Shubhashaya News

ಡಾ ಮಹಾಂತಪ್ಪ ಹಾಳಮಳಿಗೆ ಬಡ್ತಿ ವರ್ಗಾವಣೆಗೆ ಬೀಳ್ಕೊಡುಗೆ

ಹಾವು ಕಡಿದಾಗ ಸಾಂಪ್ರದಾಯಿಕ ಬದಲು ವೈದ್ಯಕೀಯ ಚಿಕಿತ್ಸೆ ಪಡೆಯಿರಿ: ಡಾ ಉಮಾಕಾಂತ  

ಆಳಂದ: ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿಯಾಗಿದ್ದ ಡಾ.ಮಹಾಂತಪ್ಪ ಹಾಳಮಳಿ ಸೇರಿ ವರ್ಗಾವಣೆಯದ ಇತರ ಸಿಬ್ಬಂದಿಗಳಿಗೆ ಆಸ್ಪತ್ರೆಯ ಸಿಬ್ಬಂದಿಗಳು ಬೀಳ್ಕೊಡುಗೆ ಸನ್ಮಾನ ನೀಡಿದರು.

ಆಳಂದ: ಹಾವು ಕಡಿತ ಪ್ರಕರಣ ಸಂಭವಿಸಿದಾಗ ಸಾಂಪ್ರದಾಯಿಕ ಚಿಕಿತ್ಸೆ ಹೋರಹೋಗದೆ ತಕ್ಷಣಕ್ಕೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ ಸಕಾಲಕ್ಕೆ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು ಎಂದು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಡಾ. ಉಮಾಕಾಂತ ಅವರು ಸಾರ್ವಜನಿಕರಿಗೆ ಸಲಹೆ ನೀಡಿದರು.

ಪಟ್ಟಣದ ಮಟಕಿ ರಸ್ತೆಯಲ್ಲಿರುವ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಈಚೆಗೆ ಹಮ್ಮಿಕೊಂಡ ಮುಖ್ಯ ಆಡಳಿತಾಧಿಕಾರಿ ಡಾ. ಮಹಾಂತಪ್ಪ ಹಾಳಮಳಿ ಅವರ ಬಡ್ತಿ ವರ್ಗಾವಣೆ ಪ್ರಯುಕ್ತ ಹಮ್ಮಿಕೊಂಡ ಬೀಳ್ಕೊಡುಗೆ ಸನ್ಮಾನ ಕೈಗೊಂಡು ಅವರು ಮಾತನಾಡಿದರು.

ಆಸ್ಪತ್ರೆಯಲ್ಲಿ ಆಂಟಿ ಸ್ನೇಕ್ ವೆನಮ್ (ಎಎಸ್‍ವಿ), ಸೇರಿದಂತೆ ಅಧುನಿಕ ಚಿಕಿತ್ಸಾ ಸೌಲಭ್ಯಗಳಿದ್ದರೂ, ಜನರು ಸಾಂಪ್ರದಾಯಿಕ ಗಿಡಮೂಲಿಕೆ ಚಿಕಿತ್ಸೆ ಅಥವಾ ಮಂತ್ರವಾದಿಗಳನ್ನು ಅವಲಂಬಿಸುವುದರಿಂದ ತಡವಾಗಿ ಆಸ್ಪತ್ರೆಗೆ ಆಗಮಿಸುತ್ತಿದ್ದಾರೆ, ಇದು ಗಂಭೀರ ಪರಿಣಾಮಗಳಿಗೆ ಕಾರಣವಾಗುತ್ತದೆ. ರಸೆಲ್ ವೈಪರ್, ಕಾಮನ್ ಕ್ರೇಟ್, ಮತ್ತು ನಾಗರ ಹಾವುಗಳಿಂದ ಹೆಚ್ಚಿನ ವಿಷಕಾರಕÀ ಪ್ರಕರಣಗಳು ಕಂಡುಬರುತ್ತವೆ. ಆಸ್ಪತ್ರೆಯಲ್ಲಿ ನ್ಯೂರೋಟಾಕ್ಸಿಕ್ ಮತ್ತು ಹಿಮೋಟಾಕ್ಸಿಕ್ ವಿಷದ ಚಿಕಿತ್ಸೆಗೆ ಸೂಕ್ತ ವ್ಯವಸ್ಥೆ ಇದೆ.

“ಡಾ. ಮಾಂತಪ್ಪ ಅವರ ನಾಯಕತ್ವದಲ್ಲಿ ಆಸ್ಪತ್ರೆಯ ಆಡಳಿತ ಮತ್ತು ಸೇವೆಯ ಗುಣಮಟ್ಟ ಗಣನೀಯವಾಗಿ ಸುಧಾರಿತವಾಯಿತು. ಅವರ ಮಾರ್ಗದರ್ಶನವು ನಮಗೆ ಸದಾ ಸ್ಫೂರ್ತಿಯಾಗಿರುತ್ತದೆ ಎಂದರು.

