ಡಿಜಿಟಲ್ ವಂಚನೆಯ ಕರಿನೆರಳು: 21 ಸಾವಿರ ಪಾವತಿಸಿದರೆ 1.500,000ಲಕ್ಷ ತಿಂಗಳಿಗೆ ಹಣದ ಆಮಿಷ್ಯ
ಜನರ ಹಣವನ್ನು ರಕ್ಷಿಸಲು ಸರ್ಕಾರಿ ಸಂಸ್ಥೆಗಳು ಏಕೆ ವಿಫಲವಾಗುತ್ತಿವೆ?*
ಆಳಂದ: ಫೇಸ್ ಖಾತೆಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಇನ್‍ಫೋಸಿಸನ ನಾರಾಯಣ ಮೂರ್ತಿ, ಕೇಂದ್ರ ಸಚಿವ ನಿತೀನ ಗಡ್ಕರಿ ಸೇರಿ ಹಲವು ಪ್ರಮುಖರ ಮಾತನಾಡಿದ ಡೀಫ್‍ಫೇಕ್ ವಿಡಿಯೂ ಮೂಲಕ 21 ಸಾವಿರ ಪಾವತಿಸಿದರೆ ತಿಂಗಳಿಗೆ 1.500,000 ಲಕ್ಷ ರೂಪಾಯಿ ದೊರೆಯಲಿದೆ ಎಂಬ ವಿಡಿಯೋ ಸದ್ದುಮಾಡುತ್ತಿದೆ.
ಸಾಮಾಜಿಕ ಜಾಲ ತಾಣದಲ್ಲಿ ಪ್ರಧಾನಿ, ಹಣಕಾಸು ಸಚಿವೆÀ ಸೇರಿ ಹಲವರಿಂದ ಹಣ ಹೂಡಿಕೆ ಯೋಜನೆ ಲಾಂಚ್: ಡೀಫ್ ಫೇಕ್ ವಿಡಿಯೋ ಸದ್ದು
ಆಳಂದ: ಸಾಮಾಜಿಕ ಜಾಲ ತಾಣದಲ್ಲಿ ಪ್ರಧಾನಿ, ಹಣಕಾಸು ಸಚಿವೆÀ, ಕೇಂದ್ರ ಸಚಿವ ನಿತೀನ ಗಡ್ಕರಿ ಸೇರಿ ಹಲವರಿಂದ ಹಣ ಹೂಡಿಕೆ ಯೋಜನೆ ಲಾಂಚ್ ಎಂಬ ಸುಳ್ಳಾದ ಹಲವು ಡೀಫ್ ಫೇಕ್ ವಿಡಿಯೋ ವೈರಲ್ ಸದ್ದು ಮಾಡುತ್ತಿದೆ.
ಡಿಜಿಟಲ್ ಇಂಡಿಯಾದ ಕನಸು ಭಾರತವನ್ನು ತಂತ್ರಜ್ಞಾನದ ಶಕ್ತಿಯೊಂದಿಗೆ ಸಬಲಗೊಳಿಸುವ ಗುರಿಯನ್ನು ಹೊಂದಿದೆ. ಆದರೆ, ಈ ಕನಸಿನ ಮೇಲೆ ಕರಿನೆರಳು ಬೀರುತ್ತಿರುವ ಡಿಜಿಟಲ್ ವಂಚನೆಗಳು ಜನರ ಜೀವನಾಧಾರವಾದ ಹಣವನ್ನು ಲೂಟಿ ಮಾಡುತ್ತಿವೆ.
ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‍ರಂತಹ ಪ್ರಮುಖ ವ್ಯಕ್ತಿಗಳ ಹೆಸರಿನಲ್ಲಿ ನಕಲಿ ವೀಡಿಯೊಗಳನ್ನು ತಯಾರಿಸಿ, ಸರ್ಕಾರಿ ಯೋಜನೆಗಳ ಭರವಸೆಯೊಂದಿಗೆ ಜನರನ್ನು ಆಕರ್ಷಿಸುವ ವಂಚಕರು, ಸಾಮಾಜಿಕ ಜಾಲತಾಣಗಳಾದ ಫೇಸ್‍ಬುಕ್ ಮತ್ತು ಎಕ್ಸ್‍ನಂತಹ ವೇದಿಕೆಗಳನ್ನು ದುರ್ಬಳಕೆ ಮಾಡಿಕೊಂಡು ಫೇಕ್ ವಿಡಿಯೋಗಳು ಹರಿದಾಡುತ್ತಿರುವುದು ಜನ ಸಾಮಾನ್ಯರಲ್ಲಿ ಗೊಂದಲ ಸೃಷ್ಟಿಸಿದೆ.
