು ಈ ಕೇಂದ್ರವನ್ನು ಸ್ಥಾಪಿಸಿದ್ದೇವೆ. ಎಲ್ಲಾ ವಿದ್ಯಾರ್ಥಿಗಳು ಕೇಂದ್ರದ ಮೂಲಕ ನಡೆಯುವ ಮೃದು ಕೌಶಲ್ಯದ ಕಾರ್ಯಕ್ರಮಗಳನ್ನು ಉತ್ತಮವಾಗಿ ಬಳಸಿಕೊಳ್ಳುಬೇಕು” ಎಂದು ಹೇಳಿದರು.
ಗೌರವಾನ್ವಿತ ಅತಿಥಿ ಪೆÇ್ರ. ಭೀಮರಾವ್ ಭೋಸ್ಲೆ ಅವರು ಈ ಸಂದರ್ಭದಲ್ಲಿ ಮಾತನಾಡಿ, “ಎನ್‍ಇಪಿ 2020 ಮಾನವ ಸಂಪನ್ಮೂಲ ಅಭಿವೃದ್ಧಿಯನ್ನು ಉತ್ತೇಜಿಸುವತ್ತ ಹೆಚ್ಚಿನ ಒತ್ತು ನೀಡಿದೆ. ಇಂದು ದೇಶವು ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ ಮತ್ತು ಅವುಗಳಿಗೆ ಪರಿಹಾರಗಳನ್ನು ಕಂಡುಹಿಡಿಯುವುದು ತುಂಬಾ ಸವಾಲಿನ ಕೆಲಸವಾಗಿದೆ. ಉತ್ತಮ ಪರಿಹಾರಗಳನ್ನು ಕಂಡುಹಿಡಿಯಲು ನಮಗೆ ಮೃದು ಕೌಶಲ್ಯಗಳನ್ನು ಹೊಂದಿರುವ ಸೃಜನಶೀಲ ಮತ್ತು ಪ್ರತಿಭಾನ್ವಿತ ಮಾನವ ಸಂಪನ್ಮೂಲದ ಅಗತ್ಯವಿದೆ. ಮೃದು ಕೌಶಲ್ಯಗಳು ಅಂತರಶಿಸ್ತೀಯವಾಗಿದ್ದು, ಅವುಗಳು ಮೌಖಿಕ, ಲಿಖಿತ, ದೇಹ ಭಾμÉ, ಮಾನಸಿಕ, ನಡವಳಿಕೆಯ ಕೌಶಲ್ಯಗಳನ್ನು ಒಳಗೊಂಡಿವೆ” ಎಂದು ಹೇಳಿದರು.
“ಮೃದು ಕೌಶಲ್ಯಗಳು ವ್ಯಕ್ತಿತ್ವಕ್ಕೆ ಒಂದು ಪ್ಯಾಕೇಜ್ ಇದ್ದಂತೆ. ಪ್ಯಾಕೇಜಿಂಗ್ ಉತ್ತಮವಾಗಿದ್ದರೆ ಉತ್ಪನ್ನ ಸುಲಭವಾಗಿ ಮಾರಾಟವಾಗುತ್ತದೆ, ಅದೇ ರೀತಿ ವ್ಯಕ್ತಿತ್ವ ಉತ್ತಮವಾಗಿದ್ದರೆ ವಿದ್ಯಾರ್ಥಿಗಳು ಉತ್ತಮ ಅವಕಾಶಗಳು ಸರಳವಾಗಿ ದೊರೆಯುತ್ತವೆ. ಆದ್ದರಿಂದ ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಿ” ಎಂದು ಬಿಸಿನೆಸ್ ಸ್ಟಡೀಸ್ ನಿಕಾಯದ ಡೀನ್ ಪೆÇ್ರ. ಪಾಂಡುರಂಗ ಪತ್ತಿ ಹೇಳಿದರು.
ಸಿಯುಕೆಯ ಸಾಫ್ಟ್ ಸ್ಕಿಲ್ ಡೆವಲಪ್‍ಮೆಂಟ್ ಸೆಂಟರ್‍ನ ನಿರ್ದೇಶಕಿ ಡಾ. ಸುμÁ್ಮ ಎಚ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ “ನಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನಕ್ಕೆ ಮೃದು ಕೌಶಲ್ಯಗಳು ಬಹಳ ಮುಖ್ಯ. ವಿದ್ಯಾರ್ಥಿಗಳ ವ್ಯಕ್ತಿತ್ವದ ಸಮಗ್ರ ಅಭಿವೃದ್ಧಿಗಾಗಿ ಈ ಮೃದು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಭವಿಷ್ಯದಲ್ಲಿ ನಾವು ಈ ಕಾರ್ಯಕ್ರಮವನ್ನು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಕೈಗಾರಿಕೆಗಳು ಮತ್ತು ಸಾಮಾನ್ಯ ಜನರಿಗೆ ವಿಸ್ತರಿಸುತ್ತೇವೆ” ಎಂದು ಅವರು ಹೇಳಿದರು.
ಡಾ. ಸಫಿಯಾ ಪರ್ವೀನ್ ಕಾರ್ಯಕ್ರಮವನ್ನು ನಿರೂಪಿಸಿದರು; ಡಾ. ಕವಿತಾ ಸಂಗೋಳಗಿ ವಂದಿಸಿದರು. ಈ ಸಂದರ್ಭದಲ್ಲಿ ಡಾ. ಮೊಹಮ್ಮದ್ ಜೋಹೈರ್, ಡಾ. ಗಣಪತಿ ಬಿ ಸಿನ್ನೂರ್, ಪೆÇ್ರ. ಕೆ ಪದ್ಮಶ್ರೀ, ಡಾ. ನವೀನ, ಡಾ. ಜಗದೀಶ, ಡಾ. ಶಿವ, ಡಾ. ಶ್ರೀಲಕ್ಷ್ಮಿ, ಡಾ. ಜೈಪಾಲ, ಡಾ. ವಾಣಿ, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Comments are closed.

Don`t copy text!