ಆಸ್ಪತ್ರೆಯ ಗುಣಮಟ್ಟವನ್ನು ಉನ್ನತಿ: ಡಾ. ಹಾಳಮಳಿ

ಪದನ್ಮೂತಿ ವರ್ಗಾವಣೆ ಬೀಳ್ಕೊಡುಗೆ ಸನ್ಮಾನ ಸ್ವೀಕರಿಸಿದ ಡಾ. ಮಹಾಂತಪ್ಪ ಹಾಳಮಾಳಿ ಅವರು ಮಾತನಾಡಿ, ಹಾವು ಕಡಿದ ನಂತರ ಮೊದಲ ಕೆಲವು ಗಂಟೆಗಳು (ಗೋಲ್ಡನ್ ಅವರ್ಸ್) ಚಿಕಿತ್ಸೆಗೆ ನಿರ್ಣಾಯಕವಾಗಿದ್ದು, ತಕ್ಷಣ ಆಸ್ಪತ್ರೆಗೆ ಆಗಮಿಸುವುದು ಜೀವ ಉಳಿಸಬಹುದು. ಸರ್ಪವನ್ನು ಗುರುತಿಸಲು   ಚಿತ್ರ ತೆಗೆಯುವುದು ಚಿಕಿತ್ಸೆಗೆ ಸಹಾಯಕವಾಗುತ್ತದೆ ಎಂದು ಸಲಹೆ ನೀಡಿದರು.

ತಮ್ಮ ಸೇವಾ ಅವಧಿಯಲ್ಲಿ ಜನರ ಸಹಕಾರ, ಸಿಬ್ಬಂದಿಗಳ ಸಮರ್ಪಣೆ, ಮತ್ತು ಆಸ್ಪತ್ರೆಯ ಉತ್ತಮ ಆಡಳಿತದಿಂದಾಗಿ ಉನ್ನತ ವೈದ್ಯಕೀಯ ಸೇವೆಯನ್ನು ಒದಗಿಸಲು ಸಾಧ್ಯವಾಯಿಗಿದೆ ಎಂದರು. ಇಲ್ಲಿಯ ನನ್ನ ಸೇವೆ ಒಂದು ಅನನ್ಯ ಅನುಭವವಾಗಿತ್ತು. ಇಲ್ಲಿಯ ವೈದ್ಯರು ಮತ್ತು ಸಿಬ್ಬಂದಿಗಳ ತಂಡವು ತಮ್ಮ ಕರ್ತವ್ಯದಲ್ಲಿ ಅಪಾರ ಸಮರ್ಪಣೆ ತೋರಿದ್ದಾರೆ. ಜನರಿಂದ ದೊರೆತ ಸಹಕಾರ ಮತ್ತು ನಂಬಿಕೆಯಿಂದಾಗಿ ಆಸ್ಪತ್ರೆಯ ಗುಣಮಟ್ಟವನ್ನು ಉನ್ನತೀಕರಿಸಲು ಸಾಧ್ಯವಾಯಿತು. ಈ ಆಸ್ಪತ್ರೆಯ ವೈದ್ಯರಿಗೆ ತಮ್ಮ ಕೌಶಲ್ಯವನ್ನು ವೃದ್ಧಿಸಿಕೊಳ್ಳಲು ಉತ್ತಮ ಅವಕಾಶವಿದೆ, ಮತ್ತು ಇದನ್ನು ಸದುಪಯೋಗಪಡಿಸಿಕೊಂಡರೆ ಇನ್ನಷ್ಟು ಉನ್ನತ ಸೇವೆ ಸಾಧ್ಯ” ಎಂದು ಹೇಳಿದರು.

“ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ಒದಗಿಸುವುದು, ಆಸ್ಪತ್ರೆಯ ಸೌಲಭ್ಯಗಳನ್ನು ಸುಧಾರಿಸುವುದು, ಮತ್ತು ಸಿಬ್ಬಂದಿಗಳಿಗೆ ಸೂಕ್ತ ತರಬೇತಿ ನೀಡುವುದು ನಮ್ಮ ಆದ್ಯತೆಯಾಗಿತ್ತು. ಈ ಎಲ್ಲಾ ಪ್ರಯತ್ನಗಳಿಗೆ ಸಿಬ್ಬಂದಿಗಳ ಸಹಕಾರವೇ ಕಾರಣ” ಎಂದು ಅವರು ಕೃತಜ್ಞತೆಯಿಂದ ನೆನಪಿಸಿದರು.

ಸನ್ಮಾನ ಕಾರ್ಯಕ್ರಮದಲ್ಲಿ ಡಾ.ಮಹಾಂತಪ್ಪ ಹಾಳಮಳಿ ಸೇರಿದಂತೆ ಆಸ್ಪತ್ರೆಯ ವರ್ಗಾಯಿತ ಸಿಬ್ಬಂದಿ ಶ್ರೀಕಾಂತ ಕೆಂಗೇರಿ ಭೂಸನೂರ, ಶರಣು ಪ್ಯಾಟಿ ಮತ್ತು ಪ್ರಕಾಶ ಜಾಧವ ಅವರನ್ನು ಆಸ್ಪತ್ರೆಯ ವೈದ್ಯರು, ದಾದಿಯರು, ಮತ್ತು ಇತರ ಸಿಬ್ಬಂದಿಗಳು ಶಾಲು ಹೊದಿಸಿ, ಸ್ಮರಣಿಕೆಯನ್ನು ನೀಡಿ ಗೌರವಿಸಿದರು.

Comments are closed.

Don`t copy text!