ಪ್ರಧಾನಿ ಮಂತ್ರಿ ಮೋದಿ, ನಿರ್ಮಲಾ ಸೀತಾರಾಮನ್ ನಾರಾಯಣ ಮೂರ್ತಿ ನಿತೀನ ಗಡ್ಕರಿ ಸೇರಿ ಹಲವರ ಮಾತನಾಡಿದಂತ ನಕಲಿ ವಿಡಿಯೋಗಳನ್ನು ಬಳಸಿ, ಸರ್ಕಾರಿ ಹೂಡಿಕೆ ಯೋಜನೆಯ ಭರವಸೆಯೊಂದಿಗೆ ಜನರನ್ನು ಆಕರ್ಷಿಸುತ್ತವೆ. ಈ ವೀಡಿಯೊಗಳು ಸೀತಾರಾಮನ್ ಸೇರಿ ಪ್ರಮುಖರು ಯಾವುದೇ ಯೋಜನೆಯನ್ನು ಒತ್ತಿಹೇಳದಿದ್ದರೂ, ಆಕರ್ಷಕ ಆದಾಯದ ಭರವಸೆಯೊಂದಿಗೆ ಜನರನ್ನು ಗೊಂದಲಕ್ಕೊಳಪಡಿಸುತ್ತವೆ.
ಜನರು ತಮ್ಮ ಖಾತೆಯ ವಿವರಗಳನ್ನು ಅಥವಾ ಒಟಿಪಿಯನ್ನು ಹಂಚಿಕೊಂಡ ತಕ್ಷಣ, ವಂಚಕರು ಖಾತೆಯಿಂದ ಹಣವನ್ನು ಕದಿಯುವುದು ಸಾಮಾನ್ಯವಾಗಿದೆ. ಇದನ್ನು ತಪ್ಪಿಸಿಕೊಳ್ಳಲು ಸಾರ್ವಜನಿಕರೆ ಮುಂಜಾಗೃತ ಕ್ರಮವನ್ನು ಅನುಸರಿಸಬೇಕಿದೆ.
ಡಿಜಿಟಲ್ ಅರೆಸ್ಟ್: ಇತ್ತೀಚಿನ ಭಯಾನಕ ತಂತ್ರ:
ಇತ್ತೀಚಿನ “ಡಿಜಿಟಲ್ ಅರೆಸ್ಟ್” ವಂಚನೆಯು ಜನರಲ್ಲಿ ಭೀತಿಯನ್ನು ತುಂಬುವ ಒಂದು ಭಯಾನಕ ತಂತ್ರವಾಗಿದೆ. ವಂಚಕರು ತಾವು ಸಿಬಿಐ, ಇಡಿ, ಅಥವಾ ಪೆÇಲೀಸ್ ಅಧಿಕಾರಿಗಳೆಂದು ಭಾಸವಾಗಿ, ಫೆÇೀನ್ ಕರೆ, ವಾಟ್ಸಾಪ್ ಸಂದೇಶ, ಅಥವಾ ವೀಡಿಯೊ ಕರೆಯ ಮೂಲಕ ಜನರನ್ನು ಸಂಪರ್ಕಿಸುತ್ತಾರೆ. ಉದಾಹರಣೆಗೆ, 2024ರ ನವೆಂಬರ್‍ನಲ್ಲಿ, ಹೈದರಾಬಾದ್‍ನ 67 ವರ್ಷದ ಭಾರತಿ ಬಾಯಿ ಅಗರವಾಲ್ ಎಂಬ ಮಹಿಳೆಯನ್ನು 17 ದಿನಗಳ ಕಾಲ “ಡಿಜಿಟಲ್ ಅರೆಸ್ಟ್”ನಲ್ಲಿ ಇರಿಸಲಾಗಿತ್ತು. ಸಿಬಿಐ ಅಧಿಕಾರಿಗಳೆಂದು ಭಾಸವಾದ ವಂಚಕರು, ಆಕೆಯ ಆಧಾರ್‍ಗೆ ಸಂಬಂಧಿಸಿದ ಫೆÇೀನ್ ಸಂಖ್ಯೆಯು ಹಣದ ಲಾಂಡರಿಂಗ್‍ನಲ್ಲಿ ಭಾಗಿಯಾಗಿದೆ ಎಂದು ಆರೋಪಿಸಿ, ₹55 ಕೋಟಿಯನ್ನು ಲೂಟಿ ಮಾಡಿದ್ದಾರೆ. ಇಂತಹ ಘಟನೆಗಳು ಜನರಿಗೆ ತಕ್ಷಣ ಹಣ ಪಾವತಿಸದಿದ್ದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂಬ ಭಯವನ್ನು ತುಂಬುತ್ತವೆ.
ಸರ್ಕಾರಿ ಸಂಸ್ಥೆಗಳ ವೈಫಲ್ಯದ ಕಥೆ:
ಈ ರೀತಿಯ ವಂಚನೆಗಳನ್ನು ತಡೆಗಟ್ಟಲು ಸರ್ಕಾರಿ ಸಂಸ್ಥೆಗಳು ವಿಫಲವಾಗಿರುವುದಕ್ಕೆ ಹಲವಾರು ಕಾರಣಗಳಿವೆ.
ವಿಫಲಕ್ಕೆ ಮೊದಲನೆಯದಾಗಿ, ಈ ವಂಚನೆಗಳು ಕೇವಲ ಭಾರತದ ಒಳಗಿನಿಂದಲೇ ಆಗುತ್ತಿಲ್ಲ; ಕಾಂಬೋಡಿಯಾ, ಮಯನ್ಮಾರ್, ಮತ್ತು ಲಾವೋಸ್‍ನಂತಹ ದೇಶಗಳಿಂದ ಕಾರ್ಯನಿರ್ವಹಿಸುವ ಸಂಘಟಿತ ಅಪರಾಧ ಗುಂಪುಗಳು ಇದರ ಹಿಂದಿವೆ. ಈ ಅಂತರರಾಷ್ಟ್ರೀಯ ಸಂಪರ್ಕವು ತನಿಖೆಯನ್ನು ಜಟಿಲಗೊಳಿಸುತ್ತದೆ, ಏಕೆಂದರೆ ಭಾರತೀಯ ಸಂಸ್ಥೆಗಳಿಗೆ ಈ ದೇಶಗಳಲ್ಲಿ ಕಾನೂನು ಕ್ರಮಕ್ಕೆ ಸೀಮಿತ ಅಧಿಕಾರವಿದೆ ಎಂದು ಸೈಬರ್ ನಿಯಂತ್ರಣ ತಜ್ಞರದ್ದಾಗಿದೆ.
ಎರಡನೆಯದಾಗಿ, ಸೈಬರ್ ಕ್ರೈಂ ತನಿಖಾ ಘಟಕಗಳಿಗೆ ಸಾಕಷ್ಟು ತಾಂತ್ರಿಕ ಸಂಪನ್ಮೂಲಗಳು, ತರಬೇತಿ, ಮತ್ತು ಸಿಬ್ಬಂದಿಯ ಕೊರತೆಯಿದೆ. ಉದಾಹರಣೆಗೆ, ಬ್ಯಾಂಕ್‍ಗಳು ವಂಚನೆಗೆ ಸಂಬಂಧಿಸಿದ ಡೇಟಾವನ್ನು ಪಿಡಿಎಫ್ ಅಥವಾ ಕಾಗದದ ರೂಪದಲ್ಲಿ ಒದಗಿಸುತ್ತವೆ, ಇದು ತನಿಖೆಯನ್ನು ಮಂದಗೊಳಿಸುತ್ತದೆ. ಡೇಟಾವನ್ನು ಸಿಎಸ್‍ವಿ ಅಥವಾ ಎಕ್ಸ್‍ಎಲ್‍ಎಸ್ ರೂಪದಲ್ಲಿ ಒದಗಿಸಿದರೆ ತನಿಖೆ ತ್ವರಿತವಾಗಬಹುದು, ಆದರೆ ಇಂತಹ ಸರಳ ಸುಧಾರಣೆಗಳನ್ನೂ ಜಾರಿಗೆ ತರಲಾಗಿಲ್ಲ ಎಂದು ಸೈಬರ್ ವಲಯದಲ್ಲಿ ವಿಶ್ಲೇಷಸಲಾಗಿದೆ.
ಮೂರನೆಯದಾಗಿ, ಸಾಮಾಜಿಕ ಜಾಲತಾಣ ವೇದಿಕೆಗಳಾದ ಫೇಸ್‍ಬುಕ್ ಮೇಲಿನ ಕಾನೂನು ಚೌಕಟ್ಟಿನ ದುರ್ಬಲತೆಯೇ ಒಂದು ಪ್ರಮುಖ ಲೋಪ. ಐಟಿ ಕಾಯ್ದೆ 2000ರ ಸೆಕ್ಷನ್ 79 ರ ಅಡಿಯಲ್ಲಿ, ಈ ವೇದಿಕೆಗಳು “ಸೇಫ್ ಹಾರ್ಬರ್” ರಕ್ಷಣೆಯನ್ನು ಪಡೆಯುತ್ತವೆ, ಇದರಿಂದಾಗಿ ಅವು ತಮ್ಮ ವೇದಿಕೆಯಲ್ಲಿ ಹರಡುವ ನಕಲಿ ಜಾಹೀರಾತುಗಳಿಗೆ ಜವಾಬ್ದಾರಿಯಿಂದ ಮುಕ್ತವಾಗಿವೆ. ಫೇಸ್‍ಬುಕ್‍ನಂತಹ ಕಂಪನಿಗಳು ಎಐ-ಆಧಾರಿತ ಜಾಹೀರಾತು ಪರಿಶೀಲನೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರದಿರುವುದು ಈ ವಂಚನೆಗಳಿಗೆ ಪ್ರೇರಣೆಯಾಗಿದೆ ಎನ್ನಲಾಗಿದೆ.
ನಾಲ್ಕನೆಯದಾಗಿ, ಜನರಲ್ಲಿ ಜಾಗೃತಿಯ ಕೊರತೆಯು ವಂಚಕರಿಗೆ ಸುಲಭ ಗುರಿಯನ್ನು ಒದಗಿಸುತ್ತದೆ. ಆಕರ್ಷಕ ಆದಾಯದ ಭರವಸೆ, ಭಯ ತುಂಬುವ ಕರೆಗಳು, ಮತ್ತು ಸರ್ಕಾರಿ ಅಧಿಕಾರಿಗಳೆಂದು ಭಾಸವಾಗುವ ವಂಚಕರ ತಂತ್ರಗಳಿಗೆ ಸಾಮಾನ್ಯ ಜನರು ಸುಲಭವಾಗಿ ಬಲಿಯಾಗುತ್ತಾರೆ. ಸರ್ಕಾರವು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರೂ, ಇವು ಗ್ರಾಮೀಣ ಪ್ರದೇಶಗಳಿಗೆ ತಲುಪಿಲ್ಲ ಎನ್ನಲಾಗಿದೆ.
2022-2025ರ ಅಂಕಿಅಂಶಗಳು: ವಂಚನೆಯ ಭೀಕರ ಚಿತ್ರ ಭಾರತವಂದರಲ್ಲೇ ವೊಂದರಲ್ಲೇ- 2022ರಲ್ಲಿ ರೂಪಾಯಿ 2,306 ಕೋಟಿ ಆನ್‍ಲೈನ್ ವಂಚನೆಗಳಿಂದ ಲೂಟಿಯಾಗಿದ್ದು, 5,14,741 ದೂರುಗಳು ದಾಖಲಾಗಿವೆ. 2023ರಲ್ಲಿ 7,496 ಕೋಟಿ ರೂಪಾಯಿ ಲೂಟಿಯಾಗಿದ್ದು, 11,31,221 ದೂರುಗಳು ರಾಷ್ಟ್ರೀಯ ಸೈಬರ್ ಕ್ರೈಂ ರಿಪೆÇೀಟಿರ್ಂಗ್ ಪೆÇೀರ್ಟಲ್ (ಓಅಖP)ಗೆ ಸಲ್ಲಿಕೆಯಾಗಿವೆ. 2024 (ಜನವರಿ-ಏಪ್ರಿಲ್)*: 1,750 ಕೋಟಿ gರೂಪಾಯಿ ಲೂಟಿಯಾಗಿದ್ದು, 7,40,957 ದೂರುಗಳು ದಾಖಲಾಗಿವೆ. 2024 (ಜನವರಿ-ಸೆಪ್ಟೆಂಬರ್)*: ₹11,333 ಕೋಟಿ ಲೂಟಿಯಾಗಿದ್ದು, 12 ಲಕ್ಷ ದೂರುಗಳು ದಾಖಲಾಗಿವೆ. 2021-2024 (ಒಟ್ಟಾರೆ)*: 27,914 ಕೋಟಿ ರೂಪಾಯಿಲೂಟಿಯಾಗಿದ್ದು, 30.05 ಲಕ್ಷ ದೂರುಗಳು ದಾಖಲಾಗಿವೆ.
ಕರ್ನಾಟಕ: 2022ರಲ್ಲಿ 363 ಕೋಟಿ ರೂಪಾಯಿ ಆನ್‍ಲೈನ್ ವಂಚನೆಗಳಿಂದ ಲೂಟಿಯಾಗಿದ್ದು, ಬೆಂಗಳೂರು ನಗರವು 266 ಕೋಟಿ ನಷ್ಟದೊಂದಿಗೆ ಮೊದಲ ಸ್ಥಾನದಲ್ಲಿದೆ. 2023ರಲ್ಲಿ 662.1 ಕೋಟಿ ಆನ್‍ಲೈನ್ ವಂಚನೆಗಳಿಂದ ಲೂಟಿಯಾಗಿದೆ. 2024ರಲ್ಲಿನ ರಾಜ್ಯವಾರು ನಿಖರ ಅಂಕಿಅಂಶಗಳು ಸಾರ್ವಜನಿಕವಾಗಿ ಲಭ್ಯವಿಲ್ಲ, ಆದರೆ ರಾಷ್ಟ್ರೀಯ ಟ್ರೆಂಡ್‍ನ ಭಾಗವಾಗಿ ಕರ್ನಾಟಕದಲ್ಲಿ ವಂಚನೆಗಳು ಹೆಚ್ಚುತ್ತಿವೆ ಎನ್ನಲಾಗಿದೆ. 2022ರಲ್ಲಿ ಚೇತರಿಕೆ: ಕರ್ನಾಟಕದಲ್ಲಿ 46.87 ಕೋಟಿ ರೂಪಾಯಿ ಚೇತರಿಸಲಾಗಿದೆ.
ಹಣವನ್ನು ರಕ್ಷಿಸಿಕೊಳ್ಳುವುದು ಹೇಗೆ?:
ಡಿಜಿಟಲ್ ವಂಚನೆಗಳಿಂದ ರಕ್ಷಣೆ ಪಡೆಯಲು ಜನರು ಕೆಲವು ಸರಳ ಕ್ರಮಗಳನ್ನು ಅನುಸರಿಸಬೇಕು ಎಂದು ಅಂತರಾಷ್ಟ್ರೀಯ ಸಾಬರ ನಿಯಂತ್ರಣ ಎಕ್ಸಪರ್ಟ್ ಮತ್ತು ಹ್ಯಾಕ್ಟರ್‍ಗಳ ಪತ್ತೆ ಮಾಡುವÀ ಭಾರತದ ಅಮಿತ ದುಬ್ಬೆ ಅವರು ಹಲವು ಬ್ರಾಡಕಾಸ್ಟಿಂಗ್ ಮೂಲಕ ತಮ್ಮ ಸಲಹೆ ನೀಡಿದ್ದಾರೆ.
ಕರೆಯ ಮೂಲವನ್ನು ಪರಿಶೀಲಿಸಿ: ಯಾವುದೇ ಸರ್ಕಾರಿ ಅಧಿಕಾರಿಯೆಂದು ಕರೆ ಮಾಡಿದರೆ, ಅವರ ಹೆಸರು, ಸಂಸ್ಥೆ, ಮತ್ತು ಸಂಪರ್ಕ ಸಂಖ್ಯೆಯನ್ನು ದಾಖಲಿಸಿ. ಅಧಿಕೃತ ಚಾನೆಲ್‍ಗಳ ಮೂಲಕ ಈ ವಿವರಗಳನ್ನು ಖಚಿತಪಡಿಸಿಕೊಳ್ಳಿ.
ತಕ್ಷಣದ ಪಾವತಿಯನ್ನು ತಪ್ಪಿಸಿ: ಯಾವುದೇ ಕಾನೂನು ಸಂಸ್ಥೆಯು ಫೆÇೀನ್ ಅಥವಾ ಆನ್‍ಲೈನ್‍ನಲ್ಲಿ ತಕ್ಷಣದ ಪಾವತಿಯನ್ನು ಕೇಳುವುದಿಲ್ಲ.
ವೈಯಕ್ತಿಕ ವಿವರಗಳನ್ನು ಹಂಚಿಕೊಳ್ಳಬೇಡಿ: ಆಧಾರ್ ಸಂಖ್ಯೆ, ಬ್ಯಾಂಕ್ ವಿವರಗಳು, ಅಥವಾ ಒಟಿಪಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.
ದೂರನ್ನು ದಾಖಲಿಸಿ: ಶಂಕಾಸ್ಪದ ಕರೆ ಅಥವಾ ಸಂದೇಶವನ್ನು ತಿತಿತಿ.ಛಿಥಿbeಡಿಛಿಡಿime.gov.iಟಿ ಅಥವಾ 1930ಗೆ ತಕ್ಷಣ ವರದಿ ಮಾಡಿ.
ಜಾಗೃತರಾಗಿರಿ: ಡಿಜಿಟಲ್ ಅರೆಸ್ಟ್ ಎಂಬುದು ಕಾನೂನಿನಲ್ಲಿ ಅಸ್ತಿತ್ವದಲ್ಲಿಲ್ಲ. ಯಾವುದೇ ಆಕರ್ಷಕ ಯೋಜನೆ ಅಥವಾ ಭಯ ತುಂಬುವ ಕರೆಗೆ ಸ್ಪಂದಿಸುವ ಮೊದಲು “ನಿಲ್ಲಿ, ಯೋಚಿಸಿ, ಕ್ರಮ ಕೈಗೊಳ್ಳಿ” ಎಂಬ ಪ್ರಧಾನಮಂತ್ರಿಯ ಸಲಹೆಯನ್ನು ಅನುಸರಿಸಿ.
ಡಿಜಿಟಲ್ ಇಂಡಿಯಾದ ಕನಸಿನ ಮೇಲಿನ ಆಶಾಕಿರಣ:
ಡಿಜಿಟಲ್ ಇಂಡಿಯಾದ ಕನಸು ಜನರ ಜೀವನವನ್ನು ಸುಗಮಗೊಳಿಸುವ ಗುರಿಯನ್ನು ಹೊಂದಿದೆ. ಆದರೆ, ಈ ವಂಚನೆಗಳು ಈ ಕನಸಿನ ಮೇಲೆ ಕರಿಮಸಿಯಾಗಿ ಪರಿಣಾಮ ಬೀರುತ್ತಿವೆ. ಸರ್ಕಾರಿ ಸಂಸ್ಥೆಗಳು, ಸಾಮಾಜಿಕ ಜಾಲತಾಣ ಕಂಪನಿಗಳು, ಮತ್ತು ಜನರು ಒಟ್ಟಾಗಿ ಕೆಲಸ ಮಾಡಿದರೆ ಮಾತ್ರ ಈ ಸವಾಲನ್ನು ಎದುರಿಸಲು ಸಾಧ್ಯ. ಇದು ಜನರಿಗೆ ಎಚ್ಚರಿಕೆಯಾಗಿರುವ ಜೊತೆಗೆ, ತಮ್ಮ ಹಣವನ್ನು ರಕ್ಷಿಸಿಕೊಳ್ಳಲು ಧೈರ್ಯದಿಂದ ಕ್ರಮ ಕೈಗೊಳ್ಳಲು ಪ್ರೇರೇಪಿಸಿಕೊಳ್ಳಬೇಕಿದೆ. ನಿಮ್ಮ ಹಣ ನಿಮ್ಮ ಕೈಯಲ್ಲಿದೆ – ಎಚ್ಚರಿಕೆಯಿಂದ ಇರಿ, ಸುರಕ್ಷಿತರಾಗಿರಿ! ಎನ್ನುತ್ತಾರೆ ಅಮೀತ ದುಬ್ಬೆ ಅವರು.
Comments are closed.